ಎತ್ತರ – ಸೂರ್ಯ ಅಥವಾ ಯಾವುದಾದರೂ ಆಕಾಶಕಾಯವು ಇರುವ ಎತ್ತರ..
ಪಾದರಸಮಿಶ್ರ ವಸ್ತು – ಪಾದರಸವಿರುವ ಮಿಶ್ರಲೋಹಕ್ಕೆ ಬಳಸುವ ಪದವಿದು.
ಸಮತಲಮಾಪಕ – ಒಂದು ಸಮತಲದಲ್ಲಿ ಧ್ರುವೀಕರಣಗೊಂಡ ಬೆಳಕಿನ ಧ್ರುವೀಕರಣದ ಸಮತಲವನ್ನು ಗೊತ್ತುಹಚ್ಚಲು ಬಳಸುವ ಒಂದು ಉಪಕರಣ.
ವಾಯುವೇಗಮಾಪಕ : ಅನಿಲ ಅಥವಾ ಹರಿಯುವ ದ್ರವವಸ್ತುವಿನ ವೇಗವನ್ನು ಅಳೆಯಲು ಬಳಸುವ ಉಪಕರಣ
ಋಣವಿದ್ಯುದಣು : ಋಣ ವಿದ್ಯುದಂಶವನ್ನು ಹೊಂದಿರುವ ಪರಮಾಣು
ಅಗೇಟ್ – ಸಿಲಿಕಾದ ಹರಳುಗಟ್ಟಿದ ರೂಪ ಇದು. ತುಂಬ ಗಟ್ಟಿಯಾದ ಪದಾರ್ಥವಾದ ಇದನ್ನು ಒಡವೆಗಳಲ್ಲಿ ಹಾಗೂ ಚಾಕು ಮುಂತಾದ ಪರಿಕರಗಳನ್ನು ಮಾಡುವ ಸಂದರ್ಭದಲ್ಲಿ ಬಳಸುತ್ತಾರೆ.
ಕ್ರಮವಿಧಿ – ನಿಖರವಾದ ಸೂಚನಾಪಟ್ಟಿಯೊಂದನ್ನು ಇಟ್ಟುಕೊಂಡು ಹಂತಹಂತವಾಗಿ ಸಮಸ್ಯೆಯೊಂದನ್ನು ಪರಿಹರಿಸುವ ಗಣಿತ ವಿಧಾನ.
ಮಿಶ್ರಲೋಹ : ಎರಡು ಅಥವಾ ಅದಕ್ಕಿಂತ ಹೆಚ್ಚು ಲೋಹಗಳಿಂದ ಕೂಡಿದ ವಸ್ತು.
Like us!
Follow us!