Ionosphere

ಅಯಾನೋಸ್ಫಿಯರ್ – ವಿದ್ಯುದಣು ಮಂಡಲ – ಭೂಮಿಯ ಹವಾಮಾನದ ಎತ್ತರದ ಮಟ್ಟಗಳಲ್ಲಿ ರೇಡಿಯೋ ಅಲೆಗಳನ್ನು ( ಒಂದು ರೀತಿಯ ವಿದ್ಯುತ್ಕಾಂತೀಯ ಅಲೆಗಳಿವು)  ಪ್ರತಿಫಲಿಸುವ ಹಾಗೂ ತನ್ಮೂಲಕ ರೇಡಿಯೋ ಪ್ರಸಾರವನ್ನು ಸಾಧ್ಯ ಮಾಡುವ ಪ್ರದೇಶ.

Ionizing radiation

ಅಯಾನೈಸಿಂಗ್ ರೇಡಿಯೇಷನ್ – ವಿದ್ಯುದಣು ನಿರ್ಮಾಣ ವಿಕಿರಣ – ಒಂದು ವ್ಯವಸ್ಥೆಯಲ್ಲಿ ವಿದ್ಯುದಣು ನಿರ್ಮಾಣ ಮಾಡಲು ಬೇಕಾದಷ್ಟು ಶಕ್ತಿಯನ್ನು ಹೊಂದಿರುವಂತಹ ವಿಕಿರಣ.

ಕನ್ನಡ ಗಾದೆಮಾತು – ನಮ್ಮೋರಿಗೆ ಮುಳುಗಿ ಬಾ ಸಟ್ಟುಗ, ಅನ್ನಿಗರಿಗೆ ತೇಲಿ ಬಾ ಸಟ್ಟುಗ.

ವಿಚಿತ್ರ ಅನ್ನಿಸಿದರೂ  ಕುಟುಂಬಗಳಲ್ಲಿ  ನಿಜವಾಗಿಯೂ ನಡೆಯುವ ಒಂದು ಪಕ್ಷಪಾತವನ್ನು ಈ ಗಾದೆ ಮಾತು ಪರಿಚಯಿಸಿದೆ.  ಮನೆಗಳಲ್ಲಿ ತುಂಬ ಜನ ಒಟ್ಟಿಗೆ ಊಟಕ್ಕೆ ಕುಳಿತಾಗ ಬಡಿಸುವವರು ತಮಗೆ ಇಷ್ಟ ಇರುವವರಿಗೆ ಸಾರಿನ ಹೋಳುಗಳು ಜಾಸ್ತಿ ಬರುವಂತೆ ಸಟ್ಟುಗ ಅಥವಾ ಸೌಟನ್ನು ಪಾತ್ರೆಯ ಆಳಕ್ಕೆ ಹೋಗುವಂತೆ ಮುಳುಗಿಸಿ‌ ಬಡಿಸುವುದು, ತಮಗೆ ಇಷ್ಟ ಇಲ್ಲದವರಿಗೆ ಸಟ್ಟುಗವನ್ನು ಮೇಲೆ ಮೇಲೆಯೇ  ತೇಲಿಸಿ ನೀರು ನೀರಾದ ಸಾರನ್ನು ಬಡಿಸುವುದು – ಹೀಗೆ ಮಾಡುತ್ತಾರೆ. ‌ಈ ರೀತಿಯಲ್ಲಿ ತಮ್ಮ ಸಹಜೀವಿಗಳ ನಡುವೆ ಕೆಲವೊಮ್ಮೆ ಬಹಳ ಸೂಕ್ಷ್ಮವಾದ ರೀತಿಯಲ್ಲಿ […]

ಕನ್ನಡ ನಾಡಿನ ಒಂದು ಸರಳ ಪ್ರಾದೇಶಿಕ ಖಾದ್ಯ – ಕಲ್ಲನ್ನ

ಕನ್ನಡ ನಾಡಿನ ಪ್ರಕೃತಿ ಸಿರಿಯಂತೆ ಸಂಸ್ಕೃತಿ ಸಂಪತ್ತು ಸಹ ವೈವಿದ್ಯಮಯವಾದದ್ದು ಹಾಗೂ ಕೌತುಕ ಹುಟ್ಟಿಸುವಂಥದ್ದು.‌ ಇದರಲ್ಲಿ ಅದ್ಭುತವಾದ ಖಾದ್ಯವಿಶೇಷಗಳೂ ಸೇರಿವೆ. ‌ಇವುಗಳಲ್ಲಿ ತುಂಬ ಸರಳವಾದ ಆದರೆ ಅಚ್ಚರಿ ಹುಟ್ಟಿಸುವಂತಹ ಒಂದು ತಿನಿಸು ಅಂದರೆ ಕಲ್ಲನ್ನ.  ಉತ್ತರ ಕನ್ನಡದ ಸಿರ್ಸಿಯಿಂದ ಶಿವಮೊಗ್ಗದ ತನಕ ಈ ತಿನಿಸು ರೂಢಿಯಲ್ಲಿದೆ. ನದೀತೀರದಲ್ಲಿರುವ ನಿಂಬೆ-ಕಿತ್ತಳೆ ಗಾತ್ರದ ಬೆಣಚು ಕಲ್ಲುಗಳನ್ನು ಮನೆಗೆ ತಂದು, ತೊಳೆದು ಒರೆಸಿ, ಸೌದೆ ಒಲೆಯೊಳಗೆ ಹಾಕಿ ಅವುಗಳನ್ನು ಕೆಂಪಗೆ ಕಾಯಿಸುತ್ತಾರಂತೆ. ನಂತರ ಬಾಳೆ ಎಲೆ ಅಥವಾ ಅರಿಶಿನದ ಎಲೆಯ ಮೇಲೆ ಬಿಸಿ […]

Ionisation gauge

ಅಯೊನೈಸೇಷನ್ ಗಾಜ್ – ವಿದ್ಯುದಣು ನಿರ್ಮಾಣ ಅಳತೆ ಉಪಕರಣ – ಒಂದು ನಿರ್ವಾತ ಅಳತೆ ಉಪಕರಣವಿದು‌. ಇದರಲ್ಲಿನ ಅನಿಲದ ಒತ್ತಡವನ್ನು ಅದರ ವಿದ್ಯುದಣು ನಿರ್ಮಾಣದ ಮಟ್ಟದಿಂದ ಅಳೆಯಲಾಗುತ್ತದೆ‌.

Ionisation energy

ಅಯೊನೈಸೇಷನ್ ಎನರ್ಜಿ‌- ವಿದ್ಯುದಣು ನಿರ್ಮಾಣ ಶಕ್ತಿ – ಒಂದು ತಟಸ್ಥ ಅನಿಲದ ಅಣುವಿನಿಂದ  ಎಲೆಕ್ಟ್ರಾನೊಂದನ್ಬು ಹೊರತೆಗೆಯಲು ಬೇಕಾದ ಶಕ್ತಿ.

Ion irradiation

ಅಯಾನ್ ಇರ್ರೇಡಿಯೇಷನ್ – ವಿದ್ಯುದಣು ವಿಕಿರಣೀಕರಣ – ತುಂಬ ಶಕ್ತಿಯುತವಾದ ವಿದ್ಯುದಣುಗಳ ಮಳೆಯನ್ನು ಒಂದು ವಸ್ತುವಿನ ಮೇಲೆ ಸುರಿಸುವುದು.  

Ion engine

ಅಯಾನ್ ಇಂಜಿನ್ – ವಿದ್ಯುದಣು ಚಾಲಕ ಯಂತ್ರ – ವಿದ್ಯುದಣುಗಳ ಪುಂಜವನ್ಬು ಬಳಸಿಕೊಂಡು ಬಾಹ್ಯಾಕಾಶ ನೌಕೆಗಳನ್ನು ಮೇಲಕ್ಕೆ ಚಿಮ್ಮಿಸುವ ಒಂದು ಚಾಲಕ ಯಂತ್ರ‌( ಇಂಜಿನ್).

Ion density

ಅಯಾನ್ ಡೆನ್ಸಿಟಿ‌ – ವಿದ್ಯುದಣು ಸಾಂದ್ರತೆ – ಒಂದು ಘಟಕ ಅಳತೆಯ ಪರಿಮಾಣದಲ್ಲಿ ಲಭ್ಯವಿರುವಂತಹ ವಿದ್ಯುದಣುಗಳ ಅಥವಾ ಅಯಾನುಗಳ ಸಾಂದ್ರತೆ. ಇದನ್ನು ಸಾಮಾನ್ಯವಾಗಿ ವಿದ್ಯುದಣು ಸಾರತೆ ಎನ್ನುತ್ತಾರೆ.

ಕನ್ನಡ ಗಾದೆಮಾತು – ಬಾಯಿದ್ದೋನಿಗೆ ಬರಗಾಲವಿಲ್ಲ, ರಾಗವಿದ್ದೋನಿಗೆ ಬೇಜಾರಿಲ್ಲ.

ಜನರೊಂದಿಗೆ ನಿಸ್ಸಂಕೋಚವಾಗಿ ಮಾತಾಡಿಕೊಂಡಿರುವವರಿಗೆ ಬದುಕು ಸಮೃದ್ಧವಾಗಿರುತ್ತದೆ ಎಂಬುದು ನಾವು ಸಾಮಾನ್ಯವಾಗಿ ಗಮನಿಸುವ ಸಂಗತಿ.‌ ಯಾರೋ ಕಾಫಿ ಕುಡಿಸುತ್ತಾರೆ, ಇನ್ಯಾರೋ ಊಟಕ್ಕೆ ಕರೆಯುತ್ತಾರೆ, ಮತ್ಯಾರೋ ತಮ್ಮ ಮನೆಯಲ್ಲಿ ಆಶ್ರಯ ಕೊಡುತ್ತಾರೆ, ಅಥವಾ ಎಲ್ಲಿ ಸಹಾಯ ಸಿಗುತ್ತದೆ ಎಂದು ಹೇಳುತ್ತಾರೆ‌‌‌‌. ಹೀಗಾಗಿ ಬಾಯಿ ಇದ್ದವರು ಬರಗಾಲವನ್ನು ಅನುಭವಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಇದೇ  ರೀತಿಯಲ್ಲಿ, ಹಾಡಲು ಬರುವವರು ಒಂಟಿಯಾಗಿದ್ದರೂ ಯಾವುದೋ ಹಾಡನ್ನು ಗುನುಗಿಕೊಂಡು ಸಂತೋಷದಿಂದ ತಮ್ಮ ಪಾಡಿಗೆ ತಾವು ಸಮಯ ಕಳೆಯಬಲ್ಲರು. ಅವರಿಗೆ ಯಾರೂ ತಮ್ಮನ್ನು ಮಾತಾಡಿಸುತ್ತಿಲ್ಲ ಎಂಬ ಕೊರಗು ಉದ್ಭವಿಸುವುದಿಲ್ಲ. […]

Page 30 of 139

Kannada Sethu. All rights reserved.