Ergometer

ಎರ್ಗೋಮೀಟರ್ – ಶಕ್ತಿಮಾಪಕ – ಯಾವುದೇ ಉಪಕರಣವು ಮಾಡಿದ ಕೆಲಸದಿಂದ ಉತ್ಪನ್ನವಾದ ಶಕ್ತಿಯನ್ನು ಅಳೆಯುವ ಉಪಕರಣ.

Eriometer

ಎರಿಯೋಮೀಟರ್ – ಕಿರು ವ್ಯಾಸಮಾಪಕ – ಬೆಳಕಿನಲೆಯ ಹಬ್ಬುವಿಕೆ

(ಡಿಫ್ರ್ಯಾಕ್ಷನ್) ಯನ್ನು ಬಳಸಿಕೊಂಡು ಅತಿ ಚಿಕ್ಕ ವ್ಯಾಸವನ್ನು ಅಳೆಯಲು ಉಪಯೋಗಿಸುವಂತಹ ಉಪಕರಣ.

Erect

ಎರೆಕ್ಟ್ – ನೆಟ್ಟಗೆ ನಿಂತ, ಸೀದಾ – ವಸ್ತು ಹೇಗೆ ನಿಂತಿದೆಯೋ ಅದೇ ರೀತಿಯಲ್ಲೇ ನಿಂತ ಬಿಂಬವನ್ನು ವರ್ಣಿಸುವ ರೀತಿ.

Equivalent focal length

ಈಕ್ವಿವೇಲೆಂಟ್ ಫೋಕಲ್ ಲೆಂಗ್ತ್ – ಸಮಸಮಾನ ಸಂಗಮ ದೂರ – ಪ್ರಧಾನ ಬಿಂದುವಿನಿಂದ ಅದರ ತತ್ಸಂಬಂಧಿತ 

(corresponding) ಪ್ರಧಾನ ಸಂಗಮ ಬಿಂದುವಿಗೆ ಇರುವಂತಹ ದೂರ‌‌.

ಕನ್ನಡ ಗಾದೆಮಾತು – ಹಾಸಿಗೆ ಇದ್ದಷ್ಟು ಕಾಲು ಚಾಚು.‌

ಕನ್ನಡದ ಸುಪ್ರಸಿದ್ಧ ಗಾದೆ ಮಾತುಗಳಲ್ಲಿ ಇದೂ ಒಂದು. ನಮ್ಮ ಹಾಸಿಗೆ ಎಷ್ಟು ಉದ್ದ ಇದೆಯೋ ನಾವು ಅಷ್ಟು ಮಾತ್ರ‌ ಕಾಲು ಚಾಚಬೇಕು.  ಇಲ್ಲದಿದ್ದರೆ ಕಾಲು ಹಾಸಿಗೆಯಿಂದ ಆಚೆ ಹೋಗಿ ದೇಹಕ್ಕೆ ಅನಾನುಕೂಲವುಂಟಾಗುತ್ತದೆ. ಇದೇ ರೀತಿಯಲ್ಲಿ, ನಾವು ನಮ್ಮ ಹಣಕಾಸಿನ ಸ್ಥಿತಿಗತಿ ಎಷ್ಟರ ಮಟ್ಟಿಗೆ ಇದೆಯೋ ಅಷ್ಟರ ಮಟ್ಟಿಗೆ ನಮ್ಮ ಖರ್ಚುವೆಚ್ಚಗಳನ್ನು ಮಿತಿಯಲ್ಲಿರಿಸಿಕೊಳ್ಳಬೇಕು‌. ನಮ್ಮ ಹತ್ತಿರ ಇಲ್ಲದ ಹಣವನ್ನು ಸಾಲಸೋಲ ಮಾಡಿ ಖರ್ಚು ಮಾಡಿದರೆ ಮುಂದೆ ನಾವು ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುವುದು ಖಂಡಿತ. ಹೀಗೆ ಈ ಗಾದೆಮಾತು ಜೀವನಕ್ಕೆ ತುಂಬ […]

“ಅಲ್ಯಾ ಕಟ್ ತಗೊಳ್ಳಿ ಮೇಡಂ, ತುಂಬ ಚೆನ್ನಾಗಿರುತ್ತೆ”. – ಉಚ್ಚಾರ ತಂದ ಫಜೀತಿಯ ಪ್ರಸಂಗ

ಈ ಸಲ ತಾಪದ ಅಲೆಗಳೊಡನೆ ಬೆಂಗಳೂರನ್ನು ಕಾಡಿದ ಬೇಸಗೆಯ ಶಾಖಕ್ಕೆ ಹೆದರಿ, ಮನೆಯಲ್ಲಿ ಧರಿಸಲು ಒಂದೆರಡು ಹತ್ತಿ ಬಟ್ಟೆಗಳ‌ ಖರೀದಿಗೆಂದು ರಾಜಾಜಿನಗರದ ಬಟ್ಟೆಯಂಗಡಿಯೊಂದಕ್ಕೆ ಹೋಗಿದ್ದೆ. ಇಪ್ಪತ್ತು- ಇಪ್ಪತ್ತೈದು ವಯಸ್ಸಿನ  ಮೂವರು ಯುವತಿಯರು ನಿರ್ವಹಿಸುತ್ತಿದ್ದ ಸಣ್ಣ ಬಟ್ಟೆ ಅಂಗಡಿ ಅದು.  ಸರಿ. ಉಡುಪುಗಳನ್ನು ನಾನು ಆಯ್ಕೆ ಮಾಡಲು ತೊಡಗಿದ್ದಾಗ ನನಗೆ ಸಹಾಯ ಮಾಡುವ ಉದ್ದೇಶದಿಂದ ಅವರಲ್ಲಿ ಒಬ್ಬ ಹುಡುಗಿ ನನ್ನ ಬಳಿ ಬಂದು, ಅಲ್ಲಿನ ಗೂಟಗಳಲ್ಲಿ ನೇತು ಹಾಕಿದ್ದ ಉಡುಪೊಂದನ್ನು ತೆಗೆದು “ಅಲ್ಯಾ ಕಟ್ ತಗೊಳ್ಳಿ ಮೇಡಂ, ತುಂಬ […]

Equivalent circuit

ಈಕ್ವಿವೇಲೆಂಟ್ ಸರ್ಕ್ಯೂಟ್ – ಸಮಸಮಾನ ವಿದ್ಯುನ್ಮಂಡಲ – ತನಗಿಂತ ಹೆಚ್ಚು ಸಂಕೀರ್ಣವಾದ ವಿದ್ಯುನ್ಮಂಡಲ ಅಥವಾ ಉಪಕರಣದ ವಿದ್ಯುತ್ತೀಯ ಗುಣಲಕ್ಷಣಗಳನ್ನೇ ಕೆಲವು ನಿರ್ದಿಷ್ಟೀಕೃತ ಸನ್ನಿವೇಶಗಳಲ್ಲಿ ಹೊಂದಿರುವ, ಆದರೆ ಹೋಲಿಕೆಯಲ್ಲಿ ಸರಳವಾಗಿರುವ ಒಂದು ವಿದ್ಯುನ್ಮಂಡಲ.

Equinox

ಈಕ್ವಿನಾಕ್ಸ್ – ಸಮಕಾಲ – ಸೂರ್ಯನು ಭೂಮಧ್ಯರೇಖೆಯನ್ನು ದಾಟುವ ಕಾಲ, ಹಗಲು ಮತ್ತು ರಾತ್ರಿಗಳು ಸಮ ಅವಧಿಯನ್ನು  ಹೊಂದಿರುವ ಕಾಲ.

Equipotential 

ಈಕ್ವಿಪೊಟೆನ್ಶಿಯಲ್ – ಸಮವಿದ್ಯುತ್ ಅಂತಃಸಾಮರ್ಥ್ಯ – ತನ್ನ ಮೇಲಿರುವ ಎಲ್ಲ ಬಿಂದುಗಳೂ ಸಮಾನ ವಿದ್ಯುತ್ ಅಂತಃಸಾಮರ್ಥ್ಯವನ್ನು ಹೊಂದಿರುವಂತೆ ವಿನ್ಯಾಸಗೊಳಿಸಿದ ಒಂದು ಮೇಲ್ಮೈ.

Equilibrium

ಈಕ್ವಿಲಿಬ್ರಿಯಂ – ಸಮತೋಲನ – ಒಂದು ವಸ್ತುವಿನ ಮೇಲೆ ವರ್ತಿಸುತ್ತಿರುವ ಬಲಗಳ ಮೊತ್ತ ಸೊನ್ನೆ ಆಗಿದ್ದಾಗ ಆ ವಸ್ತು ಸಮತೋಲನದಲ್ಲಿದೆ ಎಂದು ಹೇಳಲಾಗುತ್ತದೆ.

Page 55 of 112

Kannada Sethu. All rights reserved.