ಫೀಲ್ಡ್ ಲೆನ್ಸ್ – ಕ್ಷೇತ್ರ ಮಸೂರ – ಬೆಳಕುವಿಜ್ಞಾನದ ಒಂದು ಉಪಕರಣದಲ್ಲಿನ ಮಸೂರಸಂಯೋಜನೆಗಳಲ್ಲಿ, ಕಣ್ಣಿನಿಂದ ಗರಿಷ್ಠ ದೂರದಲ್ಲಿರುವ ಮಸೂರ.
ಫೀಲ್ಡ್ ಐಯೋನೈಸೇಷನ್ ಮೈಕ್ರೋಸ್ಕೋಪ್ – ಇದು ಕ್ಷೇತ್ರೀಯ ಹೊರಸೂಸುವಿಕೆಯುಳ್ಳ ಸೂಕ್ಷ್ಮದರ್ಶಕದಂತೆಯೇ ಕೆಲಸ ಮಾಡುತ್ತದೆ. ಒಂದೇ ಒಂದು ವ್ಯತ್ಯಾಸವೆಂದರೆ, ಲೋಹದ ಚೂಪುತುದಿಯನ್ನು ನಿರ್ವಾತದಲ್ಲಿಡುವ ಬದಲು ಕಡಿಮೆ ಒತ್ತಡವುಳ್ಳ ಅನಿಲವೊಂದರಲ್ಲಿ ( ಉದಾಹರಣೆಗೆ ಹೀಲಿಯಂ) ಇಟ್ಟಿರುತ್ತಾರೆ.
ಫೀಲ್ಡ್ ಎಮಿಷನ್ ಮೈಕ್ರೋಸ್ಕೋಪ್ – ಕ್ಷೇತ್ರೀಯ ಹೊರಸೂಸುವಿಕೆಯುಳ್ಳ ಸೂಕ್ಷ್ಮದರ್ಶಕ – ಇದು ಒಂದು ರೀತಿಯ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ. ಇದರಲ್ಲಿ ನಿರ್ವಾತದಲ್ಲಿರುವ ಲೋಹದ ಚೂಪುತುದಿಯೊಂದಕ್ಕೆ ಹೆಚ್ಚಿನ ವಿದ್ಯುತ್ ಸಾಮರ್ಥ್ಯವ್ಯತ್ಯಾಸವನ್ನು ನೀಡಿ, ಎಲೆಕ್ಟ್ರಾನುಗಳು ಹೊರಸೂಸುವಂತೆ ಮಾಡಲಾಗುತ್ತದೆ.
ಫೀಲ್ಡ್ ಎಮಿಷನ್ – ಕ್ಷೇತ್ರೀಯ ಹೊರಸೂಸುವಿಕೆ – ಕಾಯಿಸಿದರೂ ತನ್ನ ತಾಪಮಾನವು ಹೆಚ್ಚಾಗದಿರುವ ಮೇಲ್ಮೈ ಯೊಂದರಿಂದ, ತನ್ನಲ್ಲಿರುವ ಪ್ರಬಲ ವಿದ್ಯುತ್ ಕ್ಷೇತ್ರದಿಂದಾಗಿ ಎಲೆಕ್ಟ್ರಾನುಗಳು ಹೊರಸೂಸುವುದು.
ಫೀಲ್ಡ್ ಎಫೆಕ್ಟ್ ಟ್ರ್ಯಾನ್ಸಿಸ್ಟರ್ – ಕ್ಷೇತ್ರ ಪರಿಣಾಮ ಟ್ರ್ಯಾನ್ಸಿಸ್ಟರು – ಇದು ಒಂದು ರೀತಿಯ ಕಾಂತೀಯ ಟ್ರ್ಯಾನ್ಸಿಸ್ಟರು. ಇದು ಅರೆವಾಹಕದಲ್ಲಿನ ವಿದ್ಯುತ್ ಪ್ರವಾಹವನ್ನು ನಿಯಂತ್ರಿಸಲು ವಿದ್ಯುತ್ ಕ್ಷೇತ್ರವನ್ನು ಬಳಸುತ್ತದೆ.
ಫೀಲ್ಡ್ ಕಾಯಿಲ್ – ಕಾಂತಕ್ಷೇತ್ರ ಸುರುಳಿ – ಒಂದು ವಿದ್ಯುತ್ ಉತ್ಪಾದಕ ಯಂತ್ರ ಅಥವಾ ಒಂದು ವಿದ್ಯುತ್ ಜನಕ ಯಂತ್ರದಲ್ಲಿನ ಕಾಂತಕ್ಷೇತ್ರವನ್ನು ಉತ್ಪಾದಿಸುವ ಸುರುಳಿ.
ಫಿಡೆಲಿಟಿ – ನಿಷ್ಠೆ – ವಿದ್ಯುತ್ ಪ್ರಸಾರ ಮಾಡುವ ಒಂದು ವ್ಯವಸ್ಥೆಯು ವಿದ್ಯುತ್ತನ್ನು ಕೊಡುವಾಗ ತಾನು ಪಡೆದುಕೊಳ್ಳುತ್ತಿರುವ ವಿದ್ಯುತ್ ಪ್ರವಾಹದ ಗುಣಲಕ್ಷಣಗಳನ್ನು ಎಷ್ಟರ ಮಟ್ಟಿಗೆ ಹಾಗೆಯೇ ಉಳಿಸಿಕೊಳ್ಳುತ್ತದೆ ಎಂಬುದರ ಅಳತೆ.
ಫೈಬರ್ ಆಪ್ಟಿಕ್ಸ್ – ಗಾಜಿನ ನಾರಿನ ಬೆಳಕು ವಿಜ್ಞಾನ – ಬೆಳಕನ್ನು ಪ್ರಸಾರ ಮಾಡಲು ಪಾರದರ್ಶಕವಾದ ಗಾಜಿನ/ಬೇರೆ ವಸ್ತುವಿನ ನಾರನ್ನು ಬಳಸುವುದು.
Like us!
Follow us!