ಫ್ರೆಂಕೆಲ್ ಡಿಫೆಕ್ಟ್ – ಫ್ರೆಂಕೆಲ್ ದೋಷ – ಒಂದು ಹರಳಿನ ರಚನೆಯಲ್ಲಿ ಒಂದು ಪರಮಾಣು ಅಥವಾ ಒಂದು ವಿದ್ಯುದಣು ತನ್ನ ಸಾಮಾನ್ಯ ಸ್ಥಾನದಿಂದ ತೆಗೆದುಹಾಕಲ್ಪಟ್ಟು, ಪರಮಾಣು ಸಾಲು ಮತ್ತು ವಿದ್ಯುದಣುಗಳ ಸಾಲಿನ ಮಧ್ಯೆ ಸ್ಥಿತಗೊಳ್ಳುವಂಥದ್ದು.
ಫ್ರೀಝಿಂಗ್ ಮಿಕ್ಸ್ಚರ್ – ಹೆಪ್ಪುಗಟ್ಟುವ ಮಿಶ್ರಣ – ತುಂಬಾ ಶೀತತೆಯನ್ನು ಅಂದರೆ ಅತ್ಯಂತ ಕಡಿಮೆ ಉಷ್ಣತೆಯನ್ನು ಉತ್ಪತ್ತಿ ಮಾಡಲು ಬಳಸುವಂತಹ ಒಂದು ವಸ್ತುಮಿಶ್ರಣ ಇದು. ಉದಾಹರಣೆಗೆ, ಮಂಜುಗಡ್ಡೆ ಮತ್ತು ಉಪ್ಪಿನ ಮಿಶ್ರಣ.
ಫ್ರೀಝಿಂಗ್ – ಹೆಪ್ಪುಗಟ್ಟುವಿಕೆ – ದ್ರವ ಸ್ಥತಿಯಿಂದ ಘನ ಸ್ಥಿತಿಗೆ ಮಾರ್ಪಾಡಾಗುವ ಪ್ರಕ್ರಿಯೆ.
ಫ್ರೀ ಸರ್ಫೇಸ್ ಎನರ್ಜಿ – ಮುಕ್ತ ಮೇಲ್ಮೈ ಶಕ್ತಿ – ತೆರೆದುಕೊಂಡ ಒಂದು ಮೇಲ್ಮೈ ಯಲ್ಲಿನ ಏಕಘಟಕ ಪ್ರದೇಶವು ಹೊಂದಿರುವ ಶಕ್ತಿ.
ಫ್ರೀ ಆಸ್ಸಿಲೇಷನ್ – ಮುಕ್ತ ಆವರ್ತನ – ಒಂದು ವ್ಯವಸ್ಥೆ ಅಥವಾ ವಸ್ತುವಿನ ಸಹಜ ಆವರ್ತನದಲ್ಲಿ ಇರುವ ಆಂದೋಲನ. ಲೋಲಕವೊಂದರ ಈ ಮುಕ್ತ ಆಂದೋಲನವು ಅದರ ಉದ್ದ ಮತ್ತು ದ್ರವ್ಯರಾಶಿಯನ್ನು ಅವಲಂಬಿಸಿರುತ್ತದೆ.
ಫ್ರೀ ಎನರ್ಜಿ – ಮುಕ್ತ ಶಕ್ತಿ – ಉಪಯುಕ್ತ ಕೆಲಸ ಮಾಡಲು ಒಂದು ವ್ಯವಸ್ಥೆಗೆ ಇರುವ ಸಾಮರ್ಥ್ಯ.
ಫ್ರಾನ್ ಹಾಫರ್ ಲೈನ್ಸ್ – ಫ್ರಾನ್ ಹಾಫರ್ ಗೆರೆಗಳು – ಸೂರ್ಯನ ಬೆಳಕಿನಿಂದ ಉಂಟಾಗುವ ವರ್ಣಪಟಲದಲ್ಲಿನ ಗಾಢ ಕಪ್ಪು ಗೆರೆಗಳು. ಈ ಗೆರೆಗಳ ತರಂಗಾಂತರಗಳನ್ನು, ತರಂಗಾಂತರಗಳೊಂದಿಗೆ ಬದಲಾಗುವ ಪರಿಮಾಣಗಳನ್ನು ಗುರುತಿಸಲು ಪರಾಮರ್ಶನ ಮಾನದಂಡಗಳಾಗಿ ಬಳಸುತ್ತಾರೆ. ಉದಾಹರಣೆಗೆ, ವಕ್ರೀಭವನ ಸ್ಥಿರಾಂಕಗಳು.
ಫ್ರೇಮ್ ಆಫ್ ರೆಫರೆನ್ಸ್ – ಪರಾಮರ್ಶನ ಚೌಕಟ್ಟು – ಇದು ನಿರ್ದೇಶಕ ಅಕ್ಷರೇಖೆಗಳ ಒಂದು ಚೌಕಟ್ಟು. ಇದರ ಸಹಾಯದಿಂದ ಸಮಯದೊಂದಿಗೆ ಬದಲಾಗುವ ವಸ್ತುವಿನ ಸ್ಥಾನವನ್ನು ಗುರುತಿಸಬಹುದು.
Like us!
Follow us!