೨೦೧೬ರ ಜೂನ್ ತಿಂಗಳಿರಬೇಕು. ನಮ್ಮ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಒಂದು ದಿನ ನನ್ನ ಸಹೋದ್ಯೋಗಿಯೊಬ್ಬರು ನಮ್ಮ ವಿಭಾಗಕ್ಕೆ ಬಂದರು. ಅವರ ಮುಖ ತುಸು ಚಿಂತಾಗ್ರಸ್ತವಾದಂತೆ ಕಂಡಿತು. “ನನ್ನ ಮಗಂಗೆ ಏನಾದ್ರೂ ಮಾಡಿ ಕನ್ನಡ ಹೇಳಿಕೊಡ್ಬೇಕಲ್ಲಾ ಮೇಡಂ. ಅವನು ಈಗ ಒಂಬತ್ತನೇ ತರಗತೀಲಿದಾನೆ. ಕೇಂದ್ರೀಯ ವಿದ್ಯಾಲಯದಲ್ಲಿ ಓದ್ತಾನೆ. ಅಲ್ಲಿ ಕನ್ನಡ ಇಲ್ಲ,*** ಹಿಂದಿ ಓದೋದು ಅವ್ನು. ನಿನ್ನೆ ನಮ್ಮೂರು ಮೈಸೂರಿಗೆ ರೈಲಲ್ಲಿ ಹೋಗಿದ್ವಿ.