ಪರೀಕ್ಷೆ, ವಿದ್ಯಾರ್ಥಿ, ಮೌಲ್ಯಮಾಪನ ಈ ವಿಷಯಗಳ ಬಗ್ಗೆ ಮಾತಾಡುವಾಗ ನಾವೆಲ್ಲರೂ ಒಂದಲ್ಲ ಒಂದು ಸಲ ‘ಮಕ್ಕಿ ಕಾ ಮಕ್ಕಿ’ ಪದವನ್ನು ಕೇಳಿಯೇ ಇರುತ್ತೇವಲ್ಲವೆ? ಒಂದಕ್ಷರವನ್ನೂ ಬಿಡದೆ ನಕಲು ಮಾಡುವುದನ್ನು ಈ ಪದದಿಂದ ಸೂಚಿಸಲಾಗುತ್ತದೆ. ನೊಣ ಇದ್ದರೆ ಅದನ್ನೂ ಬಿಡದೆ ಹಾಗೇ ನಕಲು ಮಾಡಿಬಿಡುವುದು! ಸ್ವಂತಿಕೆ ಇಲ್ಲದೆ ಇನ್ನೊಬ್ಬರನ್ನು ಅನುಕರಿಸುವವರನ್ನು ಟೀಕಿಸಲು ಈ ಪದವನ್ನು ಬಳಸುತ್ತಾರೆ. ಲೇಖಕಿ ಅನುಪಮಾ ಪ್ರಸಾದ್ ಅವರು ಬರೆದಿರುವ ‘ಕುಂತ್ಯಮ್ಮಳ ಮಾರಾಪು’ ಕಥೆ ಓದುತ್ತಿದ್ದಾಗ ‘ನೊಣಂಪ್ರತಿ’ ಅನ್ನುವ ಪದವನ್ನು ಓದಿದೆ, ಮಕ್ಕಿ ಕಾ ಮಕ್ಕಿ […]
ಹೈಗ್ರೋಮೀಟರ್ – ತೇವಾಂಶ ಮಾಪಕ – ವಾತಾವರಣದಲ್ಲಿರುವ ತೇವಾಂಶವನ್ನು ಅಳೆಯುವಂತಹ ಉಪಕರಣ. ಇದರಲ್ಲಿ ವಿವಿಧ ಬಗೆಗಳಿವೆ. ಯಾಂತ್ರಿಕ, ವಿದ್ಯುತ್ ಬಳಕೆಯ, ಇಬ್ಬನಿ ಬಳಕೆಯ, ತೇವ ಮತ್ತು ಒಣ ಬುರುಡೆಯ …ಹೀಗೆ.
ಹೈಡ್ರೋಮ್ಯಾಗ್ನೆಟಿಕ್ಸ್ – ಜಲಕಾಂತತ್ವ – ವಾಹಕವಾಗಿರುವ ಒಂದು ದ್ರಾವಣವನ್ನು ಏಕಕಾಲದಲ್ಲಿ ವಿದ್ಯುತ್ ಕಾಂತೀಯತೆ ಮತ್ತು ಜಲಚಲನಾ ನಿಯಮಗಳಡಿಯಲ್ಲಿ ಬರುವಂತೆ ಮಾಡಿದಾಗ ಅದರ ಅಧ್ಯಯನ ಮಾಡುವುದು. ಇದನ್ನು ಕಾಂತೀಯ ಜಲಚಲನಾ ಶಾಸ್ತ್ರ ( MHD – Magneto hydrodynamics) ಎಂದೂ ಕರೆಯುತ್ತಾರೆ.
ಹೈಡ್ರೋಮೀಟರ್ – ಜಲಸಾಂದ್ರತಾ ಮಾಪಕ – ದ್ರವಗಳ ಸಾಂದ್ರತೆಯನ್ನು ಅಥವಾ ಸಾಪೇಕ್ಷ (ತುಲನೀಯ) ಸಾಂದ್ರತೆಯನ್ನು ಅಳೆಯಲು ಬಳಸುವ ಉಪಕರಣ.
ಹೈಡ್ರೋಜನ್ ಬಾಂಬ್ – ಜಲಜನಕ ಸ್ಫೋಟವಸ್ತು (ಬಾಂಬು) – ಅತ್ಯಂತ ಹೆಚ್ಚಿನ ಉಷ್ಣತೆಯಲ್ಲಿ ಜಲಜನಕ ಬೀಜಕೇಂದ್ರಗಳ ಸೇರುವಿಕೆಯ ಪ್ರಕ್ರಿಯೆಗಳಿಂದ ನಿರ್ಮಿತವಾಗುವ ಬಲಾಢ್ಯ ಸ್ಫೋಟಕ ವಸ್ತು ಇದು. ಈ ಸೇರುವಿಕೆಯು ಉಷ್ಣತೆಯ ರೂಪದಲ್ಲಿ ಅತ್ಯಂತ ಹೆಚ್ಚಿನ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ.
ಹೈಡ್ರೋ ಎಲೆಕ್ಟ್ರಿಕ್ ಪವರ್ – ಜಲವಿದ್ಯುತ್ ಶಕ್ತಿ – ನೀರಿನ ಹರಿಯುವಿಕೆಯಿಂದ ಉತ್ಪತ್ತಿ ಮಾಡಿದ ವಿದ್ಯುಚ್ಛಕ್ತಿ. ಸಹಜ ಜಲಪಾತಗಳು ಈ ಶಕ್ತಿಗೆ ಆಕರವನ್ನು ಒದಗಿಸುತ್ತವೆ.
ಹೈಡ್ರೋಡೈನಮಿಕ್ಸ್ – ಜಲಚಲನಾ ಶಾಸ್ತ್ರ – ಒತ್ತರಿಸಲಾಗದ ( ಇನ್ಕಂಪ್ರೆಸ್ಸಿಬಲ್) ದ್ರವಗಳ ಚಲನೆ ಮತ್ತು ತಮ್ಮ ಸೀಮೆಗಳ ಜೊತೆ ಈ ದ್ರವಗಳ ಅಂತರ್ ಕ್ರಿಯೆಗಳನ್ನು ಕುರಿತ ಅಧ್ಯಯನ.
ಹೈಡ್ರಾಲಜಿ – ಜಲವಿಜ್ಞಾನ – ವಾತಾವರಣದ ವಾಯುಮಂಡಲ ಹಾಗೂ ಜಲಮಂಡಲಗಳಲ್ಲಿ ನೀರು ಸಿಗುವಂತಹ ಸ್ಥಳಗಳು ಮತ್ತು ಇವಕ್ಕೆ ಸಂಬಂಧಿಸಿದ ಗುಣಲಕ್ಷಣಗಳ ಅಧ್ಯಯನ.
Like us!
Follow us!