Kaon

ಕೇಯಾನು – ಒಂದು ಕೆ-ಮೆಸಾನು ( ಮೆಸಾನು = ಎಲೆಕ್ಟ್ರಾನುಗಳಿಗಿಂತ ಭಾರವಾದ ಆದರೆ ಪ್ರೋಟಾನುಗಳಿಗಿಂತ ಹಗುರವಾದ ಮೂಲಭೂತ ಕಣಗಳು)

Junction rectifier

ಜಂಕ್ಷನ್ ರೆಕ್ಟಿಫೈಯರ್ – ಕೂಡುಬಿಂದು ಪರಿವರ್ತಕ‌ – ಅರೆವಾಹಕ ಕೂಡುಬಿಂದುವನ್ನು ಆಧರಿಸಿದ ಪರಿವರ್ತಕ.

Junction detector

ಜಂಕ್ಷನ್ ಡಿಟೆಕ್ಟರ್ – ಕೂಡುಬಿಂದು‌ ಪತ್ತೆಯಂತ್ರ – ಹಿಮ್ಮುಖ ವಿದ್ಯುತ್ ಸಾಮರ್ಥ್ಯವುಳ್ಳ ಅರೆವಾಹಕ ಕೂಡುಸ್ಥಳದಲ್ಲಿನ ವಿದ್ಯುತ್ ಪಾತದ ಕೂಡುಬಿಂದುವಿನಲ್ಲಿ ವಿದ್ಯುತ್ ವಿಕಿರಣವನ್ನು ಅಳೆಯುವ ಉಪಕರಣ.

ಕನ್ನಡ ಗಾದೆಮಾತು – ಕೊಟ್ಟೋನ್ ಕೋಡಂಗಿ, ಈಸ್ಕೊಂಡೋನ್ ಈರ್ಬದ್ರ.

ವ್ಯವಹಾರ ಪ್ರಪಂಚದಲ್ಲಿ  ಮತ್ತು ಕೆಲವೊಮ್ಮೆ ಭಾವನಾತ್ಮಕ ಸನ್ನಿವೇಶ ಗಳಲ್ಲೂ ಕೂಡ ಬಹಳವಾಗಿ ಸಲ್ಲುವ  ಗಾದೆಮಾತು ಇದು. ಅಪ್ರಾಮಾಣಿಕ ವ್ಯಕ್ತಿಗಳಿಗೆ ಸಾಲ ಕೊಟ್ಟು, ತಮ್ಮ ಮನೆ ಬಾಡಿಗೆಗೆ ಕೊಟ್ಟು, ಅಥವಾ ದುಬಾರಿ ಬಟ್ಟೆ, ಒಡವೆ, ಪುಸ್ತಕಗಳನ್ನು ಕಡ ಕೊಟ್ಟು ಅದನ್ನು‌  ಕಳೆದುಕೊಳ್ಳುವ ಸನ್ನಿವೇಶ ಬಂದಾಗ  ಈ ಗಾದೆಮಾತನ್ನು ಬಳಸುತ್ತಾರೆ. ಪ್ರೀತಿ, ವಿಶ್ವಾಸ, ನಂಬಿಕೆಗಳನ್ನು ಅಪಾತ್ರರ ಮೇಲೆ ಇಟ್ಟಾಗಲೂ ಹೀಗೆ ಆಗಬಹುದು‌. ಆಗ ಕೊಟ್ಟವನು ಬಯಲಾಟದ ಕೋಡಂಗಿ‌ ವೇಷದಂತೆ ಮೂರ್ಖನಾಗಿ, ಹಾಸ್ಯಾಸ್ಪದವಾಗಿ ಕಂಡರೆ ತೆಗೆದುಕೊಂಡವನು ದಕ್ಷಯಾಗ ಕಥೆಯ ಶಿವಕುಂತಲ ಜನ್ಯ […]

ಕನ್ನಡತನವನ್ನು  ಈ ಕಾಲದಲ್ಲಿ ಉಳಿಸಿ,  ಬೆಳೆಸುವುದು ಹೇಗೆ?

“ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು” ಎಂಬ, ಕುವೆಂಪು ಅವರ ಪ್ರಸಿದ್ಧ ಕವಿತೆಯಲ್ಲಿ “ಕನ್ನಡ ಗೋವಿನ ಓ ಮುದ್ದಿನ ಕರು, ಕನ್ನಡತನವೊಂದಿದ್ದರೆ ನೀ ಅಮ್ಮಗೆ ಕಲ್ಪತರು” ಎಂಬ ಒಂದು ಸಾಲು ಬರುತ್ತದೆ. ಈ ಮಾಹಿತಿ‌ ತಂತ್ರಜ್ಞಾನ ಯುಗದಲ್ಲಿ, ಗೂಗಲಪ್ಪ ಮತ್ತು ಯೂಟ್ಯೂಬಮ್ಮನ ಆಳ್ವಿಕೆಯಲ್ಲಿ ಕನ್ನಡತನವನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಸವಾಲು ಎದುರಾಗುತ್ತದೆ‌.  ಇದರಲ್ಲಿ ಎರಡು ವಿಷಯಗಳು ಬಹಳ ಮುಖ್ಯ ಅನ್ನಿಸುತ್ತವೆ.‌ ಒಂದು ಇಂದಿನ ಹೊಸ ಹೊಸ ‘ಜಾಣ ಉಪರಣಗಳಿಗೆ’ ಒಗ್ಗುವಂತೆ, ಸಲ್ಲುವಂತೆ ಕನ್ನಡವನ್ನು ಸಬಲಗೊಳಿಸುವುದು‌, ಮತ್ತು […]

Joule Kelvin effect( Joule Thompson effect)

ಜೌಲ್ ಕೆಲ್ವಿನ್ ಎಫೆಕ್ಟ್ ‌( ಜೌಲ್ ಥಾಂಪ್ಸನ್ ಎಫೆಕ್ಟ್) – ಜೌಲ್ ಕೆಲ್ವಿನ್ ಪರಿಣಾಮ ( ಜೌಲ್ ಥಾಂಪ್ಸನ್ ಪರಿಣಾಮ) ಒಂದು ಅನಿಲವು ರಂಧ್ರಗಳುಳ್ಳ ಅಡ್ಡಗೋಡೆಯ ಮೂಲಕ ಕಡಿಮೆ ಒತ್ತಡವುಳ್ಳ ಒಂದು ಪ್ರದೇಶಕ್ಕೆ ವಿಸ್ತರಿಸಿಕೊಂಡಾಗ ಅದರಲ್ಲಿ ಉಂಟಾಗುವ ಬದಲಾವಣೆ. ಅನೇಕ ನೈಜ ಅನಿಲಗಳು ಈ ರೀತಿಯಲ್ಲಿ ವಿಸ್ತಾರಗೊಂಡಾಗ ಸ್ವಲ್ಪ ತಂಪಾಗುತ್ತವೆ. ಏಕೆಂದರೆ, ಅವು ತಮ್ಮೊಳಗಿನವೇ ಆದ ಸ್ವಂತ ಅಂತರ್ ಅಣುಶಕ್ತಿಗಳ ವಿರುದ್ಧ ಕೆಲಸ ಮಾಡುತ್ತಿರುತ್ತವೆ. ಆದರ್ಶ ಅನಿಲಗಳಲ್ಲಿ ಅಂತರ್ ಅಣುಶಕ್ತಿಗಳು ಇಲ್ಲದಿರುವುದರಿಂದ ಈ ಪರಿಣಾಮವು ಅವುಗಳಲ್ಲಿ ಕಾಣಿಸುವುದಿಲ್ಲ.

Joule ( symbol J) 

ಜೌಲ್ (ಸಿಂಬಲ್ ಜೆ) – ಜೌಲ್ ( ಸಂಕೇತ J) -ಶಕ್ತಿ ಮತ್ತು ಕಾರ್ಯದ ಎಸ್.ಐ. ಮೂಲಮಾನ. ಒಂದು ನ್ಯೂಟನ್ ಬಲವನ್ನು ಒಂದು ಬಿಂದುವಿನ ಮೇಲೆ ಹಾಕಿದಾಗ, ಆ ಬಲವು ಆ ಬಿಂದುವಿನಲ್ಲಿರುವ ವಸ್ತುವನ್ನು ಒಂದು ಮೀಟರ್ ತಳ್ಳಲು ಮಾಡಬೇಕಾದ ಕಾರ್ಯವೇ ಒಂದು ಜೌಲ್. ಎಲ್ಲ ರೂಪದ ಶಕ್ತಿಗಳಿಗೂ  ಜೌಲ್ ಎಂಬುದೇ ಮೂಲಮಾನವಾಗಿದೆ( 1 J = 1 Nm).

Joly steam calorimeter

ಜೋಲಿ ಸ್ಟೀಮ್ ಕೆಲೊರಿಮೀಟರ್ – ಜೋಲಿ ಹಬೆಯ ಕೆಲೊರಿ( ಉಷ್ಣ) ಮಾಪಕ – ಸ್ಥಿರ ಪರಿಮಾಣದಲ್ಲಿ ಒಂದು ಅನಿಲದ ನಿರ್ದಿಷ್ಟ ( ಸ್ಪೆಸಿಫಿಕ್) ತಾಪ ಸಾಮರ್ಥ್ಯವನ್ನು ಅಳೆಯಲು ಬಳಸುವ ಒಂದು ಉಪಕರಣ.

JOhi effect

ಜೋಹಿ ಎಫೆಕ್ಟ್ – ಜೋಹಿ ಪರಿಣಾಮ – ಅನಿಲ ವಿಸರ್ಜನ ದಲ್ಲಿ ವಿಸರ್ಜನೆಗೊಳ್ಳುತ್ತಿರುವ ವಿದ್ಯುತ್ತಿನ ಮೇಲೆ ಬೆಳಕು ಉಂಟು ಮಾಡುವ ಪರಿಣಾಮ.

Johnson noise 

ಜಾನ್ಸನ್ ನಾಯ್ಸ್ – ಜಾನ್ಸನ್ ರ ಶಬ್ಧ – ವಿದ್ಯುನ್ಮಾನ ಶಾಸ್ತ್ರಕ್ಕೆ ‌ಸಂಬಂಧಿಸಿದ ಪದ ಇದು. ಇದರ ವಾಹಕಗಳಲ್ಲಿನ ಎಲೆಕ್ಟ್ರಾನುಗಳಲ್ಲಿ ಉಂಟಾದ ತಾಪಮೂಲೀಯ ಕ್ಷೋಭೆಯಿಂದಾಗಿ ಉಂಟಾಗುವ ಶಬ್ಧ.

Page 25 of 139

Kannada Sethu. All rights reserved.