ಅಯಾನ್ ಸೌಂಡ್ – ವಿದ್ಯುದಣು ಶಬ್ಧ – ಪ್ಲಾಸ್ಮಾದಲ್ಲಿ ವಿದ್ಯುದಣುಗಳ ಉದ್ದುದ್ದ ಆಂದೋಲನಗಳಿಂದ ತುಂಬ ಕಡಿಮೆ ತರಂಗಾಂತರವಿರುವ ಅಲೆಗಳು ಹುಟ್ಟುತ್ತವೆ. ಇವನ್ನು ವಿದ್ಯುದಣು ಶಬ್ಧ ಎನ್ನುತ್ತಾರೆ.
ಇನ್ ವರ್ಟರ್ ಗೇಟ್ ( ನಾಟ್ ಗೇಟ್) – ವಿಲೋಮ ಕವಾಟ – ಒಂದು ಸರಳ ವಿದ್ಯುನ್ಮಂಡಲ. ಇದನ್ನು, ಹೆಚ್ಚಿನ ಒಳಹಾಕುವ ವಿದ್ಯುತ್ತನ್ನು ಕಡಿಮೆ ಹೊರಬರುವ ವಿದ್ಯುತ್ತಾಗಿಸಲು ಮತ್ತು ಇದರ ವಿರುದ್ಧ ಕ್ರಿಯೆಯನ್ನು ಸಾಧ್ಯ ಮಾಡಲು ಬಳಸುತ್ತಾರೆ. ಸರಳ ತಾರ್ಕಿಕ ಪ್ರಕ್ರಿಯೆಗಳನ್ನು ಮಾಡಲು ಇಂತಹ ಸರಳವಾದ ವಿದ್ಯುನ್ಮಂಡಲಗಳನ್ನು ಬಳಸುತ್ತಾರೆ.
ಫೋವಿಯಾ ( ಯೆಲ್ಲೋ ಸ್ಪಾಟ್) – ಕುಳಿ ( ಹಳದಿ ಕುಳಿ) – ಅಕ್ಷಿ ಪರದೆಯ (ರೆಟಿನಾ) ಮೇಲೆ ಶಂಕುಗಳು ಅತಿ ಹೆಚ್ಚಾಗಿ, ಒತ್ತೊತ್ತಾಗಿ ಸಂಗ್ರಹಿತವಾಗಿರುವ ಒಂದು ಚಿಕ್ಕ ಪ್ರದೇಶ ಇದು (ಕಾಲು ಮಿಲಿಮೀಟರ್ ). ಕಣ್ಣಿನಲ್ಲಿ ದೃಷ್ಟಿಯು ಅತ್ಯಂತ ತೀಕ್ಷ್ಣ ವಾಗಿರುವ ಸ್ಥಳವೆಂದರೆ ಇದೇ.
Like us!
Follow us!