ವೃತ್ತಿಯಿಂದ ಕನ್ನಡ ಪಾಠ ಮಾಡುವ ಹಾಗೂ ಪ್ರವೃತ್ತಿಯಿಂದ ಕನ್ನಡ ಬರೆಯುವ ನಾನು ಕನ್ನಡ ನಿಘಂಟು, ಶಬ್ದಕೋಶಗಳನ್ನು ಆಗಾಗ ಬಳಸಬೇಕಾಗುತ್ತದೆ. ಪ್ರತಿ ಸಲ ನಿಘಂಟು ತೆರೆದಾಗಲೂ ನನಗೆ ಒಂದು ವಿಷಯ ಮನಸ್ಸಿಗೆ ಬರುತ್ತದೆ. ಅದೇನೆಂದರೆ ನಾವು ಸಾಮಾನ್ಯವಾಗಿ ಮಾತಿನಲ್ಲಿ ಹಾಗೂ ಬರವಣಿಗೆಯಲ್ಲಿ ಬಳಸದೆ ಇರುವ ಅನೇಕಾನೇಕ ಪದಗಳು ಕನ್ನಡ ನಿಘಂಟಿನಲ್ಲಿ ಪ್ರತಿ ಅಕ್ಷರದಲ್ಲೂ ಸಿಗುತ್ತವೆಯಲ್ಲ(!) ಎಂಬುದು. ಉದಾಹರಣೆಗೆ , ಅದ್ದೆ = ಬೇರೊಬ್ಬನ ಸ್ಥಾನದಲ್ಲಿಯ, ಬದಲಿ ಅಪ್ಪುನಿಧಿ = ಸಮುದ್ರ, ಕಡಲು ಆರೇಚನ = ( ಕಣ್ಣುಗಳು) ಮುಚ್ಚಿಕೊಳ್ಳುವುದು […]
ವಿದ್ಯುತ್ತೀಯ ಚಲನಶಾಸ್ತ್ರ – ಚಲನೆಯಲ್ಲಿರುವ ವಿದ್ಯುದಂಶಗಳು, ವಿದ್ಯುತ್ತೀಯ ಹಾಗೂ ಕಾಂತಕ್ಷೇತ್ರಗಳಿಂದ ಸೃಷ್ಟಿಯಾಗುವ ಬಲಗಳ ನಡುವಿನ ಸಂಬಂಧ ( ಮುಖ್ಯವಾಗಿ ವಿದ್ಯುಜ್ಜನಕ ಯಂತ್ರಗಳಿಗೆ ಸಂಬಂಧ ಪಟ್ಟಂತೆ) – ಈ ವಿಷಯಗಳ ಅಧ್ಯಯನ.
ವಿದ್ಯುದ್ವಾರದ ಅಂತಃಸಾಮರ್ಥ್ಯ – ಒಂದು ಲೋಹವು ತನ್ನನ್ನು ಸುತ್ತುವರೆದಿರುವ ದ್ರಾವಕಕ್ಕೆ ತನ್ನ ಎಲೆಕ್ಟ್ರಾನುಗಳನ್ನು ಕೊಟ್ಟುಬಿಡುವ ಪ್ರವೃತ್ತಿಯ ಅಳತೆ.
ವಿದ್ಯುತ್ತೀಯ ದ್ರವ ಶುದ್ಧೀಕರಣ – ನಿರ್ಲವಣೀಕರಣ ಅಥವಾ ನೀರಿನಿಂದ ಉಪ್ಪನ್ನು ಪ್ರತ್ಯೇಕಿಸುವಂತೆ, ಉಪ್ಪಿರುವ ನೀರಿನಿಂದ ಶುದ್ಧ ನೀರನ್ನು ಪಡೆಯುವ ವಿಧಾನ.
ವಿದ್ಯುತ್ತೀಯ ಪದರಗಟ್ಟುವಿಕೆ – ವಿದ್ಯುತ್ ರಾಸಾಯನಿಕ ಕ್ರಿಯೆಯ ಮೂಲಕ ಒಂದು ಘನವಸ್ತುವಿನ ( ಲೋಹ) ಒಂದು ಪದರವನ್ನು ಒಂದು ವಿದ್ಯುದ್ವಾರದ ಮೇಲ್ಮೈಗೆ ಹಚ್ಚುವುದು.
ವಿದ್ಯುದ್ವಾರ – ಒಂದು ವಿದ್ಯುತ್ ಉಪಕರಣದಲ್ಲಿ ಅಥವಾ ವಿದ್ಯುತ್ ವ್ಯವಸ್ಥೆಯಲ್ಲಿ ಎಲೆಕ್ಟ್ರಾನುಗಳನ್ನು ಅಥವಾ ಬೇರೆ ವಿಧದ ವಿದ್ಯುತ್ ಒಯ್ಯಕಗಳನ್ನು ಹೊರಸೂಸುವ ಅಥವಾ ಸಂಗ್ರಹಿಸುವ ಭಾಗ.
ವಿದ್ಯುತ್ ರಸಾಯನಿಕ ಶಾಸ್ತ್ರ- ದ್ರಾವಕಗಳಲ್ಲಿ ವಿದ್ಯುದಣುಗಳ ರೂಪಣೆ ಮತ್ತು ವರ್ತನೆಗಳನ್ನು ಅಧ್ಯಯನ ಮಾಡುವ ಜ್ಞಾನಶಾಖೆ.
ವಿದ್ಯುತ್ ರಾಸಾಯನಿಕ ಸರಣಿ – ರಾಸಾಯನಿಕ ಮೂಲವಸ್ತುಗಳನ್ನು ಅವುಗಳ ನಿಯತ ವಿದ್ಯುದ್ವಾರ ಅಂತಃ ಸಾಮರ್ಥ್ಯಕ್ಕೆ ಅನುಗುಣವಾಗಿ ಜೋಡಿಸುವುದು.
Like us!
Follow us!