Black hole

ಕಪ್ಪು ಕುಳಿ – ಬಾಹ್ಯಾಕಾಶದಲ್ಲಿರುವ ಒಂದು ವಸ್ತು ಇದು. ತನ್ನದೇ ಗುರುತ್ವಶಕ್ತಿಗಳ ಅಡಿಯಲ್ಲಿ ಕುಸಿದಂತಹ ವಸ್ತು. ಇದು ಎಷ್ಟರ ಮಟ್ಟಿಗೆ ಕುಸಿದಿರುತ್ತದೆಂದರೆ ಇದರ ವಿಮೋಚನಾ ವೇಗವು ಬೆಳಕಿನ ವೇಗಕ್ಕೆ ಸಮನಾಗಿರುತ್ತದೆ (ವಿಮೋಚನಾ ವೇಗ = ಒಂದು ವಸ್ತುವಿನ ಗುರುತ್ವಾಕರ್ಷಣೆಯಿಂದ ಇನ್ನೊಂದು ವಸ್ತುವು ತಪ್ಪಿಸಿಕೊಂಡು ಹೋಗಲು ಹೊಂದಿರಬೇಕಾದ ಕನಿಷ್ಠ ವೇಗ).

Black light

ಕಪ್ಪು ಬೆಳಕು – ಇದು ವಿದ್ಯುತ್ಕಾಂತೀಯ ಅದೃಶ್ಯ ವಿಕಿರಣ(ಬೆಳಕು). ಇದು ಹೊಳಪಿನ ಕಾಂತಿ ಬೀರಬಲ(ಫ್ಲೋರೋಸೆಂಟ್) ವಸ್ತುಗಳ ಮೇಲೆ ಬಿದ್ದಾಗ ಅವು ಕಣ್ಣಿಗೆ ಕಾಣುವ ಬೆಳಕನ್ನು ಸೂಸುವಂತೆ ಮಾಡುತ್ತದೆ.  

Blind spot

ಕುರುಡು ಜಾಗ – ಕಣ್ಣಿನ ದೃಶ್ಯಪಟಲದಲ್ಲಿ ನರವು ಕಣ್ಣನ್ನು ಬಿಡುವಂತಹ ಜಾಗ.

Blanket

ಹೊದಿಕೆ – ಅಣುಸ್ಥಾವರದ ಕೇಂದ್ರವನ್ನು ಸುತ್ತುವರಿದಿರುವ ಫಲವತ್ತಾದ ವಸ್ತು. ಇದನ್ನು ಒಂದೋ ಹೊಸ ಇಂಧನವಸ್ತುವನ್ನು ಬೆಳೆಸಲು ಇಲ್ಲವೇ ಕೆಲವು ನ್ಯೂಟ್ರಾನುಗಳನ್ನು ಕೇಂದ್ರಕ್ಕೆ ಮರಳಿ ಪ್ರತಿಫಲಿಸಲು ಬಳಸುತ್ತಾರೆ.

ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬಂತು

ನಮ್ಮ ಮನಸ್ಸು ನಿಶ್ಚಿಂತೆಯಾಗಿರುವುದು ಎಷ್ಟು ಮುಖ್ಯ ಎಂಬುದನ್ನು ಸೂಚಿಸುವ ಗಾದೆಮಾತಿದು. ಸಂತೆ ಎಂದರೆ ತುಂಬ ಗೌಜಿ ಗದ್ದಲ ಇರುವ ಜಾಗ. ಅಲ್ಲಿ ನಿದ್ದೆ ಮಾಡುವುದು ಎಂದರೆ ಸಾಮಾನ್ಯವಾದ ಮಾತಲ್ಲ. ಆದರೆ ಮನುಷ್ಯನ ಮನಸ್ಸಿನಲ್ಲಿ ಯಾವುದೇ ಚಿಂತೆ ಇಲ್ಲದಿದ್ದಾಗ ಅವನು ಸಂತೆಯಂತಹ ಗಲಗಲ ಗಲಾಟೆಯ ಜಾಗದಲ್ಲೂ ನಿದ್ದೆ ಮಾಡಬಲ್ಲ.

ಪ್ರಣತಿ ಮತ್ತು ಕರ್ವಾಲೋ

ಪ್ರಣತಿ ನನ್ನ ಇಬ್ಬರು ಮಕ್ಕಳಲ್ಲಿ ಚಿಕ್ಕವಳು. ಈಗ ಅವಳಿಗೆ ಹದಿನೆಂಟು ವರ್ಷ. ಎರಡು ವರ್ಷಗಳ ಹಿಂದೆ ಅಂದರೆ ಅವಳಿಗೆ ಹದಿನಾರು ವರ್ಷವಾಗಿದ್ದಾಗ ನಡೆದಿದ್ದ ಪ್ರಸಂಗವೊಂದನ್ನು ಇಲ್ಲಿ ಬರೆಯುತ್ತಿದ್ದೇನೆ.

Bipolar electrode 

ದ್ವಿಧ್ರುವ ವಿದ್ಯುದ್ವಾರ  ವಿದ್ಯುತ್ ರಾಸಾಯನಿಕ ಕೋಶವೊಂದರಲ್ಲಿ ವಿದ್ಯುತ್ ಹರಿಯುವ ಒಂದು ಲೋಹದ ಪಟ್ಟಿ. ಆದರೆ ಇದನ್ನು ಆ ಕೋಶದ ಧನವಿದ್ಯುದ್ವಾರಕ್ಕಾಗಲೀ ಋಣವಿದ್ಯುದ್ವಾರಕ್ಕಾಗಲೀ ಜೋಡಿಸಿರುವುದಿಲ್ಲ. ಏಕೆಂದರೆ ವಿದ್ಯುತ್ ಹರಿಯುವಾಗ ಈ ಪಟ್ಟಿಯ ಒಂದು ಮುಖವು ಸಹಕಾರೀ ಋಣವಿದ್ಯುದ್ವಾರವಾಗಿ ಕೆಲಸ ಮಾಡಿದರೆ ಇನ್ನೊಂದು ಮುಖವು ಧನವಿದ್ಯುದ್ವಾರವಾಗಿ ಕೆಲಸ ಮಾಡುತ್ತದೆ.

Bipolar transistor

ದ್ವಿಧ್ರುವ ಟ್ರ್ಯಾನ್ಸಿಸ್ಟರು _ ಎಲೆಕ್ಟ್ರಾನುಗಳು ಮತ್ತು ರಂಧ್ರಗಳು ತುಂಬ ಅವಶ್ಯಕವಾದ ಪಾತ್ರಗಳನ್ನು ನಿರ್ವಹಿಸುವ ಒಂದು ಟ್ರ್ಯಾನ್ಸಿಸ್ಟರು, ಉದಾಹರಣೆಗೆ ಒಂದು ಕೂಡುಸ್ಥಳ(ಜಂಕ್ಷನ್) ಟ್ರ್ಯಾನ್ಸಿಸ್ಟರು.

Biprism(Fresnel’s)

(ಪ್ರೆಸ್ನೆಲ್‌ರ) ಇಮ್ಮಡಿ ಪಟ್ಟಕ – ಬೆಳಕಿನ ಪ್ರವೇಶದ ಅಗತ್ಯವುಳ್ಳ ಪ್ರಯೋಗಗಳಲ್ಲಿ ಎರಡು ನಿಜಭಾಸ(ವರ್‍ಚುವಲ್) ಹಾಗೂ  ಸಮಂಜಸ(ಕೊಹೆರೆಂಟ್) ಆಕರಗಳನ್ನು ಉತ್ಪತ್ತಿ ಮಾಡುವಂತಹ ದೊಡ್ಡ ಕೋನವುಳ್ಳ ಒಂದು ಗಾಜಿನ ಪಟ್ಟಕ. ಪ್ರಾನ್ಸಿನ ಕಟ್ಟಡ ಯಂತ್ರಜ್ಞಾನಿಯಾಗಿದ್ದ ಆಗಸ್ಟಿನ್ ಜೀನ್ ಫ್ರೆಸ್ನೆಲ್‌ರು(ಕಾಲ : ೧೦-೦೫-೧೭೮೮ ರಿಂದ ೧೪-೦೭-೧೮೨೭) ಇದನ್ನು ಕಂಡುಹಿಡಿದರು.

Birefringence 

ಇಮ್ಮಡಿ ವಕ್ರೀಭವನ  ಕ್ಯಾಲ್ಸೈಟ್‌ನಂತಹ ಕೆಲವು ವಸ್ತುಗಳ ಹರಳುಗಳ ಮೂಲಕ ಬೆಳಕು ಹಾಯುವಾಗ ಪರಸ್ಪರ ಲಂಬವಾಗಿರುವ ಎರಡು ದಿಕ್ಕುಗಳಲ್ಲಿ ಸೀಳಿಕೊಳ್ಳುತ್ತದೆ. ಇವುಗಳಲ್ಲಿ ಒಂದನ್ನು ಸಾಮಾನ್ಯ ಕಿರಣ ಮತ್ತು ಇನ್ನೊಂದನ್ನು ಅಸಾಮಾನ್ಯ ಕಿರಣ ಎನ್ನುತ್ತಾರೆ. ಇದೇ ಇಮ್ಮಡಿ ವಕ್ರೀಭವನ.

Page 118 of 130

Kannada Sethu. All rights reserved.