ಜೀವನದ ಒಂದು ವಿಪರ್ಯಾಸವನ್ನು ಈ ಗಾದೆಮಾತು ಹೇಳುತ್ತಿದೆ. ಸೌಟು ಸದಾಕಾಲವೂ ರುಚಿಕರವಾದ ಸಾರಿನಲ್ಲೇ ಇದ್ದರೂ ಅದಕ್ಕೆ ಸಾರಿನ ರುಚಿಯನ್ನು ಸವಿಯುವ ಸಾಮರ್ಥ್ಯ ಇರುವುದಿಲ್ಲ. ಇದೇ ರೀತಿಯಲ್ಲಿ ಮನೆ ತುಂಬಾ ಪುಸ್ತಕಗಳಿದ್ದರೂ ಒಂದು ಪುಸ್ತಕವನ್ನೂ ಓದದವರು, ಅತಿ ಸುಂದರವಾದ ಹೂವಿನ ತೋಟದಲ್ಲಿ ಓಡಾಡುತ್ತಿದ್ದರೂ ಒಂದೇ ಒಂದು ಹೂವಿನ ಅಂದವನ್ನೂ ಕಣ್ತುಂಬಿಕೊಳ್ಳದವರು, ಮುದ್ದಾದ ಮಕ್ಕಳ ನಡುವೆ ಇದ್ದರೂ ಒಂದೇ ಒಂದು ಮಗುವಿನ ಮುಗ್ಧ ಚೈತನ್ಯದ ಸಂತೋಷವನ್ನು ಅನುಭವಿಸದವರು, ಅವಕಾಶವಿದ್ದರೂ ಜೀವನ ಸಮೃದ್ಧಿಯಿಂದ ವಂಚಿತರಾಗುತ್ತಾರೆ. ಬದುಕಿನ ಒಂದು ನೈಜ ವಿಷಾದವನ್ನು ಈ […]
ಇಂಡಕ್ಷನ್ ಮೋಟಾರ್ – ವಿದ್ಯುತ್ಪ್ರೇರಣಾ ಮೋಟಾರು- ಪರ್ಯಾಯ ವಿದ್ಯುತ್ ನ ವಿದ್ಯುತ್ ಯಂತ್ರ( ಮೋಟಾರು). ಇದರಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಸಂಪರ್ಕ ಕಲ್ಪಿಸಿದಂತಹ ಬದಲಾಗುತ್ತಿರುವ ಕಾಂತಕ್ಷೇತ್ರವು, ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಸಂಪರ್ಕ ಕಲ್ಪಿಸಿರುವ ಸುರುಳಿಯಲ್ಲಿ ವಿದ್ಯುತ್ತನ್ನು ಪ್ರೇರಿಸುತ್ತದೆ.
ಇಂಡಕ್ಷನ್ ಹೀಟಿಂಗ್ – ವಿದ್ಯುತ್ ಮೂಲಕ ಕಾಯಿಸುವಿಕೆ – ಬದಲಾಗುತ್ತಿರುವ ವಿದ್ಯುತ್ಕಾಂತೀಯ ಕ್ಷೇತ್ರದಿಂದಾಗಿ ಪ್ರೇರಿಸಲ್ಪಡುವ ವಿದ್ಯುತ್ ಪ್ರವಾಹಗಳಿಂದ ( ಇವನ್ನು ಎಡ್ಡಿ ಕರೆಂಟ್ ಎಂದು ಕರೆಯುತ್ತಾರೆ) ಒಂದು ವಿದ್ಯುತ್ ವಾಹಕವನ್ನು ಕಾಯಿಸುವುದು. ಸಾಮಾನ್ಯವಾಗಿ ಇದು ಶಕ್ತಿನಷ್ಟದ ಸನ್ನಿವೇಶವಾಗಿದ್ದರೂ,
ಕರಗಿಸುವಿಕೆ, ಬೆಸುಗೆ ಹಾಕುವಿಕೆ ಮುಂತಾದವುಗಳನ್ನು ಮಾಡಲು ಇದು ತುಂಬ ಉಪಯುಕ್ತವಾಗಿದೆ.
ಇಂಡಕ್ಷನ್ ಫರ್ನೇಸ್ – ವಿದ್ಯುತ್ಪ್ರೇರಣಾ ಕುಲುಮೆ – ವಿದ್ಯುತ್ ಕಾಂತೀಯ ಪ್ರೇರಣೆಯ ಸಹಾಯದಿಂದ ವಿದ್ಯುಚ್ಛಕ್ತಿಯನ್ನು ತಾಪವಾಗಿ ಪರಿವರ್ತಿಸಲು ಬಳಸುವಂತಹ ಉಪಕರಣ.
ಇಂಡಕ್ಷನ್ ಕಾಯಿಲ್ – ವಿದ್ಯುತ್ ಪ್ರೇರಣಾ ಸುರುಳಿ – ಒಂದು ರೀತಿಯ ಪರಿವರ್ತಕ. ಇದನ್ನು ಕಡಿಮೆ ವಿದ್ಯುತ್ ಸಾಮರ್ಥ್ಯವುಳ್ಳ ಆಕರದಿಂದ ಹೆಚ್ಚಿನ ವಿದ್ಯುತ್ ಸಾಮರ್ಥ್ಯ ವುಳ್ಳ ವಿದ್ಯುತ್ ಚಿಮ್ಮುವಿಕೆ( pulses) ಗಳನ್ನು ಉತ್ಪತ್ತಿ ಮಾಡಲು ಉಪಯೋಗಿಸುತ್ತಾರೆ.
ಇಂಡಕ್ಟೆನ್ಸ್ ಮೀಟರ್ – ವಿದ್ಯುತ್ ಪ್ರೇರಕತಾ ಮಾಪಕ – ಒಂದು ವಿದ್ಯುನ್ಮಂಡಲದ ಸ್ವಯಂಪ್ರೇರಕತೆಯನ್ನು ಅಥವಾ ಜೋಡಿ ಮಾಡಲ್ಪಟ್ಟ ಎರಡು ವಿದ್ಯುನ್ಮಂಡಲಗಳ ಪರಸ್ಪರ ಪ್ರೇರಕತೆಯನ್ನು ಕಂಡು ಹಿಡಿಯಲು ಬಳಸುವ ಒಂದು ವಿದ್ಯುತ್ ಉಪಕರಣ.
ಇಂಡಕ್ಷನ್ – ವಿದ್ಯುತ್ ಪ್ರೇರಣೆ – ಒಂದು ಕಾಂತಕ್ಷೇತ್ರದಿಂದಾಗಿ ಒಂದು ವಸ್ತುವಿನ ಸ್ಥಿತಿಯಲ್ಲಿ ಆದ ಬದಲಾವಣೆ.