ಕನ್ನಡ ಭಾಷೆಯಲ್ಲಿ ಆಗಾಗ ಬಳಕೆಯಾಗುವ ಒಂದು ಗಾದೆಮಾತಿದು. ಜೀವನದ ಕೆಲವು ಸನ್ನಿವೇಶಗಳು ಹೇಗಿರುತ್ತವೆ ಅಂದರೆ ನಾವು ಅಂದುಕೊಂಡಂತೆ ಯಾವುದೇ ಉತ್ತಮಿಕೆ, ಅಭಿವೃದ್ಧಿ ಆಗುತ್ತಿರುವುದಿಲ್ಲ, ಹಾಗೆಂದು ತೀರಾ ಇಳಿತವೂ ಆಗುತ್ತಿರುವುದಿಲ್ಲ. ಉದಾಹರಣೆಗೆ ಸೀಮಿತ ಸಂಬಳದ ಮಧ್ಯಮ ವರ್ಗದ ಜೀವನಕ್ರಮ, ತೀರಾ ಹೆಚ್ಚು ಅಂಕ ತೆಗೆದುಕೊಳ್ಳದ ಆದರೆ ನಪಾಸಾಗದ ವಿದ್ಯಾರ್ಥಿಯ ವಿದ್ಯಾಭ್ಯಾಸ ಪರಿಸ್ಥಿತಿ, ಶಾಂತವಾಗಿ ಸಾಗುವ ನಿವೃತ್ತಿ ಜೀವನ…ಇಂಥವುಗಳ ಬಗ್ಗೆ ವ್ಯಾಖ್ಯಾನ ಮಾಡುವಾಗ “ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ” ಎಂಬ ಗಾದೆ ಮಾತನ್ನು ಬಳಸುತ್ತಾರೆ. ಹೆಚ್ಚು ಉತ್ಸಾಹವನ್ನೂ ಮೂಡಿಸದ ಆದರೆ ಅಂತಹ ಆತಂಕಕಾರಿಯೂ […]
ಹಾಟ್ ಸ್ಪಾಟ್ – ಗರಿಷ್ಠ ತಾಪ ಬಿಂದು – ತನ್ನ ಸುತ್ತಮುತ್ತಲ ಪ್ರದೇಶಗಳಿಗೆ ಹೋಲಿಸಿದರೆ ತುಂಬ ಹೆಚ್ಚು ತಾಪಮಾನವುಳ್ಳ ಒಂದು ಪ್ರದೇಶ.
ಹಾಟ್ ವಯರ್ ಮೈಕ್ರೋಫೋನ್ – ಧ್ವನಿಶಕ್ತಿ ಮಾಪಕ – ಶಬ್ಧದ ಅಲೆಗಳ ಎತ್ತರ ಮತ್ತು ತೀಕ್ಷ್ಣತೆಯನ್ನು ಅಳೆಯಲು ಬಳಸುವಂತಹ ಉಪಕರಣ. ಇದರಲ್ಲಿ ವಿದ್ಯುತ್ತಿನ ಮೂಲಕ ಕಾಯಿಸಲಾದ ಒಂದು ತಂತಿಗೆ ಶಬ್ಧದ ಅಲೆಗಳನ್ನು ಹಾಯಿಸಿದಾಗ ಅದರ ಪ್ರತಿರೋಧವು ಕಡಿಮೆಯಾಗುವುದನ್ನು ಅವಲಂಬಿಸಿ, ಶಬ್ಧದ ತೀಕ್ಷ್ಣತೆಯನ್ನು ಅಳೆಯಲಾಗುತ್ತದೆ.
ಹಾಟ್ ವೈರ್ ಗಾಜ್ – ಬಿಸಿತಂತಿಯ ಅಳತೆ ಉಪಕರಣ – ಒಂದು ಅನಿಲವು ಬಿಸಿತಂತಿಯನ್ನು ತಣ್ಣಗಾಗಿಸುವುದನ್ಬು ಅವಲಂಬಿಸಿ, ಒತ್ತಡವನ್ನು ಅಳೆಯುವ ಉಪಕರಣ.
ಹಾಟ್ ಲ್ಯಾಬೊರೇಟರಿ – ಸುಡು ಪ್ರಯೋಗಾಲಯ – ವಿಕಿರಣ ವಸ್ತುಗಳಿಗೆ ಸಂಬಂಧಿಸಿದ ಪ್ರಯೋಗಗಳನ್ನು ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಿದ ಪ್ರಯೋಗಾಲಯ. ಈ ಲೋಹಗಳ ರಾಸಾಯನಿಕ ಕ್ರಿಯಾತ್ಮಕತೆಯು (ರಿಯಾಕ್ಟಿವಿಟಿ) ತುಂಬಾ ಹೆಚ್ಚಿನ ಮಟ್ಟದಲ್ಲಿರುತ್ತದೆ.
ಹಾಟ್ ಕ್ಯಾಥೋಡ್ ಟ್ಯೂಬ್ – ಬಿಸಿ ಋಣವಿದ್ಯುದ್ವಾರ ಕೊಳವೆ ಅಥವಾ ಬಿಸಿ ಕ್ಯಾಥೋಡು – ವಿದ್ಯುತ್ ಹರಿವಿಗಾಗಿ ಬೇಕಾಗುವಂತಹ ಎಲೆಕ್ಟ್ರಾನುಗಳನ್ನು, ಕಾಯಿಸಿದ ಒಂದು ಭಾಗದಿಂದ ಸರಬರಾಜು ಮಾಡುವ ವ್ಯವಸ್ಥೆಯುಳ್ಳ ಒಂದು ವಿದ್ಯುತ್ (ಹರಿವಿನ) ಕೊಳವೆ.
ಹಾಟ್ ಆಟಂ – ಸುಡು ಅಣು – ಅತ್ಯಂತ ಹೆಚ್ಚಾದ ವಿಕಿರಣ ಚಟುವಟಿಕೆ ಮಾಡುತ್ತಿರುವ ಅಣು. ಇದು ಉದ್ರೇಕಿತ ಸ್ಥಿತಿಯಲ್ಲಿರುತ್ತದೆ ಅಥವಾ ತನ್ನ ಸುತ್ತಲಿನ ವಾತಾವರಣದ ತಾಪಮಾನದಲ್ಲಿ ತನಗೆ ಇರಬಹುದಾದದ್ದಕ್ಕಿಂತ ಹೆಚ್ಚಿನ ಮಟ್ಟದ ಚಲನಶಕ್ತಿಯನ್ನು ಹೊಂದಿರುತ್ತದೆ. ಇದು ಸಾಮಾನ್ಯವಾಗಿ ವಿಕಿರಣ ಕ್ರಿಯೆಗಳ ಫಲಿತವಾಗಿರುತ್ತದೆ.
Like us!
Follow us!