ಭೂ ಸಂಪರ್ಕ – ವಿದ್ಯುಚ್ಛಕ್ತಿಗೆ ಸಂಬಂಧಿಸಿದಂತೆ ಬಳಸುವ ಪದವಿದು. ಯಾವುದೇ ಒಂದು ವಾಹಕಕ್ಕೂ (ವಿದ್ಯುತ್ ಹರಿಯುತ್ತಿರುವ) ಭೂಮಿಗೂ ಕಡಿಮೆ ಪ್ರತಿರೋಧವುಳ್ಳ ಸಂಪರ್ಕ ಕಲ್ಪಿಸಿರುವ ಸನ್ನಿವೇಶ ಇದು.
ನೇರ ವಿದ್ಯುತ್ ಪ್ರವಾಹ – ಕೇವಲ ಒಂದು ದಿಕ್ಕಿನಲ್ಲಿ ಮಾತ್ರ ಹರಿಯುವ ವಿದ್ಯುತ್ ಪ್ರವಾಹ.
ದಿನ – ತನ್ನ ಅಕ್ಷದ ಮೇಲೆ ತಿರುಗುತ್ತಿರುವ ಭೂಮಿಯು ತನ್ನ ಒಂದು ಸುತ್ತು ಪೂರೈಸಲು ತೆಗೆದುಕೊಳ್ಳುವ ಸಮಯ.
ಕಾಲಗಣನೆಯ ತಂತ್ರವಿಧಾನ – ಕಲ್ಲು ಬಂಡೆಗಳು, ಉತ್ಖನನ(ಅಗೆತ) ಸ್ಥಳದ ವಸ್ತುಗಳು, ಪಳೆಯುಳಿಕೆಗಳೇ ಮುಂತಾವುಗಳ ಕಾಲವನ್ನು ನಿಗದಿ ಮಾಡುವ ಅಥವಾ ಕಂಡು ಹಿಡಿಯುವ ವಿಧಾನಗಳು
ದತ್ತಾಂಶ ಕಣಜ ಅಥವಾ ಮಾಹಿತಿ ಕಣಜ – ಗಣಕ ಯಂತ್ರದಲ್ಲಿ ಸಂಕೇತ ನೀಡಿ ಸಂಗ್ರಹಿಸಬಹುದಾದ ಮತ್ತು ವಿವಿಧ ಶಿರೋನಾಮೆಗಳಡಿಯಲ್ಲಿ ಪಡೆದುಕೊಳ್ಳಬಹುದಾದ ಮಾಹಿತಿಯ ದೊಡ್ಡ ಸಂಗ್ರಹ.
ಕ್ಷೀಣಗೊಳ್ಳುವಿಕೆ ಅಥವಾ ಕುಗ್ಗುವಿಕೆ – ತೂಗಾಡುತ್ತಿರುವ ಒಂದು ವ್ಯವಸ್ಥೆಯ ಶಕ್ತಿಯು ಕುಗ್ಗುತ್ತಾ ಬರುವುದರಿಂದ, ಅದರ ತೂಗಾಟ ಅಥವಾ ಆಂದೋಲನಗಳ ಅಲೆಯೆತ್ತರವು ಕಡಿಮೆಯಾಗುತ್ತಾ ಬರುವುದು.
Like us!
Follow us!