Alnico

ಅಲ್ನಿಕೋ : ಕಬ್ಬಿಣ, ಅಲ್ಯುಮಿನಿಯಂ, ನಿಕ್ಕಲ್, ಕೋಬಾಲ್ಟ್ ಮತ್ತು ತಾಮ್ರವನ್ನು ಒಳಗೊಂಡ ಒಂದು  ಸರಣಿಯ ವ್ಯಾಪಾರೀನಾಮ. ಇದನ್ನು ಶಾಶ್ವತ ಅಂiiಸ್ಕಾಂತಗಳನ್ನು ಮಾಡಲು ಬಳಸುತ್ತಾರೆ.

Alpha Irradiation

ಆಲ್ಫಾ ಪ್ರಕಾಶ : ಒಂದು ವಸ್ತುವನ್ನು ಆಲ್ಪಾ ಕಣಗಳ ಕಿರಣ ಸಮೂಹಕ್ಕೆ ಒಡ್ಡುವುದು.

ದೊರೆ ಮನಸ್ಸು, ಮರದ ನೆರಳು ಇದ್ಹಂಗಿರಲ್ಲ.

ಅಧಿಕಾರವುಳ್ಳವರು ತಮ್ಮ ಕೈಕೆಳಗಿನ ನೌಕರರನ್ನು ನಡೆಸಿಕೊಳ್ಳುವ ರೀತಿ ಯಾವಾಗಲೂ ಒಂದೇ ಸಮನಾಗಿರುವುದಿಲ್ಲ. ತಮ್ಮ ಆಜ್ಞಾನುವರ್ತಿಗಳನ್ನು ಅಧಿಕಾರವುಳ್ಳವರು ಇಂದು ಎಷ್ಟೇ ಆಪ್ತತೆಯಿಂದ ನಡೆಸಿಕೊಂಡರೂ ನಾಳೆ ಅದೇ ಆಪ್ತತೆ, ವಿಶ್ವಾಸಗಳಿಂದ ನಡೆಸಿಕೊಳ್ಳುತ್ತಾರೆ ಎಂದು ಖಚಿತವಾಗಿ ಹೇಳಲಾಗದು. ಸನ್ನಿವೇಶ ಬದಲಾದಾಗ ದೊರೆ/ಅಧಿಕಾರಿಗಳು ಇದ್ದಕ್ಕಿದ್ದಂತೆ ತಮ್ಮ ವರ್ತನೆಗಳನ್ನು ಬದಲಾಯಿಸುವ ಸಾಧ್ಯತೆ ಇರುತ್ತದೆ.

ಅಭಿಮಾನಿ ಕನ್ನಡತಿ ಹಾಗೂ ಅಲಂಕಾರ ಕನ್ನಡತಿ

ಕಾಲೇಜುಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುವುದು ಅನೇಕ ವರ್ಷಗಳಿಂದ ನಡೆದು ಬಂದ ಒಂದು ಪದ್ಧತಿ. ನಮ್ಮ ಮಹಾರಾಣಿ ವಿಜ್ಞಾನ ಕಾಲೇಜೂ(ಬೆಂಗಳೂರು) ಇದಕ್ಕೆ ಹೊರತಲ್ಲ. ನವೆಂಬರ್ ೧ನೆಯ ದಿವಸವು, ಪರೀಕ್ಷೆಯೋ, ಅರ್ಧವಾರ್ಷಿಕ ಪರೀಕ್ಷೆಯ ನಂತರದ ದೀರ್ಘ ರಜೆಯ ನಡುವೆ ಬಂದಾಗ ಅಂದೇ ರಾಜ್ಯೋತ್ಸವವನ್ನು ಆಚರಿಸಲು ಸಾಧ್ಯವಾಗುವುದಿಲ್ಲ.

Adiabatic change

ಶಕ್ತಿ ವಿನಿಮಯರಹಿತ ಬದಲಾವಣೆ  ವ್ಯವಸ್ಥೆಯಲ್ಲಿರುವ ಶಕ್ತಿಯು ಹೊರಗೆ ಹೋಗದೆ, ಹೊರಗಿನಿಂದ ಶಕ್ತಿಯು ಒಳಗೆ ಪ್ರವೇಶಿಸದೆ ನಡೆಯುವಂತಹ ಪ್ರಕ್ರಿಯೆ.

Aeriel(Antenna)

ಆಕರ್ಷಣ ತಂತಿ – ಬಾನುಲಿ, ದೂರದರ್ಶನಗಳಲ್ಲಿ ವಿದ್ಯುತ್ ಕಾಂತೀಯ ತರಂಗಗಳನ್ನು ಆಕರ್ಷಿಸಲು ಬಳಸುವ ತಂತಿ.

Aerodynamics

ವಾಯುಚಲನ ಶಾಸ್ತ್ರ  ವಾಯುವಿನಲ್ಲಿ ವಿಮಾನ, ರಾಕೆಟ್ಟು, ಕ್ಷಿಪಣಿ ಮುಂತಾದ ವಸ್ತುಗಳ ಚಲನೆ ಮತ್ತು ನಿಯಂತ್ರಣವನ್ನು ಕುರಿತ ಅಧ್ಯಯನ.

Aerosol

ವಾಯುಜಿಡ್ಡು  ಒಂದು ಅನಿಲದಲ್ಲಿ ಒಂದು ಘನವಸ್ತು ಅಥವಾ ದ್ರವವಸ್ತುವು ಅಲ್ಲಲ್ಲಿ ಹರಡಿಕೊಂಡ ಸ್ಥಿತಿಯಲ್ಲಿ, ಸುಲಭವಾಗಿ ಬೇರ್ಪಡಿಸಲಾಗದಂತೆ ಇದ್ದುಬಿಡುವುದು.

ಪಾಪದೂರಿಗೆ ಜಾರ್ಬಂಡೆ, ಪುಣ್ಯದೂರಿಗೆ ಏರ್ಬಂಡೆ

ಒಳ್ಳೆಯ ಕೆಲಸ ಮತ್ತು ಕೆಟ್ಟ ಕೆಲಸಗಳನ್ನು ಕುರಿತು ಎಚ್ಚರಿಕೆ ಕೊಡುವ ಒಂದು ಗಾದೆಮಾತಿದು. ಪಾಪ ಅಥವಾ ಕೆಟ್ಟದ್ದನ್ನು ಮಾಡುವುದು ಜಾರುಬಂಡೆ ಜಾರಿದಂತೆ ಸರಾಗ, ಮತ್ತು ಒಮ್ಮೆ ಶುರು ಮಾಡಿದರೆ ಮಧ್ಯೆ ನಿಲ್ಲಿಸಲು ಸಾಧ್ಯವಾಗದಂಥದ್ದು. ಅದೇ ಒಳ್ಳೆಯ ಕೆಲಸಗಳನ್ನು ಮಾಡುವುದೆಂದರೆ ಏರುಬಂಡೆ ಅಥವಾ ಬೆಟ್ಟ ಹತ್ತಿದಷ್ಟು ಕಷ್ಟಕರ ಮತ್ತು ಹಂತ ಹಂತವಾಗಿ ಮಾಡಬೇಕಾದ್ದು, ಒಂದೇ ಉಸುರಿಗೆ ಆಗುವಂಥದ್ದಲ್ಲ.

Aerospace

ವಾಯುಮಂಡಲ – ಭೂಮಿಯ ಸುತ್ತ ಇರುವ ವಾಯುಮಂಡಲ ಮತ್ತು ಅದರಾಚೆಗೆ ಇರುವ ಆಕಾಶ.

Page 116 of 119

Kannada Sethu. All rights reserved.