Fly wheel

ಫ್ಲೈ ವ್ಹೀಲ್ – ಗತಿದಾಯಿ ಚಕ್ರ ಅಥವಾ ಮುಖ್ಯ ಚಕ್ರ – ಯಂತ್ರೋಪಕರಣಗಳಲ್ಲಿ ಶಕ್ತಿ ಸಂರಕ್ಷಕ ಉಪಕರಣವಾಗಿ ಬಳಸುವ ಒಂದು ದೊಡ್ಡ ಚಕ್ರ ಇದು.

Flux meter

ಫ್ಲಕ್ಸ್ ಮೀಟರ್ – ಬಲರೇಖಾ ಮಾಪಕ – ಕಾಂತೀಯ ಬಲರೇಖೆಗಳನ್ನು ಅಳೆಯಲು ಬಳಸುವ ಉಪಕರಣ. ಗ್ಯಾಲ್ವನೋಮೀಟರ್ ಹಾಗೂ ಲೋಹದ ಒಂದು ಸುರುಳಿಯನ್ನು ಬಳಸಿ‌‌ ಇದನ್ನು ತಯಾರು ಮಾಡಿರುತ್ತಾರೆ.

Flux density( magnetic)

ಫ್ಲಕ್ಸ್ ಡೆನ್ಸಿಟಿ (ಮ್ಯಾಗ್ನೆಟಿಕ್) – (ಕಾಂತೀಯ) ಬಲರೇಖಾ ಸಾಂದ್ರತೆ – ಒಂದು ಬಿಂದುವಿನಲ್ಲಿ ಏಕ ಘಟಕ ವಿಸ್ತೀರ್ಣದಲ್ಲಿರುವ‌ ಕಾಂತೀಯ ರೇಖೆಗಳು.

ಕನ್ನಡ ಗಾದೆಮಾತು – ರಾತ್ರಿಯೆಲ್ಲಾ ರಾಮಾಯಣ ಕೇಳಿ ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು ಸಂಬಂಧ ಅಂದ ಹಾಗೆ.

ಕನ್ನಡದ ಬಹು ಸ್ವಾರಸ್ಯಕರ ಗಾದೆಮಾತುಗಳಲ್ಲಿ‌ ಇದಕ್ಕೆ ಮೊದಲ ಸ್ಥಾನ ಕೊಟ್ಟರೆ ತಪ್ಪಾಗಲಾರದು. ಕೆಲವೊಮ್ಮೆ ನಾವು ಜೀವನದಲ್ಲಿ ನಮ್ಮ ಸಹಜೀವಿಗಳ  ವಿಚಿತ್ರ  ನಡವಳಿಕೆಗಳಿಗೆ ಸಾಕ್ಷಿಯಾಗುತ್ತೇವೆ, ಅಥವಾ ನಾವು ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದೇವೆ ಎಂದು ಅವರಿಗೆ ಅನ್ನಿಸುವ ಸಂದರ್ಭಗಳು ಬರಬಹುದು.‌‌‌ ಇದನ್ನು ತುಸು ವಿವರಿಸುತ್ತೇನೆ.‌ ಒಬ್ಬರು ಇನ್ನೊಬ್ಬರಿಗೆ ರಾಮಾಯಣದ ಕಥೆಯನ್ನು ರಾತ್ರಿಯೆಲ್ಲ ವಿಶದವಾಗಿ ಹೇಳಿದರು ಎಂದು ಇಟ್ಟುಕೊಳ್ಳೋಣ. ಕೇಳುವವರು ಎಲ್ಲ ಕೇಳಿಸಿಕೊಂಡ ಮೇಲೆ ‘ಹೌದು, ರಾಮನಿಗೂ ಸೀತೆಗೂ ಏನು ಸಂಬಂಧ ಅಂತ ಸ್ವಲ್ಪ ಹೇಳಿ ಮತ್ತೆ? ‘ ಅಂತ ಕೇಳಿದರೆ ತನ್ಮಯವಾಗಿ […]

ಬಳಸು ಇಲ್ಲವೇ ಕಳೆದುಕೋ – ಕನ್ನಡ ಪದಗಳಿಗೂ ಅನ್ವಯಿಸುವ ಜೀವಶಾಸ್ತ್ರದ ನಿಯಮ.

ಯೂಸ್ ಇಟ್ ಆರ್ ಲೂಸ್ ಇಟ್ – ಜೀವಿಗಳು ತಮ್ಮ ದೇಹದ ಅಂಗಗಳನ್ನು ದೀರ್ಘ ಕಾಲ ಬಳಸದೆ ಹೋದರೆ  ಆ ಜೀವಿಗಳ ಮುಂದಿನ ಪೀಳಿಗೆಗಳು ಆ ಅಂಗವನ್ನು ಕಳೆದುಕೊಳ್ಳುತ್ತವೆ ಎಂಬುದು ಜೀವಶಾಸ್ತ್ರದ ನಿಯಮ. ‌ಒಬ್ಬ ಕನ್ನಡ  ಭಾಷಾ ಅಧ್ಯಾಪಕಿಯಾಗಿ ನನಗೆ ಈ‌ ನಿಯಮವು ಕನ್ನಡ ಭಾಷೆಯ ಪದಗಳಿಗೂ ಅನ್ವಯಿಸುತ್ತದೆ ಅನ್ನಿಸುತ್ತದೆ. ‌ಸೊಗಸು, ಅವ್ಸರ, ಸಾಂಗ, ಫಜೀತಿ, ಪಿಚ್ಚೆನ್ನಿಸು, ವರ್ತ್ನೆ, ಶಾಮೀಲು, ಧಾರಾಳ, ನಿಧಾನಸ್ಥ, ತಿಂದೂ ಉಂಡೂ, ಕಂಡಿದಾರೆ ಕಂಡಿದಾರೆ, ಚಳುಕು, ಕುಸುಬಿಷ್ಟೆ, ರಾಜಾರೋಷವಾಗಿ, ದಂಡಿಯಾಗಿ, ಮಾರಾಯ್ರಾಗಿ…….ನಮ್ಮ ತಾತ, ಅಜ್ಜಿಯ ಕಾಲದಲ್ಲಿ […]

Flux

ಫ್ಲಕ್ಸ್ – ವಸ್ತುಪ್ರವಾಹ ಅಥವಾ ಶಕ್ತಿಪ್ರವಾಹ – 1. ವಸ್ತು ಅಥವಾ ಶಕ್ತಿಯು ಹರಿಯುತ್ತಿರುವ ದಿಕ್ಕಿಗೆ ಲಂಬವಾಗಿರುವ ಏಕಘಟಕ ವಿಸ್ತೀರ್ಣದಲ್ಲಿ, ಹರಿಯುವ ಆ ವಸ್ತು ಅಥವಾ ಶಕ್ತಿಯ ಹರಿವಿನ‌ ಗತಿ.

2. ಕ್ಷೇತ್ರದಲ್ಲಿನ  ಬಲದ ರೇಖೆಗಳ ಸಂಖ್ಯೆ.

Flute

ಫ್ಲೂಟ್ – ಒಂದು ಸಂಗೀತವಾದ್ಯ: ಒಂದು‌ ಕೊಳವೆಯುದ್ದಕ್ಕೂ ಆರು ರಂಧ್ರಗಳನ್ನು ಮಾಡಿರುತ್ತಾರೆ. ಇದರ ಒಂದು ತುದಿಯಲ್ಲಿರುವ ಬಾಯಿಯಲ್ಲಿ ಊದಿದ ಗಾಳಿಯು ಕಂಪನಕ್ಕೆ ಒಳಗಾಗುತ್ತದೆ. ಇದರ ರಂಧ್ರಗಳ ಮೇಲೆ ಬೆರಳುಗಳನ್ನು ಬೇರೆ‌ ಬೇರೆ ಸಂಯೋಜನೆಯಲ್ಲಿ ಇಟ್ಟು ತೆರೆದು ಮಾಡಿದಾಗ ಬೇರೆ ಬೇರೆ ಸ್ವರಗಳು ಹುಟ್ಟುತ್ತವೆ.

Fluoroscope

ಫ್ಲೂರೋಸ್ಕೋಪ್ – ಬಹಿರ್ ಪ್ರಕಾಶದರ್ಶಕ – ಸೂಕ್ತವಾದ ರೀತಿಯಲ್ಲಿ ಏರಿಸಲ್ಪಟ್ಟ ಬಹಿರ್ ಪ್ರಕಾಶ ಪರದೆಯನ್ನು ಹೊಂದಿರುವ ಒಂದು ಉಪಕರಣ. ಇದರಲ್ಕಿ ಕ್ಷ-ಕಿರಣ ಕೊಳವೆಯನ್ನು ಸಹ ಅಳವಡಿಸಲಾಗಿರುತ್ತದೆ. ಇದರಿಂದಾಗಿ ಪರದೆ ಮತ್ತು ಕ್ಷ-ಕಿರಣ ಕೊಳವೆಗಳ ನಡುವೆ ಇಟ್ಟ ವಸ್ತುವಿನ ಕ್ಷ-ಕಿರಣ ನೆರಳಿನ ದೃಗ್ಗೋಚರ ಬಿಂಬವು ಪರದೆಯಲ್ಲಿ‌ ಕಾಣಿಸುತ್ತದೆ. 

Fluorescent lamp

ಪ್ಲೋರೋಸೆಂಟ್ ಲ್ಯಾಂಪ್ – ಬಹಿರ್ ಪ್ರಕಾಶ ಬೀರುವ ವಸ್ತುವೊಂದನ್ನು ಒಂದು ಗಾಜಿನ ಕೊಳವೆಯ ಒಳಭಾಗಕ್ಕೆ ಹೆಚ್ಚಿದ್ದು, ಇದು ಬೆಳಕಿನ ಆಕರದಂತೆ ಕೆಲಸ ಮಾಡುವ ವ್ಯವಸ್ಥೆ.

Fluoroscence 

ಫ್ಲೋರೋಸೆನ್ಸ್ –  ಬಹಿರ್ ಪ್ರಕಾಶ – ಕೆಲವು ವಸ್ತುಗಳು ಒಂದು ತರಂಗಾಂತರದ ಬೆಳಕನ್ನು ಹೀರಿಕೊಂಡು ಇನ್ನೊಂದು ತರಂಗಾಂತರದ ಬೆಳಕನ್ನು ಹೊರಚೆಲ್ಲುತ್ತವೆ‌. ಇದು ಒಂದು ರೀತಿಯ ಸ್ವಯಂಪ್ರಕಾಶವಾಗಿರುತ್ತದೆ.

Page 39 of 107

Kannada Sethu. All rights reserved.