ಹರಳು – ಸಮಕಟ್ಟಾದ ಮೇಲ್ಮೈಗಳುಳ್ಳ ಒಂದು ಘನವಸ್ತು. ಇಲ್ಲಿ ಒಂದೇ ವಸ್ತುವಿನ ಹರಳುಗಳು ಹೇಗೆ ಬೆಳೆಯುತ್ತವೆ ಅಂದರೆ ಅವುಗಳ ಮೇಲ್ಮೈಗಳ ನಡುವಿನ ಕೋನವು ಒಂದೇ ಆಗಿರುತ್ತದೆ.
ಶೀತ ಭೌತಶಾಸ್ತ್ರ – ಬಹಳವೇ ಕಡಿಮೆ ತಾಪಮಾನಕ್ಕೆ ಸಂಬಂಧಿಸಿದ ಭೌತಶಾಸ್ತ್ರ.
ಮಸೂರ ತಯಾರಿಕಾ ಗಾಜು ಅಥವಾ ದೃಶ್ಯೋಪಕರಣ ತಯಾರಿಕಾ ಗಾಜು – ಸಾಕಷ್ಟು ಗಟ್ಟಿಯಾಗಿದ್ದರೂ ಸುಲಭವಾಗಿ ಉಜ್ಜಿ ಹೊಳಪು ನೀಡಲು ಸಾಧ್ಯವುಳ್ಳ ಗಾಜು. ಇದು ತುಂಬಾ ಪಾರದರ್ಶಕವಾಗಿರುತ್ತದೆ.
ಋಣಧ್ರುವ ಕಿರಣ ಬಿಂಬ ದರ್ಶಕ – ವಿದ್ಯುತ್ ಪ್ರವಾಹವನ್ನು ಅಥವಾ ವಿದ್ಯುದಂಶವನ್ನು ಒಂದು ಪ್ರತಿದೀಪಕ (ಫ್ಲೋರೋಸೆಂಟ್) ಪರದೆಯ ಮೇಲೆ ತೋರಿಸುವ ಒಂದು ಉಪಕರಣ.
ನಿರ್ಧಾರಕ ವೇಗ – ದ್ರವಗಳ ಹರಿವಿನಲ್ಲಿ ಶಾಂತ ಹರಿವಿನಿಂದ ಪ್ರಕ್ಷುಬ್ಧ ಹರಿವಿಗೆ ಆ ದ್ರವವು ಬದಲಾಗುವಂತಹ ವೇಗ.
ನಿರ್ಧಾರಕ ದ್ರವ್ಯರಾಶಿ – ಒಂದು ಅಣುಸ್ಥಾವರದಲ್ಲಿ ಸರಣಿಕ್ರಿಯೆಯು ಚಾಲನೆಯಲ್ಲಿರುವುದಕ್ಕಾಗಿ ಅಗತ್ಯವಿರುವ ವಿದಳನವಸ್ತುವಿನ ಕನಿಷ್ಠ ಪ್ರಮಾಣ.
ಜೋಡಿಬಲ – ಒಂದಕ್ಕೊಂದು ಸಮ ಹಾಗೂ ವಿರುದ್ಧವಾಗಿರುವ ಬಲಗಳು. ಇವು ಒಂದೇ ಬಿಂದುವಿನಲ್ಲಿ ವರ್ತಿಸುವುದಿಲ್ಲ, ಬದಲಾಗಿ ಆ ವಸ್ತುವನ್ನು ತಿರುಗುವಂತೆ ಮಾಡುತ್ತವೆ.
Like us!
Follow us!