ಕೂದಲಗಲದಲ್ಲಿ ಚಲನೆ – ಕೂದಲಿನಷ್ಟು ಕಡಿಮೆ ವ್ಯಾಸವುಳ್ಳ ಅತಿ ತೆಳುವಾದ ಕೊಳವೆಗಳಲ್ಲಿ ದ್ರವಗಳು ಏರುವುದನ್ನು ಅಥವಾ ಇಳಿಯುವುದನ್ನು ವಿವರಿಸಲು ಬಳಸುವ ಪದ.
ರಕ್ಷಿತ ವಿದ್ಯುತ್ ತಂತಿ – ವಿದ್ಯುತ್ ಹರಿಯುವ ಒಂದು ತಂತಿಯನ್ನು ವಾಹಕದ ಒಂದು ಪದರ, ಅದರ ಮೇಲೆ ವಿದ್ಯುತ್ ರಕ್ಷಕದ ಒಂದು ಹೊದಿಕೆ ಹಾಕಿ ಭದ್ರ ಮಾಡಿರುವುದು.
ಕ್ಯಾಲೊರಿ – ಒಂದು ಗ್ರಾಂ ನೀರಿನ ಉಷ್ಣತೆಯನ್ನು ಒಂದು ಡಿಗ್ರಿ ಸೆಂಟಿಗ್ರೇಡ್‌ಗೆ ಏರಿಸಲು ಬೇಕಾದ ತಾಪದ ಪ್ರಮಾಣ. ಹಳೆಯ ಕಾಲದ ಈ ಮೂಲಮಾನವನ್ನು ಈಗ ಜೌಲ್ ಎಂಬ ಹೊಸ ಮೂಲಮಾನದಿಂದ ಸ್ಥಳಾಂತರಿಸಲಾಗಿದೆ.
ಛಾಯಾಚಿತ್ರಗ್ರಾಹಕ – ಛಾಯಾಚಿತ್ರಗಳನ್ನು ತೆಗೆಯಲು ಅಥವಾ ಚಲನಚಿತ್ರ ಬಿಂಬಗಳನ್ನು ಪ್ರಕಟಪಡಿಸಲು ಬಳಸುವ ಒಂದು ದೃಶ್ಯೋಪಕರಣ
ಕೆನಡಾ ಅಂಟು ಅಥವಾ ಗೋಂದು(ಗುಗ್ಗಳ) – ಗಾಜಿನಂತೆ ಕಾಣುವ ಹಳದಿ ಬಣ್ಣದ ಒಂದು ಅಂಟು ಪದಾರ್ಥ. ಸೂಕ್ಷದರ್ಶಕದಲ್ಲಿ ನೋಡಲಾಗುವ ವಸ್ತುಗಳನ್ನು ನೋಡುತಟ್ಟೆಗೆ ಏರಿಸುವಾಗ ಇದನ್ನು ಬಳಸುತ್ತಾರೆ. ಉತ್ತರ ಅಮೆರಿಕಾದ ಕಾಡುಗಳಲ್ಲಿ ಸಿಗುವ ಮರದಿಂದ ಇದನ್ನು ಪಡೆಯಲಾಗುವುದರಿಂದ ಈ ವಸ್ತುವಿಗೆ ಈ ಹೆಸರು ಬಂದಿದೆ.
ಉತ್ಪತ್ತಿಸುವ ಸ್ಥಾವರ – ತಾನು ಇಂಧನವನ್ನು ಸೇವಿಸುತ್ತಿರುವ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಅಧಿಕಾಧಿಕ ಬೀಜಕೇಂದ್ರಗಳನ್ನು ಉತ್ಪಾದಿಸುವ ಅಣುಸ್ಥಾವರ
ಪಕ್ಕದ ದಾರಿ – ಭೌತಶಾಸ್ತçದಲ್ಲಿ ಈ ಪದವನ್ನು ಸಾಮಾನ್ಯವಾಗಿ ವಿದ್ಯುತ್ತಿನ ಸಂದರ್ಭದಲ್ಲಿ ಬಳಸುತ್ತಾರೆ. ಇಲ್ಲಿ ಈ ಪದವು ಒಂದು ವಿದ್ಯುನ್ಮಂಡಲದ ಅಂಗ ಅಥವಾ ಅಂಗಗಳನ್ನು ಜೋಡಿಸುವ ಇನ್ನೊಂದು ದಾರಿಯನ್ನು ಸೂಚಿಸುತ್ತದೆ.
ತೇಲುವ ಗುಣ – ಒಂದು ವಸ್ತುವಿಗೆ ಇರುವಂತಹ ತೇಲುವ ಗುಣಲಕ್ಷಣ
Like us!
Follow us!