ಕನ್ನಡ ನಾಡಿನ ಪ್ರಕೃತಿ ಸಿರಿಯಂತೆ ಸಂಸ್ಕೃತಿ ಸಂಪತ್ತು ಸಹ ವೈವಿದ್ಯಮಯವಾದದ್ದು ಹಾಗೂ ಕೌತುಕ ಹುಟ್ಟಿಸುವಂಥದ್ದು. ಇದರಲ್ಲಿ ಅದ್ಭುತವಾದ ಖಾದ್ಯವಿಶೇಷಗಳೂ ಸೇರಿವೆ. ಇವುಗಳಲ್ಲಿ ತುಂಬ ಸರಳವಾದ ಆದರೆ ಅಚ್ಚರಿ ಹುಟ್ಟಿಸುವಂತಹ ಒಂದು ತಿನಿಸು ಅಂದರೆ ಕಲ್ಲನ್ನ. ಉತ್ತರ ಕನ್ನಡದ ಸಿರ್ಸಿಯಿಂದ ಶಿವಮೊಗ್ಗದ ತನಕ ಈ ತಿನಿಸು ರೂಢಿಯಲ್ಲಿದೆ. ನದೀತೀರದಲ್ಲಿರುವ ನಿಂಬೆ-ಕಿತ್ತಳೆ ಗಾತ್ರದ ಬೆಣಚು ಕಲ್ಲುಗಳನ್ನು ಮನೆಗೆ ತಂದು, ತೊಳೆದು ಒರೆಸಿ, ಸೌದೆ ಒಲೆಯೊಳಗೆ ಹಾಕಿ ಅವುಗಳನ್ನು ಕೆಂಪಗೆ ಕಾಯಿಸುತ್ತಾರಂತೆ. ನಂತರ ಬಾಳೆ ಎಲೆ ಅಥವಾ ಅರಿಶಿನದ ಎಲೆಯ ಮೇಲೆ ಬಿಸಿ […]
ಅಯೊನೈಸೇಷನ್ ಗಾಜ್ – ವಿದ್ಯುದಣು ನಿರ್ಮಾಣ ಅಳತೆ ಉಪಕರಣ – ಒಂದು ನಿರ್ವಾತ ಅಳತೆ ಉಪಕರಣವಿದು. ಇದರಲ್ಲಿನ ಅನಿಲದ ಒತ್ತಡವನ್ನು ಅದರ ವಿದ್ಯುದಣು ನಿರ್ಮಾಣದ ಮಟ್ಟದಿಂದ ಅಳೆಯಲಾಗುತ್ತದೆ.
ಅಯೊನೈಸೇಷನ್ ಎನರ್ಜಿ- ವಿದ್ಯುದಣು ನಿರ್ಮಾಣ ಶಕ್ತಿ – ಒಂದು ತಟಸ್ಥ ಅನಿಲದ ಅಣುವಿನಿಂದ ಎಲೆಕ್ಟ್ರಾನೊಂದನ್ಬು ಹೊರತೆಗೆಯಲು ಬೇಕಾದ ಶಕ್ತಿ.
ಅಯಾನ್ ಇರ್ರೇಡಿಯೇಷನ್ – ವಿದ್ಯುದಣು ವಿಕಿರಣೀಕರಣ – ತುಂಬ ಶಕ್ತಿಯುತವಾದ ವಿದ್ಯುದಣುಗಳ ಮಳೆಯನ್ನು ಒಂದು ವಸ್ತುವಿನ ಮೇಲೆ ಸುರಿಸುವುದು.
ಅಯಾನ್ ಇಂಜಿನ್ – ವಿದ್ಯುದಣು ಚಾಲಕ ಯಂತ್ರ – ವಿದ್ಯುದಣುಗಳ ಪುಂಜವನ್ಬು ಬಳಸಿಕೊಂಡು ಬಾಹ್ಯಾಕಾಶ ನೌಕೆಗಳನ್ನು ಮೇಲಕ್ಕೆ ಚಿಮ್ಮಿಸುವ ಒಂದು ಚಾಲಕ ಯಂತ್ರ( ಇಂಜಿನ್).
ಅಯಾನ್ ಡೆನ್ಸಿಟಿ – ವಿದ್ಯುದಣು ಸಾಂದ್ರತೆ – ಒಂದು ಘಟಕ ಅಳತೆಯ ಪರಿಮಾಣದಲ್ಲಿ ಲಭ್ಯವಿರುವಂತಹ ವಿದ್ಯುದಣುಗಳ ಅಥವಾ ಅಯಾನುಗಳ ಸಾಂದ್ರತೆ. ಇದನ್ನು ಸಾಮಾನ್ಯವಾಗಿ ವಿದ್ಯುದಣು ಸಾರತೆ ಎನ್ನುತ್ತಾರೆ.
ಅಯಾನೈಸೇಷನ್ ಚೇಂಬರ್ – ವಿದ್ಯುದಣು ನಿರ್ಮಾಣ ಕೊಠಡಿ – ವಿದ್ಯುದಣು ನಿರ್ಮಿಸುವ ವಿಕಿರಣವನ್ನು ಪತ್ತೆ ಹಚ್ಚಲು ಅಥವಾ ಅದನ್ನು ಅಳೆಯಲು ಬಳಸುವಂತಹ ಕೊಠಡಿ ಅಥವಾ ಗೂಡು.
ಅಯಾನೈಸೇಷನ್ – ವಿದ್ಯುದಣು ನಿರ್ಮಾಣ ಅಥವಾ ಅಯಾನೀಕರಣ – ವೇಗವಾಗಿ ಚಲಿಸುತ್ತಿರುವ ಕಣದಿಂದ ಡಿಕ್ಕಿ ಹೊಡೆಸಿ ಅಥವಾ ರಾಸಾಯನಿಕ ಕ್ರಿಯೆಗಳ ಮೂಲಕ ವಿದ್ಯುದಣುಗಳನ್ನು ನಿರ್ಮಿಸುವ ವಿಕಿರಣವನ್ನು ಉತ್ಪತ್ತಿ ಮಾಡಿ ಆ ಮೂಲಕ ವಿದ್ಯುದಣುಗಳನ್ನು ರೂಪಿಸುವುದು.
Like us!
Follow us!