ಕೈನೆಟಿಕ್ ಎನರ್ಜಿ- ( K. E.) – ಚಲನ ಶಕ್ತಿ( K.E.) – ತಾನು ಚಲಿಸುತ್ತಿರುವುದರಿಂದಾಗಿ ಒಂದು ವಸ್ತುವು ಹೊಂದಿರುವ ಶಕ್ತಿ.
ಕೈನ್ ಸ್ಕೋಪ್ – ಚಲಚಿತ್ರ ದರ್ಶಕ – ದೂರದರ್ಶನದ ಚಿತ್ರಕೊಳವೆ.
ಕೈನೆಟಿಕ್ ಎಫೆಕ್ಟ್ – ಕೈನೆಟಿಕ್ ಎಫೆಕ್ಟ್ – ಚಲನಾತ್ಮಕ ಪರಿಣಾಮ – ಉಷ್ಣಚಲನಾನಿಯಮಗಳಿಗೊಂತ ಹೆಚ್ಚಾಗಿ ರಾಸಾಯನಿಕ ಕ್ರಿಯೆಯ ವೇಗವನ್ನು ( ಗತಿಯನ್ನು ) ಅವಲಂಬಿಸುವ ರಾಸಾಯನಿಕ ಪರಿಣಾಮ.
ಕೈನ್ ಮ್ಯಾಟಿಕ್ ವಿಸ್ಕಾಸಿಟಿ ( ಸಿಂಬಲ್ V ) – ಚಲನಾತ್ಮಕ ಸ್ನಿಗ್ಧತೆ ( ಚಲನಾತ್ಮಕ ಜಿಡ್ಡುಗುಣ ( ಸಂಕೇತ – V ) – ಒಂದು ದ್ರವದ ಸಾಂದ್ರತೆಗೂ ಅದರ ಜಿಡ್ಡುಗುಣಕ್ಕೂ ಇರುವ ಅನುಪಾತ.
ಕೈನ್ ಮ್ಯಾಟಿಕ್ಸ್ – ಚಲನ ಶಾಸ್ತ್ರ (ಗತಿ ವಿಜ್ಞಾನ) – ಯಂತ್ರ ಚಲನಶಾಸ್ತ್ರದ ಒಂದು ಶಾಖೆ. ಇದು, ಚಲನೆಗೆ ಕಾರಣವಾಗುವ ಬಲಗಳನ್ನು ಪರಿಗಣಿಸುವ ಗೋಜಿಗೆ ಹೋಗದೆ ವಸ್ತುಗಳ ಚಲನೆಯ ಬಗ್ಗೆ ಅಧ್ಯಯನ ಮಾಡುತ್ತದೆ.
ಕಿಲೋಟಾನ್ ವೆಪನ್ – ಕಿಲೋಟಾನ್ ಆಯುಧ – ಸಾವಿರ ಟನ್ ‘ಟಿ ಎನ್ ಟಿ'( ಟ್ರೈ ನೈಟ್ರೋ ಟಾಲಿನ್) ಸ್ಫೋಟ ಸಾಮರ್ಥ್ಯವುಳ್ಳ ಒಂದು ಅಣುಶಕ್ತಿ ಆಯುಧ.
ಕಿಲೋವ್ಯಾಟ್ ಅವರ್ ( ಸಿಂಬಲ್ kWh) – ಕಿಲೋವ್ಯಾಟ್ ಅವರ್ ( ಸಂಕಥೆತ kWh) – ವಿದ್ಯುಚ್ಛಕ್ತಿ ಯ ವ್ಯಾಪಾರೀ ಮೂಲಮಾನ. ಇದು 1 ಗಂಟೆಗೆ 1000 ವ್ಯಾಟ್ ಗಳನ್ನು ಬಳಸಿಕೊಳ್ಳುವುದಕ್ಕೆ ಸಮ.
ಕರ್ ಮ್ಯಾಗ್ನೆಟೋ ಆಪ್ಟಿಕ್ ಎಫೆಕ್ಟ್ – ಕರ್ ಕಾಂತ ದೃಶ್ಯಬೆಳಕು ಪರಿಣಾಮ – ವಿದ್ಯುತ್ ಕಾಂತವೊಂದರ ಉಜ್ಜಿ ಹೊಳಪುಗೊಳಿಸಿದ ಧ್ರುವವೊಂದರ ಮೂಲಕ ಪ್ರತಿಫಲಿತವಾದಾಗ, ತಾನು ಬೀಳುತ್ತಿರುವ ಮೇಲ್ಮೈಯಲ್ಲಿ ಅಥವಾ ಅದಕ್ಕೆ ಲಂಬವಾಗಿ ಧ್ರುವೀಕೃತವಾಗುವಂತಹ ಬೆಳಕು ಅಂಡಾಕಾರದಲ್ಲಿ ಧ್ರುವೀಕೃತಗೊಳ್ಳುತ್ತದೆ.
Like us!
Follow us!