ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ ಭಾಷೆಯ ಪದಗಳನ್ನು ಲೀಲಾಮಯವಾಗಿ, ಗರಿಷ್ಠ ಅರ್ಥವಿಸ್ತಾರದಲ್ಲಿ ಬಳಸುತ್ತಿದ್ದ ರೀತಿಯು ತುಂಬ ವಿಶಿಷ್ಟವಾದದ್ದು. ಒಂದೇ ಪದಕ್ಕಿರುವ ಬೇರೆ ಬೇರೆ ಅರ್ಥಗಳನ್ನು ದುಡಿಸಿಕೊಳ್ಳುತ್ತಿದ್ದದ್ದು, ಹೆಚ್ಚುಕಮ್ಮಿ ಒಂದೇ ಉಚ್ಚಾರವುಳ್ಳ ಆದರೆ ಅಪಾರ ಅರ್ಥ ವ್ಯತ್ಯಾಸವುಳ್ಳ ಪದಗಳನ್ನು ಒಟ್ಟೊಟ್ಟಿಗೆ ಬಳಸಿ ಶ್ರಾವ್ಯಸುಂದರ ಹಾಗೂ ಅರ್ಥಬಂಧುರ ಲೋಕವನ್ನು ಸೃಷ್ಟಿಸುವ ಅದ್ಭುತ ಶಕ್ತಿ ಅವರಲ್ಲಿತ್ತು. ಅದಕ್ಕೆ ಒಂದು ಉದಾಹರಣೆ ಅಂದರೆ ಅವರು ಕನಸು ಮತ್ತು ಕಣಸು ಎಂಬ ಪದಗಳನ್ನು ತಮ್ಮ ಕವಿತೆಯೊಂದರಲ್ಲಿ ಬಳಸಿರುವ ರೀತಿ. ಪ್ರಸ್ತುತ ಕವಿತೆಯ […]
ಅನಿಲ – ಯಾವ ವಸ್ತುವಿನ ಅಣುಗಳು ಅಥವಾ ಪರಮಾಣುಗಳು ಅದನ್ನು ಇರಿಸಿರುವ ಇಡೀ ಪಾತ್ರೆಯ ಪರಿಮಾಣವನ್ನು ಆವರಿಸುತ್ತವೋ, ಆಕ್ರಮಿಸುತ್ತವೋ ಅಂತಹ ವಸ್ತು.
ಗ್ಯಾಮಟ್ – ಪೂರ್ಣ ಸ್ವರಶ್ರೇಣಿ – ಒಂದು ಸ್ವರಕ್ಕೂ ಮತ್ತು ಅದು ಇರುವಂತಹ ಸ್ವರಾಷ್ಟಕ ಶ್ರೇಣಿಗೂ ಇರುವ ಮಧ್ಯಂತರವನ್ನು ಸಾಮಾನ್ಯವಾಗಿ ಏಳು ಚಿಕ್ಕ ಚಿಕ್ಕ ಮಧ್ಯಂತರಗಳಾಗಿ ವಿಂಗಡಿಸಿರುತ್ತಾರೆ. ಹೀಗೆ ರೂಪುಗೊಂಡ ಎಂಟು ಸ್ವರಗಳು ‘ಒಂದು ಸಂಗೀತ ಶ್ರೇಣಿ’ ಅಥವಾ ಪೂರ್ಣ ಸ್ವರಶ್ರೇಣಿ ಅನ್ನಿಸಿಕೊಳ್ಳುತ್ತವೆ.
ಗಾಮಾ ರೇ ಸ್ಪೆಕ್ಟ್ರಮ್ – ಗಾಮಾ ಕಿರಣ ವರ್ಣಪಟಲ( ಗಾಮಾ ಕಿರಣ ರೋಹಿತ) – ಒಂದು ವಿಕಿರಣ ಆಕರದಿಂದ ಹೊರ ಸೂಸಲ್ಪಟ್ಟು ಗಾಮಾಕಿರಣ ಪ್ರದೇಶದಲ್ಲಿ ಜೋಡಣೆಗೊಳ್ಳುವ ತರಂಗಾಂತರ ಶ್ರೇಣಿ.
ಗಾಮಾ ರೇಸ್( ಗಾಮಾ ರೇಡಿಯೇಷನ್) – ಗಾಮಾ ಕಿರಣಗಳು ( ಗಾಮಾ ವಿಕಿರಣ) – ತುಂಬ ಚಿಕ್ಕ ತರಂಗಾಂತರವುಳ್ಳ ವಿದ್ಯುತ್ಕಾಂತೀಯ ವಿಕಿರಣ.
ಗ್ಯಾಲ್ವನೋಸ್ಟ್ಯಾಟ್ – ಸ್ಥಿರ ವಿದ್ಯುತ್ ಉತ್ಪಾದಕ – ಹೆಚ್ಚಿನ ವಿದ್ಯುತ್ ಸಾಮರ್ಥ್ಯ ಇರುವ ವಿದ್ಯುತ್ ಕೋಶದಿಂದ ಸ್ಥಿರ ವಿದ್ಯುತ್ತನ್ನು ಉತ್ಪಾದಿಸಬಲ್ಲ ಉಪಕರಣ.
ಗ್ಯಾಲ್ವನೋಮೀಟರ್ – ಗ್ಯಾಲ್ವನೋಮೀಟರು ಅಥವಾ ಕಿರುವಿದ್ಯುತ್ ಪತ್ತೆಯಂತ್ರ – ತುಂಬ ಕಡಿಮೆ ಪ್ರಮಾಣದ ವಿದ್ಯುತ್ತನ್ನು ಕಂಡು ಹಿಡಿಯಲು ಬಳಸುವ ಒಂದು ಉಪಕರಣ.
ಗ್ಯಾಲ್ವನೈಝ್ಡ್ ಐರನ್ – ಲೋಹ ಲೇಪಿತ ಕಬ್ಬಿಣ – ತುಕ್ಕು ಹಿಡಿಯದಂತೆ, ಸತುವಿನ ಪದರವೊಂದನ್ನು ಲೇಪಿಸಿರುವ ಕಬ್ಬಿಣ ಅಥವಾ ಉಕ್ಕು.