ಮ್ಯಾಗ್ನೆಟಿಕ್ ಎಲಿಮೆಂಟ್ಸ್ – ಕಾಂತೀಯ ಅಂಶಗಳು – ಕಾಂತೀಯ ಇಳಿಜಾರು, ಕಾಂತೀಯ ಇಳಿಜಾರು ಕೋನ ಮತ್ತು ಭೂಮಿಯ ಕಾಂತಕ್ಷೇತ್ರದ ಅಡ್ಡರೇಖೆಯ ಭಾಗಾಂಶ – ಇವು, ಭೂಮಿಯ ಕಾಂತಕ್ಷೇತ್ರವನ್ನು ಸಂಪೂರ್ಣವಾಗಿ ನಿಷ್ಕರ್ಷೆ ಮಾಡುತ್ತವೆ.
ಮ್ಯಾಗ್ನೆಟಿಕ್ ಡೊಮೇನ್ – ಕಾಂತೀಯ ಪ್ರಾಂತ್ಯ – ಪ್ರಬಲಕಾಂತ ವಸ್ತುಗಳಲ್ಲಿ 1- 0.1 ಮಿಮೀ ಅಗಲವಿರುವ ಅಯಸ್ಕಾಂತಗೊಂಡ ಪ್ರದೇಶಗಳಿರುತ್ತವೆ. ಇವನ್ನು ಕಾಂತೀಯ ಪ್ರಾಂತ್ಯಗಳು ಎನ್ನುತ್ತಾರೆ.
ಮ್ಯಾಗ್ನೆಟಿಕ್ ಡಿಸ್ಕ್ – ಕಾಂತೀಯ ಬಿಲ್ಲೆ ಅಥವಾ ಕಾಂತೀಯ ತಲೆಚಕ್ರ – ಗಣಕಯಂತ್ರದಲ್ಲಿ ಧ್ವನಿಮುದ್ರಿಸುವ ಮಾಧ್ಯಮವಾಗಿ ಬಳಸುವ, ಸಾಮಾನ್ಯವಾಗಿ 35.6 ಸೆಂ.ಮೀ. ವ್ಯಾಸವನ್ನು ಹೊಂದಿರುವ ಒಂದು ತೆಳ್ಳನೆಯ ಅಲ್ಯೂಮಿನಿಯಂ ಬಿಲ್ಲೆ. ಇದರ ಎರಡೂ ಮೇಲ್ಮೈಗಳಿಗೆ ಕಾಂತೀಯ ಕಬ್ಬಿಣದ ಆಕ್ಸೈಡನ್ನು ಲೇಪಿಸಿರುತ್ತಾರೆ.
ಮ್ಯಾಗ್ನೆಟಿಕ್ ಡೈಪೋಲ್ – ಕಾಂತೀಯ ದ್ವಿಧ್ರುವ – ಪರಸ್ಪರ ತುಸು ದೂರವಿರುವ, ಯಾವಾಗಲೂ ಜೊತೆಯಲ್ಲೇ ಬರುವ ಅಯಸ್ಕಾಂತೀಯ ಉತ್ತರ ಹಾಗೂ ದಕ್ಷಿಣ ಧ್ರುವಗಳು.
ಮ್ಯಾಗ್ನೆಟಿಕ್ ಡಿಕ್ಲಿನೇಷನ್ – ಕಾಂತೀಯ ಇಳಿಜಾರು – ಭೂಮಿಯ ಮೇಲ್ಮೈಯಲ್ಲಿ ಅಯಸ್ಕಾಂತೀಯ ಗೋಳ ಮಧ್ಯರೇಖೆಗೂ ಭೌಗೋಳಿಕ ಗೋಳಮಧ್ಯರೇಖೆಗೂ ಇರುವ ಕೋನ.
ಮ್ಯಾಗ್ನೆಟಿಕ್ ಕಾನ್ಸ್ಟೆಂಟ್ – ಕಾಂತೀಯ ಸ್ಥಿರಾಂಕ – ಮುಕ್ತ ಅವಕಾಶ ( ಫ್ರೀ ಸ್ಪೇಸ್) ದಲ್ಲಿನ ಕಾಂತೀಯ ಪ್ರವೇಶ ಸಾಧ್ಯತೆ. ಇದರ ಮೌಲ್ಯವೆಂದರೆ 4π×1÷10000000 ಹೆನ್ರಿ ಪರ್ ಮೀಟರ್.
ಮ್ಯಾಗ್ನೆಟಿಕ್ ಕಂಪಾಸ್ – ಕಾಂತೀಯ ದಿಕ್ಸೂಚಿ – ಕಾಂತ ಬಲದ ಕ್ಷೇತ್ರದ ದಿಕ್ಕನ್ನು ತೋರಿಸಲು ಬಳಸುವಂತಹ ಒಂದು ಉಪಕರಣ.
ಮ್ಯಾಗ್ನೆಟಿಕ್ ಸರ್ಕ್ಯೂಟ್ – ಕಾಂತೀಯ ವಿದ್ಯುನ್ಮಂಡಲ – ಕಾಂತೀಯ ಬಲರೇಖೆಗಳನ್ನು ಒಳಗೊಂಡ ಒಂದು ಮುಚ್ಚಿದ ಪಥ. ಇದರಲ್ಲಿ ಚಾಲಕ ಬಲ, ವಿದ್ಯುತ್ತು ಹಾಗೂ ಪ್ರತಿರೋಧ – ಇವೆಲ್ಲವೂ ಕಾಂತೀಯತೆಗೆ ಸಂಬಂಧ ಪಟ್ಟಿರುತ್ತವೆ.
Like us!
Follow us!