ಇಂಜಿನಿಯರ್ ಪದಕ್ಕೆ ಯಂತ್ರಜ್ಞ ಎಂಬ ಸಂವಾದಿ ಪದ ಬಳಸಿದರೆ ಹೇಗೆ ?

ದಿನಬಳಕೆ ಮಾತಿನಲ್ಲಿ ಕನ್ನಡ ಪದಗಳನ್ನು ಬಳಸಬೇಕೆಂಬ ಇಚ್ಛೆಯುಳ್ಳವರಿಗೆ ಕಷ್ಟ ಕೊಡುವ ಪದಗಳಲ್ಲಿ ಇಂಜಿನಿಯರ್ ಎಂಬ ಪದ ಒಂದು. `ಅಭಿಯಂತರ’ ಎಂಬ ಪದವನ್ನು ಇಂಜಿನಿಯರ್ ಎಂಬ ಇಂಗ್ಲಿಷ್ ಪದಕ್ಕೆ ಸಂವಾದಿಯಾಗಿ ಬಳಸುತ್ತಾರೆ. ಸರ್ಕಾರಿ ಕಛೇರಿಗಳಲ್ಲೂ `ಕಾರ್ಯನಿರ್ವಾಹಕ ಆಭಿಯಂತರರು’ (ಎಕ್ಸಿಕ್ಯೂಟಿವ್ ಇಂಜಿನಿಯರ್) ಎಂಬ ಪದದ ಬಳಕೆಯನ್ನು ನಾವು ನೋಡಬಹುದು. ಆದರೆ ಸಾಮಾನ್ಯ ಮಾತುಗಳಲ್ಲಿ ಇಂಜಿನಿಯರ್, ಇಂಜಿನಿಯರಿಂಗ್ ಪದವೇ ಹೆಚ್ಚು ಚಾಲ್ತಿಯಲ್ಲಿರುವುದನ್ನು ನಾವು ಗಮನಿಸುತ್ತೇವೆ. `ಅಭಿಯಂತರ’ ಪದದ ಅರ್ಥವೆಂದರೆ ಯಂತ್ರಕ್ಕೆ ಹತ್ತಿರವಾದವನು ಎಂದು ಅರ್ಥ. ಅಭಿ+ಯಂತರ( ಯಂತ್ರ) ಎಂದು ಇದನ್ನು ಬಿಡಿಸಬಹುದು. […]

ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ.

(ಕೊತ್ತಿ ಅಂದರೆ ಬೆಕ್ಕು. ಮೈಸೂರು ಕಡೆಯ ಕೆಲವು ಭಾಗಗಳಲ್ಲಿ ಬೆಕ್ಕಿಗೆ ಕೊತ್ತಿ ಎಂಬ ಪದವನ್ನೇ ಹೆಚ್ಚಾಗಿ ಬಳಸುತ್ತಾರೆ.) ಕೆಲವು ಸಲ ನಮಗೆ ನಮಗಿಂತ ಹೆಚ್ಚು ವಯಸ್ಸು, ಅನುಭವ ಅಧಿಕಾರವುಳ್ಳವರ ಮೇಲೆ ಕೋಪ ಬಂದರೆ ಅದನ್ನು ಅವರ ಮೇಲೆ ತೋರಿಸಲಾಗದೆ ಕಸಿವಿಸಿ ಪಡುತ್ತಿರುತ್ತೇವೆ. ಅಂತಹ ಹೊತ್ತಿನಲ್ಲಿ ನಮಗಿಂತ ಕಡಿಮೆ ವಯಸ್ಸು, ಅಧಿಕಾರ, ಅನುಭವ ಇರುವವರೇನಾದೂ ನಮ್ಮ ಎದುರಿಗೆ ಬಂದರೆ ಅವರ ಮೇಲೆ ಆ ಕೋಪವನ್ನು ತೋರಿಸಿಕೊಂಡು, ವಿಚಿತ್ರ ಸನ್ನಿವೇಶಗಳನ್ನು ಸೃಷ್ಟಿ ಮಾಡಿಕೊಂಡುಬಿಡುತ್ತೇವೆ! ನಾವು ಯಾರ ಮೇಲೆ ರೇಗುತ್ತಿರುತ್ತೇವೋ ಅವರಿಗೆ […]

Colorimeter

ಬಣ್ಣಶಕ್ತಿ ಮಾಪಕ – ಯಾವುದೇ ಬಣ್ಣದ ತೀಕ್ಷ್ಣತೆಯನ್ನಾದರೂ ಮೂರು ಮೂಲಭೂತ ಬಣ್ಣಗಳ (ಕೆಂಪು, ಹಸುರು, ನೀಲಿ) ನೆಲೆಯಲ್ಲಿ(ಅಂದರೆ ಪ್ರತಿಯೊಂದರ ಪರಿಭಾಷೆಯಲ್ಲಿ) ನೀಡುವ ಒಂದು ಉಪಕರಣ.

Colloid

ಕಲಿಲ – ಇದು ಒಂದು ರೀತಿಯ ಮಿಶ್ರಣ. ಒಂದು ವಸ್ತು ಮತ್ತು ಆ ವಸ್ತುವಿನೊಳಗೆ ಅದರ ಎಲ್ಲೆಡೆಗೂ ವ್ಯಾಪಿಸಿರುವ ಆದರೆ ಕರಗದ ಕಣಗಳ ರೂಪದಲ್ಲಿಯೇ ಉಳಿದಿರುವ ಇನ್ನೊಂದು ವಸ್ತು – ಇವುಗಳ ಮಿಶ್ರಣ ಇದು. ಉದಾಹರಣೆಗೆ ಹಾಲು. ಹಾಲಿನಲ್ಲಿ ಕೊಬ್ಬಿನ ಕಣಗಳು ಕರಗದ ಕಣಗಳಾಗಿಯೇ ಇರುತ್ತವೆ.

Collision

ಢಿಕ್ಕಿ(ಸಂಘರ್ಷ) – ಅಣುಗಳು, ಪರಮಾಣುಗಳು ಮುಂತಾದವು ಮುಖಾಮುಖಿಯಾದಾಗ ಅವುಗಳಲ್ಲಿ ಉಂಟಾಗುವ ಪರಸ್ಪರ ಕ್ರಿಯೆ.

Colour photography

ಬಣ್ಣ ಛಾಯಾಚಿತ್ರ ಕಲೆ – ಒಂದು ತೆಳುವಾದ ಪೊರೆ ಅಥವಾ ಕಾಗದದ ಮೇಲೆ ಬಣ್ಣವುಳ್ಲ ಬಿಂಬಗಳನ್ನು ಮೂಡಿಸುವ ವಿಧಾನಗಳಲ್ಲಿ ಯಾವುದಾದರೂ ಒಂದು.

Colour blindness

ಬಣ್ಣಗುರುಡು – ಮನುಷ್ಯನ ಕಣ್ಣಿನ ಒಂದು ಸಮಸ್ಯೆ ಇದು. ಒಂದು ನಿರ್ದಿಷ್ಟ ಬಣ್ಣ ಅಥವಾ ಕೆಲವು ಬಣ್ಣಗಳನ್ನು ಗುರುತಿಸಲಾರದ ಕಣ್ಣಿನ ಸಮಸ್ಯೆ.

Colour

ಬಣ್ಣ – ಮನುಷ್ಯನ ಕಣ್ಣಿನ ಮೇಲೆ ಬೇರೆ ಬೇರೆ ತರಂಗಾಂತರಗಳ ಬೆಳಕು ಬಿದ್ದಾಗ ಉಂಟಾಗುವ ಇಂದ್ರಿಯ ಗ್ರಹಿಕೆ.

Cold trap

ಶೀತ ಪಂಜರ – ದ್ರವರೂಪೀ ಅನಿಲ ಅಥವಾ ಅಸಿಟೋನಿನಲ್ಲಿರುವ ಒಣ ಮಂಜುಗಡ್ಡೆ(ಹೆಪ್ಪುಗಟ್ಟಿಸಿದ ಇಂಗಾಲದ ಡೈ ಆಕ್ಸೈಡ್)ಯನ್ನು ಹೊಂದಿದ್ದು, ತುಂಬ ತಣ್ಣಗಿರುವ ಒಂದು ಕೊಳವೆ ಇದು. ಈ ಕೊಳವೆಯು ತನ್ನ ಮೂಲಕ ಚಿಲಸುವ ಆವಿಯನ್ನು ಹಿಡಿದು ದ್ರವರೂಪಕ್ಕೆ ತಂದುಬಿಡುತ್ತದೆ.

Cold cathode

ತಂಪು ಋಣವಿದ್ಯುದ್ವಾರ – ವಿದ್ಯುತ್ ತಂತಿಯ ಸಹಾಯದಿಂದ ಬಿಸಿ ಮಾಢದೇ ಇರುವ ಋಣ ವಿದ್ಯುದ್ವಾರ.

Page 113 of 140

Kannada Sethu. All rights reserved.