Discharge(electrical)

ವಿದ್ಯುತ್ ಹರಿವು – ಒಂದು ಅವಾಹಕದಲ್ಲಿ ಅಥವಾ ಕಡಿಮೆ ಒತ್ತಡದಲ್ಲಿರುವ ಅನಿಲದ ಮೂಲಕ ವಿದ್ಯುತ್ತು ಹರಿಯುವುದು‌. ಇದು ಸಾಮಾನ್ಯವಾಗಿ ಪ್ರಕಾಶಮಾನವಾಗಿರುತ್ತದೆ. 

Disappering filament Pyrometer

ತಂತಿ ಕಾಣಿಸದ ಉಷ್ಣಮಾಪಕ – ಉಷ್ಣತೆಯಿಂದಾಗಿ ಬೆಳಕು ಬೀರುವ ಆಕರವೊಂದರ ತಾಪಮಾನವನ್ನು ಅಳೆಯಲು ಬಳಸುವ ವಿದ್ಯುತ್ ಮಾಪಕ.

ಮಣದಷ್ಟು ಮಾತಿಗಿಂತ ಕಣದಷ್ಟು ಕೆಲಸ ಲೇಸು.

ಮಣ ಅಂದರೆ ಕನ್ನಡ ನಾಡಿನಲ್ಲಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ತೂಕದ ಒಂದು ಅಳತೆ. ಇದು ಸುಮಾರು ನಲವತ್ತು ಸೇರಿನಷ್ಟು ಇರುತ್ತದೆ. ಕಣ ಅಂದರೆ ಪದಾರ್ಥವೊಂದರ ತೀರಾ ಸಣ್ಣ ಚೂರು ಅಥವಾ ಅತ್ಯಂತ ಸೂಕ್ಷ್ಮವಾದ ಅಂಶ ಎಂದು ಅರ್ಥ. ‌ಕೆಲವರು ತಾನು ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆ ಎಂದು  ಬಡಾಯಿ ಕೊಚ್ಚುತ್ತಾ ಮಾತಿನಲ್ಲೇ ಮಹಲು‌ ಕಟ್ಟುತ್ತಾರೆ. ಇದರಿಂದ ಯಾರಿಗೂ ಏನೂ ಪ್ರಯೋಜನವಿಲ್ಲ, ಪ್ರಯೋಜನವಿರಲಿ ಬೇಡದೆ ಇರುವ ಮಾತು ಕೇಳಿದ ಬೇಸರ ಬರುತ್ತದೆ ಅಷ್ಟೇ. ಇದರ ಬದಲು ಒಂದೇ ಒಂದು ಕಣದಷ್ಟು […]

ಕನ್ನಡವನ್ನು ಸಬಲಗೊಳಿಸುವುದು ಅಂದರೆ ವಿವಿಧ ಪದಕೋಶಗಳ ನಿರ್ಮಾಣ.

ಕನ್ನಡವನ್ನು ಪ್ರೀತಿಸುವ ಉಳಿಸಿ ಬೆಳೆಸುವ ಆಸೆ ಇರುವ ಯಾರೇ ಆದರೂ ಅದನ್ನು ಸಬಲಗೊಳಿಸುವ ಬಗ್ಗೆ ಯೋಚಿಸುತ್ತಾರೆ. ಬಹುಶಃ ನಮ್ಮ ಭಾಷೆಯನ್ನು ಸಬಲಗೊಳಿಸುವ ಒಂದು ಮಾರ್ಗ ಅಂದರೆ  ಬೇರೆ ಬೇರೆ ಜ್ಞಾನಶಿಸ್ತುಗಳಲ್ಲಿ ಆಗುತ್ತಿರುವ ನೂತನ ಸಂಶೋಧನೆಗಳನ್ನು ಕನ್ನಡದಲ್ಲಿ ಬರೆಯಲು ಸಾಧ್ಯವಾಗುವಂತೆ ಅದನ್ನು ಸಜ್ಜುಗೊಳಿಸುವುದು. ಉದಾಹರಣೆಗೆ, ಗಣಕ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಮಾನವ ನಿರ್ಮಿತ ಬುದ್ಧಿಮತ್ತೆ, ಅರ್ಥ ಶಾಸ್ತ್ರ, ತತ್ವಶಾಸ್ತ್ರ ನಿರ್ವಹಣಾ ಶಾಸ್ತ್ರ ಮುಂತಾದ ಎಲ್ಲ ಶಾಸ್ತ್ರಗಳಲ್ಲೂ ಪ್ರತ್ಯೇಕ ಕನ್ನಡ ಪದಕೋಶಗಳನ್ನು, ಆಕ್ಸ್ ಫರ್ಡ್ ಪದಕೋಶಗಳ ಮಾದರಿಯಲ್ಲಿ ತಯಾರು ಮಾಡಿದರೆ […]

Direct current 

ನೇರ ವಿದ್ಯುತ್ ‌- ಒಂದೇ ದಿಕ್ಕಿನಲ್ಲಿ ಹರಿಯುವ ವಿದ್ಯುತ್.

Diode

ದ್ವಿದ್ವಾರ – ಎರಡು ವಿದ್ಯುದ್ವಾರಗಳನ್ನು ಹೊಂದಿರುವ ಒಂದು ವಿದ್ಯುನ್ಮಾನ ಉಪಕರಣ.‌ ಈ ಉಪಕರಣವು ದಿಕ್ಕು ಮಗುಚುತ್ತಾ ಹರಿಯುವ ವಿದ್ವತ್ತನ್ನು ನೇರ ವಿದ್ಯುತ್ತಾಗಿ ಬದಲಾಯಿಸುತ್ತದೆ. 

Dilation

ವಿಸ್ತಾರ – ಪ್ರಮಾಣವು ಹೆಚ್ಚಾಗುವುದು.

Digital voltmeter

ಅಂಕಿ ಪ್ರದರ್ಶಕ‌ ವೋಲ್ಟ್ ಮೀಟರು – ತಾನು ಅಳೆದಂತಹ ಮೌಲ್ಯಗಳನ್ನು ಅಂಕಿಗಳಲ್ಲಿ ಪ್ರದರ್ಶಿಸುವ ವೋಲ್ಟ್ ಮೀಟರು(ವೋಲ್ಟ್ ಮೀಟರನ್ನು ವಿದ್ಯುತ್ ಚಾಲಕ ಬಲವನ್ನು ಅಳೆಯಲು ಬಳಸುತ್ತಾರೆ).

Digital circuit 

ಅಂಕರೂಪಿ ಅಥವಾ ನಿರ್ದಿಷ್ಟಾಂಕ ವಿದ್ಯುನ್ಮಂಡಲ – ನಿರ್ದಿಷ್ಟ ಮೌಲ್ಯದ ವಿದ್ಯುತ್ ಚಾಲಕ ಶಕ್ತಿಗೆ ಸ್ಪಂದಿಸುವ ವಿದ್ಯುನ್ಮಂಡಲ.

ಕನ್ನಡ ಗಾದೆಮಾತು – ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನವಲ್ಲ

ಜೀವನದಲ್ಲಿ ಕೆಲವು ಸಂಗತಿಗಳು ತಮ್ಮ ಹೊರ ರೂಪ, ಥಳುಕು, ಮಿಂಚಾಟದಿಂದ ತುಂಬ ಆಕರ್ಷಕವಾಗಿ, ತುಂಬ ಮೌಲ್ಯಯುತವಾದವೇನೋ ಎಂಬಂತೆ ಕಾಣುತ್ತವೆ. ಬೇಗಡೆ ಕಾಗದ ನಿಜವಾದ ಚಿನ್ನದಂತೆ ಕಾಣಬಹುದು, ಬಿಳಿಯಾದ ಯಾವುದೋ ದ್ರವ ಹಾಲಿನಂತೆ ಕಾಣಬಹುದು. ಆದುದರಿಂದ ನಾವು ಜೀವನದಲ್ಲಿ ಮೇಲ್ನೋಟಕ್ಕೆ ಆಕರ್ಷಕವಾಗಿ‌ ಕಾಣುವ ಸಂಗತಿಗಳನ್ನು ಮತ್ತೆ ಮತ್ತೆ ಪರಿಶೀಲಿಸಿಯೇ ನಂಬಬೇಕು. Kannada proverb – Bellagirodella haalalla, holeyodella chinnavalla( All that looks white is not milk, and all that glitters is not […]

Page 72 of 112

Kannada Sethu. All rights reserved.