Fresnel lens

 ಫ್ರೆಸ್ನೆಲ್ ಲೆನ್ಸ್ – ಫ್ರೆಸ್ನೆಲ್ ಮಸೂರ – ಒಂದು ರೀತಿಯ ಮಸೂರ ಇದು.‌ ಇದರ ಒಂದು ಮೇಲ್ಮೈಯನ್ನು ಮೆಟ್ಟಿಲು ಮೆಟ್ಟಿಲಾಗಿ ಕತ್ತರಿಸಿರುತ್ತಾರೆ. ಇದರಿಂದಾಗಿ ಈ ಮಸೂರದಿಂದ ಇನ್ನೂ ದಪ್ಪ, ಭಾರ ಹಾಗೂ ದುಬಾರಿಯಾದ ಸಾಂಪ್ರದಾಯಿಕ ಮಸೂರದ ಮೂಲಕ ಆಗುವಂತಹ ಬೆಳಕಿನ ವಕ್ರೀಭವನ ಉಂಟಾಗುತ್ತದೆ.

Fresnel  diffraction

ಫ್ರೆಸ್ನೆಲ್ಸ್ ಡಿಫ್ರ್ಯಾಕ್ಷನ್ – ಫ್ರಸ್ನೆಲ್ ಹಬ್ಬುವಿಕೆ – ಇದು ಒಂದು ರೀತಿಯ (ಬೆಳಕಿನಲೆಯ) ಹಬ್ಬುವಿಕೆ. ಇದರಲ್ಲಿನ ಅಲೆಮುಖವು ಸಮತಲವಾಗಿರುವುದಿಲ್ಲ, ಬಾಗಿರುತ್ತದೆ.

ಕನ್ನಡ ಗಾದೆಮಾತು –  ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ.

ಒಂದು ಗಂಭೀರವಾದ ಜೀವನವಿವೇಕವನ್ನು ತುಂಬ ಚಿತ್ರಕವಾಗಿ, ಕಣ್ಣಿಗೆ ಕಟ್ಟಿದಂತೆ ಹೇಳುವ ಕನ್ನಡ ಗಾದೆ ಮಾತಿದು.‌ ಅಡಿಕೆಯಂತಹ ಪುಟಾಣಿ ವಸ್ತುವನ್ನು ಕದ್ದರೂ, ಆನೆಯಂತಹ ಬಹು ದೊಡ್ಡಗಾತ್ರದ ವಸ್ತುವನ್ನು ಕದ್ದರೂ ಕಳ್ಳತನ ಕಳ್ಳತನವೇ ತಾನೇ. ಹಾಗೆಯೇ ತಾನು ಸಂಬಳ ತೆಗೆದುಕೊಂಡು ಮಾಡುತ್ತಿರುವಂತಹ ಉದ್ಯೋಗದ ವಿಷಯ ಬಂದಾಗ, ತನ್ನ ಕರ್ತವ್ಯ ತಾನು‌ ಮಾಡುವುದಕ್ಕೆ ಒಂದು ರೂಪಾಯಿ ‌ಲಂಚ ತೆಗೆದುಕೊಂಡರೂ ಭ್ರಷ್ಟಾಚಾರವೇ, ಒಂದು ಲಕ್ಷ ರೂಪಾಯಿ ತೆಗೆದುಕೊಂಡರೂ  ಭ್ರಷ್ಟಾಚಾರವೇ. ಒಟ್ಟಿನಲ್ಲಿ ಈ‌ ಗಾದೆಮಾತು ಕಲಿಸುವ ಪಾಠವೇನೆಂದರೆ‌ ಮನುಷ್ಯನು ಕೆಟ್ಟದ್ದರಿಂದ ಸಂಪೂರ್ಣವಾಗಿ ದೂರವಿರಬೇಕು. ‘ಸ್ವಲ್ಪ  ಕೆಟ್ಟದ್ದು,  […]

“ನನ್ನ ಹೆಸರು ಜಾನವಿ‌ ಮ್ಯಾಮ್…ಅದೇ… ನದಿ ಹೆಸರು…”

ಕಾಲೇಜುಗಳಲ್ಲಿ ಹೊಸ ಶೈಕ್ಷಣಿಕ ವರ್ಷದ  ತರಗತಿಗಳು ಪ್ರಾರಂಭವಾದಾಗ  ಅಧ್ಯಾಪಕರು ಹೊಸ ವಿದ್ಯಾರ್ಥಿನಿಯರ ಹೆಸರು ಕೇಳುವುದು ವಾಡಿಕೆ. ಹಾಗೆಯೇ ಈ ನಡುವೆ ನಾನು ಒಂದು ತರಗತಿಯ ವಿದ್ಯಾರ್ಥಿನಿಯರ ಹೆಸರು ಕೇಳುತ್ತಿದ್ದೆ.‌ ಒಬ್ಬ ವಿದ್ಯಾರ್ಥಿನಿ ನನ್ನ ಹೆಸರು ‘ಜಾನವಿ’ ಎಂದಳು. ಅದು ಜಾಹ್ನವಿ ಇರಬೇಕು ಅನ್ನಿಸಿ ನಾನು ”ಜಾಹ್ನವಿಯೇನಮ್ಮ ನಿನ್ನ ಹೆಸರು?” ಎಂದು ಕೇಳಿದೆ.‌ “ಅಲ್ಲ, ಅಲ್ಲ ಮ್ಯಾಮ್, ಜಾನವಿ,  ಅದೇ ಮ್ಯಾಮ್  ನದಿ ಹೆಸರು” ಅಂದಳು.‌  ಆಗ ನನಗೆ ಖಾತ್ರಿ ಆಯಿತು ಇವಳ ಹೆಸರು  ಖಂಡಿತ ಜಾಹ್ನವಿಯೇ, ಆದರೆ […]

Fresnel 

ಪ್ರಸ್ನೆಲ್ – ಫ್ರೆಸ್ನೆಲ್ – ಆವರ್ತನದ ಒಂದು ಮೂಲಮಾನ ಇದು.‌ 1000000000000 ಹರ್ಟ್ಝ್ ಗೆ ಸಮ ಹಾಗೂ ಒಂದು ಟೆರಾ ಹರ್ಟ್ಝ್ ಗೆ ಸಮ‌‌. ಇದು ಎ.ಜೆ.ಫ್ರೆಸ್ನೆಲ್ ( 1788-1827) ಎಂಬ ಫ್ರೆಂಚ್ ವಿಜ್ಞಾನಿಯ ನೆನಪಿನಲ್ಲಿ ಇಟ್ಟ ಹೆಸರು .

F.M.(Frequency Modulation)

ಎಫ್.ಎಂ – (ಫ್ರೀಕ್ವೆನ್ಸಿ ಮಾಡ್ಯುಲೇಷನ್) – ಪ್ರಸಾರವಾಗಬೇಕಾಗಿರುವ ಶ್ರವ್ಯ ಅಥವಾ ದೃಶ್ಯ ಅಲೆಗೆ ಅನುಗುಣವಾಗಿ ಒಯ್ಯಕ ಅಲೆಯ ಆವರ್ತನವನ್ನು ನಿಯಂತ್ರಿಸುವ ಕ್ರಿಯೆ.

Fly wheel

ಫ್ಲೈ ವ್ಹೀಲ್ – ಗತಿದಾಯಿ ಚಕ್ರ ಅಥವಾ ಮುಖ್ಯ ಚಕ್ರ – ಯಂತ್ರೋಪಕರಣಗಳಲ್ಲಿ ಶಕ್ತಿ ಸಂರಕ್ಷಕ ಉಪಕರಣವಾಗಿ ಬಳಸುವ ಒಂದು ದೊಡ್ಡ ಚಕ್ರ ಇದು.

Flux meter

ಫ್ಲಕ್ಸ್ ಮೀಟರ್ – ಬಲರೇಖಾ ಮಾಪಕ – ಕಾಂತೀಯ ಬಲರೇಖೆಗಳನ್ನು ಅಳೆಯಲು ಬಳಸುವ ಉಪಕರಣ. ಗ್ಯಾಲ್ವನೋಮೀಟರ್ ಹಾಗೂ ಲೋಹದ ಒಂದು ಸುರುಳಿಯನ್ನು ಬಳಸಿ‌‌ ಇದನ್ನು ತಯಾರು ಮಾಡಿರುತ್ತಾರೆ.

Flux density( magnetic)

ಫ್ಲಕ್ಸ್ ಡೆನ್ಸಿಟಿ (ಮ್ಯಾಗ್ನೆಟಿಕ್) – (ಕಾಂತೀಯ) ಬಲರೇಖಾ ಸಾಂದ್ರತೆ – ಒಂದು ಬಿಂದುವಿನಲ್ಲಿ ಏಕ ಘಟಕ ವಿಸ್ತೀರ್ಣದಲ್ಲಿರುವ‌ ಕಾಂತೀಯ ರೇಖೆಗಳು.

ಕನ್ನಡ ಗಾದೆಮಾತು – ರಾತ್ರಿಯೆಲ್ಲಾ ರಾಮಾಯಣ ಕೇಳಿ ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು ಸಂಬಂಧ ಅಂದ ಹಾಗೆ.

ಕನ್ನಡದ ಬಹು ಸ್ವಾರಸ್ಯಕರ ಗಾದೆಮಾತುಗಳಲ್ಲಿ‌ ಇದಕ್ಕೆ ಮೊದಲ ಸ್ಥಾನ ಕೊಟ್ಟರೆ ತಪ್ಪಾಗಲಾರದು. ಕೆಲವೊಮ್ಮೆ ನಾವು ಜೀವನದಲ್ಲಿ ನಮ್ಮ ಸಹಜೀವಿಗಳ  ವಿಚಿತ್ರ  ನಡವಳಿಕೆಗಳಿಗೆ ಸಾಕ್ಷಿಯಾಗುತ್ತೇವೆ, ಅಥವಾ ನಾವು ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದೇವೆ ಎಂದು ಅವರಿಗೆ ಅನ್ನಿಸುವ ಸಂದರ್ಭಗಳು ಬರಬಹುದು.‌‌‌ ಇದನ್ನು ತುಸು ವಿವರಿಸುತ್ತೇನೆ.‌ ಒಬ್ಬರು ಇನ್ನೊಬ್ಬರಿಗೆ ರಾಮಾಯಣದ ಕಥೆಯನ್ನು ರಾತ್ರಿಯೆಲ್ಲ ವಿಶದವಾಗಿ ಹೇಳಿದರು ಎಂದು ಇಟ್ಟುಕೊಳ್ಳೋಣ. ಕೇಳುವವರು ಎಲ್ಲ ಕೇಳಿಸಿಕೊಂಡ ಮೇಲೆ ‘ಹೌದು, ರಾಮನಿಗೂ ಸೀತೆಗೂ ಏನು ಸಂಬಂಧ ಅಂತ ಸ್ವಲ್ಪ ಹೇಳಿ ಮತ್ತೆ? ‘ ಅಂತ ಕೇಳಿದರೆ ತನ್ಮಯವಾಗಿ […]

Page 44 of 112

Kannada Sethu. All rights reserved.