ತುಂಬ ಜೀವನಾನುಭವ ಇರುವ ಒಂದು ಗಾದೆಮಾತು ಇದು ; ಒಬ್ಬ ತಾಯಿಯ ಅನುಭವವನ್ನು ಮನೋಜ್ಞವಾಗಿ ಹೇಳುವಂತಹ ಗಾದೆಮಾತು. ಬೆಳೆಯುತ್ತಿರುವ ಗಂಡು ಮಕ್ಕಳಿಗೆ ಆಹಾರವು ತುಂಬ ಹೆಚ್ಚು ಪ್ರಮಾಣದಲ್ಲಿ ಬೇಕು. ಹೀಗಾಗಿ ತಾಯಿಯು ಎಲ್ಲರ ಊಟ-ತಿಂಡಿ ಆದ ಮೇಲೆ ತನಗಾಗಿ ಮಾಡಿಟ್ಟುಕೊಂಡಿರುವ ದೋಸೆ/ಚಪಾತಿ/ಪೂರಿ/ಅನ್ನ ಮುಂತಾದ ಆಹಾರ ಪದಾರ್ಥಗಳನ್ನು ತೋಳದಂತಹ ಹಸಿವುಳ್ಳ ತನ್ಮ ಹದಿಹರೆಯದ ಮಗನಿಗೆ ಕೊಡಬೇಕಾಗಿ ಬರಬಹುದು. ಹಾಗೆಯೇ, ಬೆಳೆಯುತ್ತಿರುವ ಹೆಣ್ಣು ಮಗಳಿದ್ದಾಳೆ ಅಂದರೆ ತಾಯಿಯ ಒಳ್ಳೊಳ್ಳೆ ಸೀರೆ, ಒಡವೆ, ಮುಖಾಲಂಕಾರ ಸಾಮಗ್ರಿಗಳನ್ನು ತುಂಬ ಇಷ್ಟಪಟ್ಟು ಬಳಸಲಾರಂಭಿಸುತ್ತಾಳೆ. ಏಕೆಂದರೆ, […]
ಇಂಪಲ್ಸ್ ( ಇಂಪಲ್ಸಿವ್ ಫೋರ್ಸ್) – ಹಠಾತ್ತಾದ ಕ್ರಿಯೆ (ಹಠಾತ್ತಾಗಿ ವರ್ತಿಸುವ ಬಲ) – ಢಿಕ್ಕಿ ಹೊಡೆದಾಗ ಆಗುವಂತೆ ತುಂಬ ಕಡಿಮೆ ಕಾಲದಲ್ಲಿ ವರ್ತಿಸುವ ಬಲ.
ಇಂಪೀರಿಯಲ್ ಯೂನಿಟ್ಸ್ – ರಾಜಪ್ರಭುತ್ವದ ಮೂಲಮಾನಗಳು – ಗಜ ( ಯಾರ್ಡ್) ಮತ್ತು ಪೌಂಡ್ ಗಳ ಮೇಲೆ ಆಧಾರಿತವಾದ ಅಳತೆಯ ವ್ಯವಸ್ಥೆ. IPS – ಇಂಚು – ಪೌಂಡ್ – ಸೆಕೆಂಡ್ ವ್ಯವಸ್ಥೆಯು ಈ ರಾಜಪ್ರಭುತ್ವದ ಮೂಲಮಾನಗಳ ಮೇಲೆ ಆಧಾರಿತವಾದ ಅಳತೆ ವ್ಯವಸ್ಥೆಯಾಗಿದೆ.
ಇಂಪೀಡೆನ್ಸ್ ಬ್ರಿಡ್ಜ್ – ಅಡ್ಡಿಯ ಸೇತುವೆ – ವ್ಹೀಟ್ ಸ್ಟೋನ್ ವಿದ್ಯುನ್ಮಂಡಲಕ್ಕೆ ತುಂಬ ಹೋಲಿಕೆ ಇರುವ ಒಂದು ವಿದ್ಯುತ್ ಉಪಕರಣ. ಇದನ್ನು ಅಡ್ಡಿಗಳನ್ನು ತುಲನೆ ಮಾಡಲು ಬಳಸಲಾಗುತ್ತದೆ.
ಇಂಪೀಡೆನ್ಸ್ ( ಸಿಂಬಲ್ Z) – ಅಡ್ಡಿ ( ಸಂಕೇತ Z) – ವಿದ್ಯುನ್ಮಂಡಲವೊಂದು ಪರ್ಯಾಯ ವಿದ್ಯುತ್ ಗೆ ಒಡ್ಡುವ ಪ್ರತಿರೋಧದ ಅಳತೆ.
ಇಮ್ಮರ್ಶನ್ ಆಬ್ಜೆಕ್ಟಿವ್ – ಮುಳುಗಿಸಿಟ್ಟ ಮಸೂರ – ಸೂಕ್ಷ್ಮದರ್ಶಕದಲ್ಲಿ ಇರುವಂತಹ ಹೆಚ್ಚಿನ ಸಾಮರ್ಥ್ಯವುಳ್ಳ ಒಂದು ರೀತಿಯ ವಸ್ತುಮಸೂರ ಇದು. ( ವಸ್ತು ಮಸೂರ = ನೋಡುತ್ತಿರುವ ವಸ್ತುವಿಗೆ ಅತ್ಯಂತ ಹತ್ತಿರ ಇರುವ ಮಸೂರ).
ಇಂಪ್ಯಾಕ್ಟ್ ವೆಲಾಸಿಟಿ – ಅಪ್ಪಳಿಸುವ ವೇಗ – ಮುಂದಕ್ಕೆ ಚಿಮ್ಮಿಸಿದಂತಹ ವಸ್ತುವು( ಉದಾಹರಣೆಗೆ ಕ್ಷಿಪಣಿ ) ಅಪ್ಪಳುಸುವ ಕ್ಷಣದಲ್ಲಿ ಹೊಂದಿರುವಂತಹ ದಿಶಾವೇಗ. ಇದನ್ನು ಅಪ್ಪಳಿಸುವ ದಿಕ್ವೇಗ ಎಂದೂ ಕರೆಪದಪ್ರಯೋಗ
Like us!
Follow us!