Exosphere 

ಎಕ್ಸೋಸ್ಫಿಯರ್ – ಹೊರಗೋಳ – 400 ಕಿಲೋಮೀಟರುಗಳ ದೂರದಲ್ಲಿ ಇರುವಂತಹ, ಭೂಮಿಯ ಅತ್ಯಂತ ಹೊರಗಿರುವ ವಾತಾವರಣ ಪದರ.

Exoergic

ಎಕ್ಸೋಎರ್ಜಿಕ್ – ಶಕ್ತಿದಾಯಕ  ಪ್ರಕ್ರಿಯೆ – ಶಕ್ತಿಯನ್ನು ಹೊರಸೂಸುವ ಬೀಜಕೇಂದ್ರದ ಪ್ರಕ್ರಿಯೆಯನ್ನು ಸೂಚಿಸುವ ಪದ.

Exitance 

ಎಕ್ಸಿಟೆನ್ಸ್ – ಕಾಂತಿ ಸೂಸುವಿಕೆ – ಒಂದು ಮೇಲ್ಮೈಯ ಏಕಘಟಕ ವಿಸ್ತೀರ್ಣದ ಪ್ರದೇಶವು ಹೊರಸೂಸುವ ಪ್ರಕಾಶಮಾನವಾದ ಅಥವಾ ಹೊಳೆಯುವ ಬೆಳಕು. ಮುಂಚೆ ಇದನ್ನು emittance (ಎಮಿಟೆನ್ಸ್) ಎಂದು ಕರೆಯುತ್ತಿದ್ದರು.

ಕನ್ನಡ ಗಾದೆಮಾತು – ಕಾಮಾಲೆ ಕಣ್ಣಿಗೆ ಲೋಕವೆಲ್ಲ ಹಳದಿ.

ಕಾಮಾಲೆ ರೋಗ ಬಂದರೆ ಕಣ್ಣು ಹಳದಿಯಾಗುವುದು ನಮಗೆ ಗೊತ್ತು. ‌ಈ ರೋಗ ಬಂದವರಿಗೆ ಲೋಕವೆಲ್ಲ ಹಳದಿಯಾಗಿ ಕಂಡರೆ ಅದು ಅವರ ಕಣ್ಣಿನ ಪ್ರಶ್ನೆಯೇ ಹೊರತು ಲೋಕದ ಸಮಸ್ಯೆ ಅಲ್ಲ.‌ ಇದೇ ರೀತಿಯಲ್ಲಿ ಕೆಲವು ಸಲ ಜನ ತಮ್ಮಲ್ಲಿ ದೋಷ ಇಟ್ಟುಕೊಂಡು‌ ಆ ದೋಷವನ್ನು ಲೋಕದ ಜನರಿಗೆಲ್ಲಾ ಆರೋಪಿಸುತ್ತಾರೆ. ಭ್ರಷ್ಟ ಮನಸ್ಸುಗಳು ಹೀಗೆ ಮಾಡುವುದು ಹೆಚ್ಚು.‌ ಇಂತಹ ಮನಸ್ಸುಗಳಿಂದ ನಾವು ದೂರ ಇರುವುದು ಒಳಿತು. Kannada proverb – Kaamale kannige lokavella haladi ( For the jaundice […]

ಅರ್ಥ ಇಲ್ಲದೆಯೇ ಭಾವವನ್ನು ತಲುಪಿಸುವ ಚಮತ್ಕಾರ – ಕನ್ನಡದ ಅನುಕರಣ ಪದಗಳ ಭಂಡಾರ

ನನ್ನ ತಂಗಿ‌ ಅರಳು ಹುರಿದ ಹಾಗೆ ಚಟಪಟ ಅಂತ ಮಾತಾಡ್ತಾಳಪ್ಪ, ಮಗು ಪಿಳಿಪಳಿ ಕಣ್ ಬಿಟ್ಕೊಂಡು ನೋಡ್ತಿತ್ತು, ಸರ್ರನೆ ಹೋಗಿ ಭರ್ರನೆ ಬರ್ತೀನಿ, ನೀರು ಝುಳುಝುಳು ಹರೀತಿದೆ ನೋಡಿ, ಢಣ ಢಣ ಗಂಟೆ ಬಾರಿಸಿತು… ಹೀಗೆ ಅನುಕರಣ ಶಬ್ದಗಳನ್ನು ಬಳಸಿರುವ ವಾಕ್ಯಗಳನ್ನು ಆಗಾಗ ನಾವು ಹೇಳುತ್ತಲೂ ಕೇಳುತ್ತಲೂ ಇರುತ್ತೇವಲ್ಲವೇ? ಈ ಅನುಕರಣ ಶಬ್ದಗಳನ್ನು ವ್ಯಾಕರಣ ಪಂಡಿತರು ಅರ್ಥ ಇಲ್ಲದ ಆದರೆ ಒಂದು ಕ್ರಿಯೆಯ ಸದ್ದನ್ನು ಅನುಕರಿಸುವ ಪದಗಳು ಅನ್ನುತ್ತಾರೆ. ಅನುಕರಣಾವ್ಯಯಗಳು ಎಂದು ಒಂದು ವಿಭಾಗವೇ ಇರುತ್ತೆ ವ್ಯಾಕರಣ […]

ಮೊದಲು ಕಟ್ಟಬೇಕು ಸೇತುವೆ ಮನಗಳಿಗೆ ಇಲ್ದಿದ್ರೆ ಹೇಗೆ ತಲುಪುತ್ತೆ ಕನ್ನಡ‌ ಪಾಠ ಮಕ್ಕಳಿಗೆ?

ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಕನ್ನಡ ಪಾಠ ಮಾಡಿರುವ ನನ್ನಂತಹ ಕನ್ನಡ ಅಧ್ಯಾಪಕರಿಗೆ ಒಂದು ವಿಷಯ ಚೆನ್ನಾಗಿ ಮನದಟ್ಟಾಗಿರುತ್ತದೆ, ಎಂಬುದು ನನ್ನ ಅನಿಸಿಕೆ. ಅದೇನೆಂದರೆ, ಪ್ರಾಥಮಿಕ-ಪ್ರೌಢ-ಪದವಿಪೂರ್ವ- ಪದವಿ …. ಯಾವುದೇ ಹಂತವಾಗಲಿ, ಉತ್ತಮವಾಗಿ ಪಾಠ ಮಾಡುವ ಆಸೆಯುಳ್ಳ ಕನ್ನಡ ಅಧ್ಯಾಪಕರು ಮೊದಲು ವಿದ್ಯಾರ್ಥಿಗಳ ಮನವನ್ನು ಮುಟ್ಟುವ ಸೇತುವೆ ಕಟ್ಟಿಕೊಳ್ಳಬೇಕು; ಆಮೇಲಷ್ಟೇ ಪಾಠ ಮಾಡಬೇಕು.  ‘ಈ ಅಧ್ಯಾಪಕರು ಸಹ ನನ್ನಂತೆ ಒಬ್ಬ ಮನುಷ್ಯರು, ಭಾವನೆಗಳಿರುವವರು, ಜೀವನದೊಂದಿಗಿನ ಹೋರಾಟದಲ್ಲಿ ನನ್ನ ಪಯಣಕ್ಕೆ ಅರ್ಥಪೂರ್ಣ ಬೆಂಬಲ ನೀಡಬಲ್ಲವರು’ ಎಂಬ ಮನೋಭಾವವು ವಿದ್ಯಾರ್ಥಿಗಳಲ್ಲಿ […]

Exhaust velocity 

ಎಕ್ಸ್ ಹಾಸ್ಟ್ ವೆಲಾಸಿಟಿ – ಹೊರಚಿಮ್ಮುವ ವೇಗ – ರಾಕೆಟ್ಟಿನಲ್ಲಿನ ಉರಿದ ಅನಿಲಗಳು ಹೊರಕ್ಕೆ ಚಿಮ್ಮುವ ವೇಗ.

Exclusion principle ( Pauli’s )

ಎಕ್ಸ್ ಕ್ಲೂಷನ್ ಪ್ರಿನ್ಸಿಪಲ್ (ಪೌಲೀಸ್) –  (ಪೌಲಿಯವರ) ಬೇರೆಗೊಳಿಸುವ ಸಿದ್ಧಾಂತ – ಒಂದು ವ್ಯವಸ್ಥೆಯಲ್ಲಿನ‌ ಯಾವ ಎರಡು ಕಣಗಳೂ, ಉದಾಹರಣೆಗೆ ಒಂದು ಪರಮಾಣುವಿನಲ್ಲಿನ‌ ಎರಡು ಎಲೆಕ್ಟ್ರಾನುಗಳು ಏಕರೂಪಿಯಾದ (ಒಂದೇ ಅಂದರೆ ಅದದೇ) ಕ್ವಾಂಟಂ ಸಂಖ್ಯೆಗಳನ್ನು ಹೊಂದಿರಲು ಸಾಧ್ಯ ಇಲ್ಲ ಎಂಬ ಸಿದ್ಧಾಂತ ಇದು. 

Exciton 

ಎಕ್ಸೈಟಾನ್ – ಉತ್ತೇಜಿತ ಪರಮಾಣುವಿನಂತೆ ವರ್ತಿಸುವಂತಹ ಒಂದು ಎಲೆಕ್ಟ್ರಾನು‌ ಹಾಗೂ ಒಂದು ರಂಧ್ರಗಳ ಕಣಜೋಡಿ.

Excitation 

ಎಕ್ಸೈಟೇಷನ್ – ಉತ್ತೇಜನ‌ – ಒಂದು ಬೀಜಕೇಂದ್ರ/ ಎಲೆಕ್ಟ್ರಾನು/ ಅಣು/ವಿದ್ಯುದಂಶವು ಶಕ್ತಿಯನ್ನು ಪಡೆದುಕೊಂಡು ತಾನು ಇರುವ ಸಾಮಾನ್ಯ ಸ್ಥಿತಿಗಿಂತ ಹೆಚ್ಚು ಶಕ್ತಿಯ (ಕ್ವಾಂಟಂ -ಶಕ್ತಿ ಪೊಟ್ಟಣ) ಸ್ಥಿತಿಗೆ ಏರುವುದು.

Page 53 of 112

Kannada Sethu. All rights reserved.