ನಾವು ( ಅಂದರೆ ಈಗ ಐವತ್ತು ವರ್ಷದ ಆಸುಪಾಸಿನಲ್ಲಿರುವ ಮಂದಿ) ಚಿಕ್ಕವರಾಗಿದ್ದಾಗ ನಮಗೆ ‘ಸ್ಥಳೀಯ’ ಹಣ್ಣುಗಳಾದ ಬಾಳೆ, ಮಾವು, ಸೀಬೆ, ಹಲಸು ಮುಂತಾದವುಗಳ ಪರಿಚಯ ಇತ್ತೇ ಹೊರತು ಸ್ಟ್ರಾಬೆರಿ, ಪ್ಲಮ್, ಪಿಯರ್, ಡ್ರ್ಯಾಗನ್ ಫ್ರೂಟ್, ಟ್ಯಾಂಜಾರಿನ್, ಕಿವಿ ಮುಂತಾದ ವಿದೇಶೀ ಫಲಾವಳಿಯ ಪರಿಚಯ ಇರಲಿಲ್ಲ. ಕಥೆ, ಕಾದಂಬರಿ, ವೃತ್ತಪತ್ರಿಕೆಗಳಲ್ಲಿ ಇಂಥವುಗಳ ಹೆಸರುಗಳನ್ನು ಓದುತ್ತಿದ್ದೆವೇ ಹೊರತು,ಆ ಹಣ್ಣುಗಳನ್ನು ನಿಜವಾಗಿ ನೋಡಿ, ಮುಟ್ಟಿ, ತಿನ್ನುವ ಪ್ರಶ್ನೆಯೇ ಇರಲಿಲ್ಲ. ಆದರೆ, ಇಂದು ಜಾಗತೀಕರಣವಾಗಿ ಮೂವತ್ತು ವರ್ಷಗಳೇ ಆಗಿಹೋಗಿರುವ ಸನ್ನಿವೇಶದಲ್ಲಿ, ಕೇವಲ ದೊಡ್ಡ […]
ಫ್ಲುಯಿಡಿಟಿ- ಪ್ರವಾಹಿ ಗುಣ( ದ್ರವತ್ವ) – ಸ್ನಿಗ್ಧತೆಯ ವಿರುದ್ಧ ಗುಣ ( ಸ್ನಿಗ್ಧತೆ = ಜಿಡ್ಡು, ಮಂದ).
ಫ್ಲುಯಿಡ್ – ದ್ರವ( ಪ್ರವಾಹಿ) – ಪ್ರವಹಿಸಬಲ್ಲ ಅಂದರೆ ಹರಿಯುವ ಸಾಮರ್ಥ್ಯವಿರುವ ವಸ್ತುವಿಗೆ ಬಳಸುವ ಪದ. ಇದು ಅನಿಲವೂ ಆಗಿರಬಹುದು.
ಫ್ಲೊಟೇಷನ್ ಲಾ – ತೇಲುವಿಕೆಯ ನಿಯಮ – ಒಂದು ದ್ರವದಲ್ಲಿ ತೇಲುತ್ತಿರುವ ವಸ್ತುವು ಸ್ಥಳಪಲ್ಲಟಿಸುವ ಆ ದ್ರವದ ದ್ರವ್ಯರಾಶಿಯು ಆ ವಸ್ತುವಿನ ದ್ರವ್ಯರಾಶಿಗೆ ಸಮವಾಗಿರುತ್ತದೆ.
ಫ್ಲಿಂಟ್ ಗ್ಲಾಸ್ – ಚಕಮಕಿ ಗಾಜು – ಸೀಸದ ಸಿಲಿಕೇಟ್ ಹೊಂದಿರುವ ಒಂದು ಬಗೆಯ ಗಾಜು. ಇದನ್ನು ಮಸೂರಗಳು, ಪಟ್ಟಕಗಳು ಮುಂತಾದವನ್ನು ತಯಾರು ಮಾಡುವ ಬೆಳಕುವಿಜ್ಞಾನದ ಗಾಜಾಗಿ ಬಳಸುತ್ತಾರೆ.
ಫ್ಲಿಕ್ಕರ್ ಫೋಟೋಮೀಟರ್ – ಮಿಣುಕು ಬೆಳಕುಮಾಪಕ – ಬೇರೆ ಬೇರೆ ಬೆಳಕಿನ ಆಕರಗಳ ಬೆಳಕನ್ನು ಹೋಲಿಸಲು ಬಳಸುವ ಬೆಳಕುಮಾಪಕ.
ಫೀಲ್ಡ್ – ಕ್ಷೇತ್ರ- ಖಾಲಿ ಅವಕಾಶದಲ್ಲಿ ಕಣಗಳ ನಡುವೆ ನಡೆಯುವ ಅಂತರ್ ಕ್ರಿಯೆಯನ್ನು ವಿವರಿಸಲು ಪರಿಚಯಿಸಲ್ಪಟ್ಟ ಒಂದು ಪರಿಕಲ್ಪನೆ ಇದು. ಉದಾಹರಣೆಗೆ, ವಿದ್ಯುತ್ ಕ್ಷೇತ್ರ, ಕಾಂತ ಕ್ಷೇತ್ರ, ಗುರುತ್ವ ಕ್ಷೇತ್ರ.
ಫಿಶನ್ ಪ್ರಾಡಕ್ಟ್ಸ್ – ವಿದಳನ ಉತ್ಪನ್ನಗಳು – ಅಣುಬೀಜ ವಿದಳನದಿಂದ ಉತ್ಪತ್ತಿಯಾದ ಸ್ಥಿರ ಮತ್ತು ಅಸ್ಥಿರ ಸಮರೂಪಿಗಳು.
Like us!
Follow us!