ನಾವು ಕಾಲೇಜಿನಲ್ಲಿ ಹೊಸ ಶೈಕ್ಷಣಿಕ ವರ್ಷ ಅಥವಾ ಹೊಸ ಅರ್ಧವರ್ಷ(ಸೆಮೆಸ್ಟರ್) ಶುರುವಾದಾಗ ಮೊದಲ ದಿನ, ಮಕ್ಕಳಿಗೆ ಒಂದು ಹಾಜರಿ ಹಾಳೆ ಕೊಟ್ಟು, ಅದರಲ್ಲಿ ಅವರ ಹೆಸರು ಬರೆಯಲು ಹೇಳುವುದು ವಾಡಿಕೆ. ಏಕೆಂದರೆ ವಿದ್ಯಾರ್ಥಿಗಳ ಅಧಿಕೃತ ಪ್ರವೇಶಾತಿ ಮಾಹಿತಿಯು ಕಾಲೇಜಿನ ಕಛೇರಿಯಿಂದ ನಮಗೆ ಸಿಗಲು ಕೆಲವು ಸಲ, ಸ್ವಲ್ಪ ಸಮಯ ಹಿಡಿಯುತ್ತದೆ, ಕಾರಣವೇನು ಗೊತ್ತೇ? ಆ ಶೈಕ್ಷಣಿಕ ವರ್ಷದ ಪ್ರವೇಶಾತಿ ಪ್ರಕ್ರಿಯೆಯು ಇನ್ನೂ ಚಾಲ್ತಿಯಲ್ಲಿರುತ್ತದೆ.
ಬಿಂಬದೋಷ – ಒಂದು ಮಸೂರ(ಉಬ್ಬು ಗಾಜು, ಅಥವಾ ತಗ್ಗು ಗಾಜು) ಅಥವಾ ಕನ್ನಡಿಯಿಂದ ರೂಪುಗೊಂಡಂತಹ ಬಿಂಬದಲ್ಲಿರುವ ದೋಷ.
ರಂಗುರಹಿತ ಬಣ್ಣ – ಯಾವುದೇ ರಂಗಿಲ್ಲದ ಬಣ್ಣ, ಅಂದರೆ ಕಪ್ಪು, ಬಿಳಿ ಅಥವಾ ಬೂದು ಬಣ್ಣ
ಸಂಗ್ರಾಹಕ ಕೋಶ – ವಿದ್ಯುತ್ ಹರಿಸುವುದರ ಮೂಲಕ ವಿದ್ಯುದಂಶ(ಚಾರ್‍ಜ್)ವನ್ನು ನೀಡಬಹುದಾದ ವಿದ್ಯುತ್ ಕೋಶ ಅಥವಾ ಬ್ಯಾಟರಿ ಇದು.
ವಕ್ರಗೊಳಿಸದ ಗುಣ – ವಸ್ತುಗಳಲ್ಲಿರುವ ಒಂದು ಗುಣಲಕ್ಷಣ. ಒಂದು ವಸ್ತುವು ತನ್ನ ಮೇಲೆ ಬಿದ್ದಂತಹ ಬೆಳಕನ್ನು ವಕ್ರೀಭವನಕ್ಕೆ(ರಿಫ್ರ್ಯಾಕ್ಷನ್) ಒಳಪಡಿಸದ ಒಂದು ಗುಣವಿದು.
ವಿಕಿರಣ ಪ್ರಚೋದನೆ _ ಒಂದು ವಸ್ತುವಿನಲ್ಲಿ ವಿಕಿರಣ(ರೇಡಿಯೇಷನ್)ವನ್ನು ಪ್ರಚೋದಿಸುವ ಪ್ರಕ್ರಿಯೆ.
ಪರಮ ಶೂನ್ಯ – ಸೈದ್ಧಾಂತಿಕವಾಗಿ ಸಾಧ್ಯವಾಗಬಹುದಾದ ಅತಿ ಕನಿಷ್ಠ ಉಷ್ಣತೆ.
Like us!
Follow us!