ಮ್ಯಾಗ್ನೆಟೋಮೀಟರ್ – ಕಾಂತಕ್ಷೇತ್ರ ಮಾಪಕ – ಇದು ಒಂದು ರೀತಿಯ ದಿಕ್ಸೂಚಿ. ಇದನ್ನು ಕಾಂತಕ್ಷೇತ್ರಗಳ ಶಕ್ತಿಯನ್ನು ತುಲನೆ ಮಾಡಲು ಬಳಸುತ್ತಾರೆ.
ಮ್ಯಾಗ್ನೆಟೋ ಹೈಡ್ರೋಡೈನಮಿಕ್ಸ್ – ಕಾಂತೀಯ ದ್ರವ ಬಲವಿಜ್ಞಾನ – ವಾಹಕತೆಯುಳ್ಳ ದ್ರವಗಳ ಜೊತೆಗೆ ( ಉದಾಹರಣೆಗೆ, ಪ್ಲಾಸ್ಮಾ ಅಥವಾ ದ್ರವರೂಪೀ ಲೋಹ) ಹೇಗೆ ಕಾಂತಕ್ಷೇತ್ರಗಳು ವರ್ತಿಸುತ್ತವೆ ಎಂಬುದನ್ನು ಹೇಳುವ ವಿಜ್ಞಾನ.
ಮ್ಯಾಗ್ನೆಟಿಕ್ ವೇರಿಯೇಷನ್ – ಕಾಂತೀಯ ಮಾರ್ಪಾಡು – ಭೂಮಿಯ ಮೇಲ್ಮೈಯಲ್ಲಿನ ಒಂದು ಬಿಂದುವಿನಲ್ಲಿ ಸಮಯಕ್ಕೆ ಸಂಬಂಧಿಸಿ, ಅದರ ಕಾಂತೀಯ ಅಂಶಗಳಲ್ಲಿ ಉಂಟಾಗುವ ಮಾರ್ಪಾಟು. ಈ ಮಾರ್ಪಾಡುಗಳಲ್ಲಿ ಕೆಲವು ನಿಧಾನವಾಗಿ, ನಿರಂತರವಾಗಿ ಆಗುತ್ತಿದ್ದರೆ, ಕೆಲವು ಸೂರ್ಯನಲ್ಲಿ ನಡೆಯುವ ಚಟುವಟಿಕೆಗಳಿಂದ ಉಂಟಾದಂತಹ ಕಾಂತ ಬಿರುಗಾಳಿಗಳಿಂದಾಗಿ ಇದ್ದಕ್ಕಿದ್ದಂತೆ ಆಗಿಬಿಡುತ್ತವೆ. ಈ ಪರಿಕಲ್ಪನೆಯನ್ನು ನೌಕಾಯಾನದಲ್ಲಿ ತುಂಬ ಬಳಸುತ್ತಾರೆ.
ಮ್ಯಾಗ್ನೆಟೋಕ್ಯಲೋರಿಕ್ ಎಫೆಕ್ಟ್ – ಕಾಂತೀಯ ಶಕ್ತಿಮಾನ ಪರಿಣಾಮ – ಬಾಹ್ಯ ಕಾಂತಕ್ಷೇತ್ರವು ಬದಲಾದಂತೆ, ವಸ್ತುವಿನ ಉಷ್ಣತೆಯಲ್ಲಿ ಕಂಡುಬರುವ ಬದಲಾವಣೆ -ಈ ಪರಿಣಾಮವನ್ನು ತುಂಬ ಕಡಿಮೆ ಉಷ್ಣತೆ ( ಪರಮ ಶೂನ್ಯದಷ್ಟು) ಯನ್ನು ಉತ್ಪತ್ತಿ ಮಾಡಲು ಬಳಸುತ್ತಾರೆ.
ಮ್ಯಾಗ್ನೆಟಿಸಂ – ಕಾಂತತೆ – ಕಾಂತಕ್ಷೇತ್ರಗಳಿಗೆ ಸಂಬಂಧಿಸಿದ ಕೆಲವು ವಿದ್ಯಮಾನಗಳ ಒಂದು ಕಟ್ಟು ಅದು. ಇದರಲ್ಲಿ ವಿರುದ್ಧ ಕಾಂತತೆ, ದುರ್ಬಲ ಕಾಂತತೆ, ಪ್ರಬಲ ಕಾಂತತೆ, ಸ್ವಯಂ ವಿರುದ್ಧ ಕಾಂತತೆ ….. ಹೀಗೆ ಅನೇಕ ವಿಧಗಳಿವೆ.
ಮ್ಯಾಗ್ನೆಟಿಕ್ ಟೇಪ್ – ಕಾಂತೀಯ ಪಟ್ಟೆದಾರ – ಧ್ವನಿಮುದ್ರಣ(ಟೇಪ್ ರೆಕಾರ್ಡರ್ ) ಗಳಲ್ಲಿ ಬಳಸುವಂತಹ ಒಂದು ಪ್ಲಾಸ್ಟಿಕ್ ಪಟ್ಟೆದಾರ ಅಥವಾ ಟೇಪು. ಇದಕ್ಕೆ ಒಂದು ಪ್ರಬಲ ಕಾಂತವಸ್ತುವಿನ ಪುಡಿಯನ್ನು ಲೇಪಿಸಿರುತ್ತಾರೆ. ಈ ಪಟ್ಟೆದಾರವನ್ನು ಕಾಂತೀಯ ಮಂಡಲದ ಮಧ್ಯೆ ಇರುವ ಎಡೆಯಲ್ಲಿ ಹುಗಿಸಿ ಮಾಹಿತಿ ದಾಖಲೆಗಾಗಿ ಬಳಸುತ್ತಾರೆ.
ಮ್ಯಾಗ್ನೆಟಿಕ್ ಸಸ್ಸೆಪ್ಟೆಬಿಲಿಟಿ – ಕಾಂತೀಯ ಪರಿಣಾಮಸಾಧ್ಯತೆ – ಇದು ಒಂದು ಆಯಾಮರಹಿತ ಅನುಪಾತ ಸ್ಥಿರಾಂಕ. ಒಂದು ವಸ್ತುವು ಎಷ್ಟರ ಮಟ್ಟಿಗೆ ಅಯಸ್ಕಾಂತಗೊಳ್ಳುತ್ತದೆ ಎಂಬುದರ ಅಳತೆ ಇದು.
Like us!
Follow us!