ನಾನು ವಾಸಿಸುವ ಬೆಂಗಳೂರು ನಗರದ ಬಡಾವಣೆಯಾದ ಹಂಪಿನಗರದಲ್ಲಿಮೊನ್ನೆ, ಮನೆಸಾಮಾನು ತರಲೆಂದು ಅಂಗಡಿಗೆ ಹೋಗಿದ್ದಾಗ ಒಂದು ಪ್ರಕಟಣಾ ಫಲಕ ನನ್ನ ಕಣ್ಣಿಗೆ ಬಿತ್ತು. “ಇಲ್ಲಿ ಕಬ್ಬಿನ ಜ್ಯೂಸ್ ದೊರೆಯುತ್ತದೆ” ಎಂದು ಸಾರುತ್ತಿದ್ದ ಫಲಕವದು. ನೋಡಿದರೆ ಅದು ಒಂದು ಕಬ್ಬಿನ ಹಾಲಿನ ಅಂಗಡಿಯಾಗಿತ್ತು. ಅಲ್ಲೇ ಪಕ್ಕದಲ್ಲಿ ಇದ್ದ ಇನ್ನೊಂದು ಫಲಕದಲ್ಲಿ ‘Sugar cane juice available’ ಎಂಬ ಪ್ರಕಟಣೆ ಇತ್ತು. ಅಂದರೆ ಇದರ ಅರ್ಥ ನಮ್ಮ ಬೆಂಗಳೂರು ಕನ್ನಡ ‘ಕಂಗ್ಲಿಷ್’ ಆಗಿಬಿಟ್ಟು ಬಹಳ ದಿನವಾಗಿದೆ ಎಂದು! ಕಾಲಾಂತರದಿಂದ ನಾವು […]
ಹೆಲಿಕಲ್ ಆಂಟೆನಾ – ಸುರುಳಿಯಾಕಾರದ ಆಕರ್ಷಣತಂತಿ – ಸುರುಳಿಯಾಕಾರವನ್ನು ಹೊಂದಿರುವ ಒಂದು ಆಕರ್ಷಣ ತಂತಿ.
ಹೈಸನ್ಬರ್ಗ್ಸ್ ಅನ್ಸರ್ಟೈನಿಟಿ ಪ್ರಿನ್ಸಿಪ್ಲ್ – ಹೈಸನ್ ಬರ್ಗ್ ರ ಅನಿಶ್ಚಿತತಾ ಸಿದ್ಧಾಂತ - ಪರಮಾಣುವಿನೊಳಗಿರುವ ಒಂದು ಕಣದ ಸ್ಥಾನಬಿಂದು ಮತ್ತು ದ್ರವ್ಯವೇಗವನ್ನು ಏಕಕಾಲಕ್ಕೆ ಹಾಗೂ ಕರಾರುವಾಕ್ಕಾಗಿ ಅಳೆಯಲು ಸಾಧ್ಯವೇ ಇಲ್ಲ. ಸರಳವಾಗಿ ಹೇಳಬೇಕೆಂದರೆ ಒಂದು ಕಣದ ಸ್ಥಳ ಮತ್ತು ವೇಗವನ್ನು ಏಕಕಾಲಕ್ಕೆ ಗೊತ್ತುಪಡಿಸಿಕೊಳ್ಳಲು ಸಾಧ್ಯ ಇಲ್ಲ.
ಹೆಕ್ಟೊ – ಹೆಕ್ಟೊ – 10 ಎಂಬ ಸಂಖ್ಯೆಯ 2ರ ಘಾತವನ್ನು ಸೂಚಿಸುವ ಪದ.
ಹೆವಿ ವಾಟರ್ – ತನ್ನಲ್ಲಿ, ಜಲಜನಕದ ಜಾಗದಲ್ಲಿ( ಅಂದರೆ ಅದರ ಬದಲಾಗಿ) ಡ್ಯೂಟೇರಿಯಂ ಅನ್ನು ಹೊಂದಿರುವ ಜಲ ಅಥವಾ ನೀರು. ಪ್ರಕೃತಿ ಸಹಜ ನೀರಿನಲ್ಲಿ ಭಾರಜಲದ ಪ್ರಮಾಣ 1:5000.
ಹೆವಿ ಹೈಡ್ರೋಜನ್ ಆರ್ ಡ್ಯೂಟೇರಿಯಂ – ಭಾರ ಜಲಜನಕ ಅಥವಾ ಡ್ಯೂಟೇರಿಯಂ – ದ್ರವ್ಯರಾಶಿ ಸಂಖ್ಯೆ 2 ಆಗಿರುವ, ಜಲಜನಕದ ಒಂದು ಸಮರೂಪಿ.
ಹೀಟ್ ಪಂಪ್ – ತಾಪ ರೇಚಕ – ಉಷ್ಣತೆಯು ಕಡಿಮೆ ಇರುವ ಪ್ರದೇಶದಿಂದ ಉಷ್ಣತೆಯು ಹೆಚ್ಚು ಇರುವ ಪ್ರದೇಶಕ್ಕೆ ಉಷ್ಣತೆಯನ್ನು ವರ್ಗಾಯಿಸುವ ಉಪಕರಣ. ಉದಾಹರಣೆಗೆ ತಂಪು ಪೆಟ್ಟಿಗೆ (ರೆಫ್ರಿಜಿರೇಟರ್).
Like us!
Follow us!