ಹಾಫ್ ಸೆಲ್ – ಅರ್ಧಕೋಶ – ವಿದ್ಯುತ್ ರಾಸಾಯನಿಕ ಕೋಶ ಅಥವಾ ವಿದ್ಯುತ್ ವಿಭಜಕ ಕೋಶದಲ್ಲಿನ ಒಂದು ವಿದ್ಯುದ್ವಾರ ಮತ್ತು ಅದರ ಸಂಪರ್ಕದಲ್ಲಿರುವ ವಿದ್ಯುತ್ ವಿಭಜಕ ದ್ರಾವಣ.
ಹೆಲೇಷನ್ – ಪ್ರಭಾವಳಿ – ಋಣ ವಿದ್ಯುದ್ವಾರ ಕಿರಣ ನಳಿಗೆಯೊಳಗೆ ಒಂದು ಬಿಂದುವಿನಷ್ಟು ಜಾಗವನ್ನು ಸುತ್ತುವರಿದಿರುವ ಬೆಳಕಿನ ವರ್ತುಲಪಟ್ಟಿ(ಪ್ರಭಾವಳಿ). ಇದಕ್ಕೆ ಇರುವ ಸಾಮಾನ್ಯವಾದ ಕಾರಣವೆಂದರೆ ಪರದೆಯ ಗಾಜಿನಲ್ಲಿ ಉಂಟಾಗುವ ಆಂತರಿಕ ಪ್ರತಿಫಲನಗಳು.
ಹೇರ್ ಹೈಗ್ರೋಮೀಟರ್ – ಕೇಶ ತೇವಾಂಶ ಮಾಪಕ – ವಾತಾವರಣದಲ್ಲಿರುವ ತುಲನಾತ್ಮಕ ತೇವಾಂಶವು ಹೆಚ್ಚಾದಾಗ, ತನ್ನಲ್ಲಿ ಅಳವಡಿಸಿದ ಕೂದಲಿನ ಉದ್ದವು ಹೆಚ್ಚಾಗುವುದನ್ನು ಅವಲಂಬಿಸಿ ಕೆಲಸ ಮಾಡುವ ಒಂದು ತೇವಾಂಶ ಮಾಪಕ.
ಹೈಡಿಂಜರ್ ಇಂಟರ್ಫೆರೆನ್ಸ್ ಫ್ರಿಂಜಸ್ – ಹೈಡಿಂಜರರ ಬೆಳಕಿನಡ್ಡ ಹಾಯುವಿಕೆಯ ಪಟ್ಟಿಗಳು – ಒಂದು ದಪ್ಪ ಪಾರದರ್ಶಕ ಹಲಗೆಯ ಎರಡು ಸಮತಲ ಹಾಗೂ ಸಮಾನಾಂತರ ಮೇಲ್ಮೈಗಳಿಂದ ಪ್ರತಿಫಲಿತವಾದ ಅಥವಾ ಪ್ರಸಾರಗೊಂಡ ಬೆಳಕಿನ ಅಡ್ಡ ಹಾಯುವಿಕೆಯಿಂದ ರೂಪುಗೊಂಡ ಪಟ್ಟಿಶ್ರೇಣಿ (ಒಂದು ಬಿಟ್ಟು ಒಂದರಂತೆ ಮೂಡುವ ಕಪ್ಪು ಬಿಳಿ ಪಟ್ಟಿಗಳು).
ಹೇಡ್ರಾನ್ – ಹೇಡ್ರಾನು – ತುಂಬ ಬಲಯುತವಾದ ಅಂತರ್ ಕ್ರಿಯೆಗಳಲ್ಲಿ ಭಾಗವಹಿಸುವ ಒಂದು ಮೂಲಭೂತ ಕಣ ಇದು. ಲೆಪ್ಟಾನುಗಳು ಮತ್ತು ಪ್ರೋಟಾನುಗಳನ್ನು ಬಿಟ್ಟರೆ ಉಳಿದ ಎಲ್ಲ ಮೂಲಭೂತ ಕಣಗಳೂ ಹೇಡ್ರಾನುಗಳೇ ಆಗಿವೆ.
ಗೈರೋಸ್ಟ್ಯಾಟ್ ಆರ್ ಗೈರೋಸ್ಟೆಬಿಲೈಝರ್ – ಭ್ರಮಣ ಸಂಸ್ಥಾಪಕ ಅಥವಾ ಸುತ್ತು ಸ್ಥಿತಿಸ್ಥಾಪಕ – ತುಸು ಪರಿವರ್ತನೆ ಮಾಡಲ್ಪಟ್ಟ ಒಂದು ಭ್ರಮಣ ದರ್ಶಕ ಇದು. ಇದರಲ್ಲಿ, ತಿರುಗುತ್ತಿರುವ ಚಕ್ರವನ್ನು ಒಂದು ಗಟ್ಟಿಯಾದ, ಅಲ್ಲಾಡದ ಆವರಣದಲ್ಲಿ ಊರಿರುತ್ತಾರೆ. ಅಕ್ಷವು ಒಂದೇ ಸಮನಾಗಿ ಇದ್ದಲ್ಲೇ ಇದೆಯೋ, ಇಲ್ಲವೋ ಎಂಬುದನ್ನು ಪತ್ತೆ ಮಾಡಲು ಇದನ್ನು ಬಳಸುತ್ತಾರೆ.
ಗೈರೋಸ್ಕೋಪ್ – ಭ್ರಮಣ ದರ್ಶಕ – ತುಂಬ ವೇಗವಾಗಿ ಸುತ್ತುತ್ತಿರುವ ಚಕ್ರ ಅಥವಾ ಸುತ್ತ ಸುತ್ತುತ್ತಿರುವ ಬೆಳಕಿನ ಪುಂಜವನ್ನು ಹೊಂದಿರುವ ಒಂದು ಉಪಕರಣ. ಒಂದು ವಸ್ತುವು ತಾನು ಇರಬೇಕಾದ ದಿಕ್ಕಿನಿಂದ ಬೇರೆ ಕಡೆಗೆ ಸರಿದದ್ದನ್ನು ಪತ್ತೆ ಹಚ್ಚಲು ಈ ಉಪಕರಣವನ್ನು ಬಳಸುತ್ತಾರೆ.
ಗೈರೋಮ್ಯಾಗ್ನೆಟಿಕ್ ರೇಶ್ಯೋ – ಭ್ರಮಣ ಕಾಂತೀಯ ಅನುಪಾತ – ಒಂದು ಪರಮಾಣು ಅಥವಾ ಬೀಜಕೇಂದ್ರದ ಕಾಂತೀಯ ಸಾಮರ್ಥ್ಯ ಹಾಗೂ ಅದರ ಕೋನೀಯ ದ್ರವ್ಯವೇಗ (ಯಾಂಗುಲಾರ್ ಮೊಮೆಂಟಮ್)ಗಳಿಗಿರುವ ಅನುಪಾತ.