ದೈನಂದಿನ ಜೀವನದಲ್ಲಿ ನಾವು ನಮ್ಮ ಸಹಜೀವಿಗಳಿಗೆ ಏನಾದರೂ ಕೊಟ್ಟಾಗ, ಸಹಾಯ ಮಾಡಿದಾಗ ಅವರು ಇಂಗ್ಲಿಷ್ನಲ್ಲಿ ‘ಥ್ಯಾಂಕ್ಯೂ’ ಅಂದರೆ ನಾವು ‘ ಯು ಆರ್ ವೆಲ್ಕಮ್, ‘ಮೆನ್ಷನ್ ನಾಟ್’, ಅಥವಾ ‘ಇಟ್ ಇಸ್ ಆಲ್ರೈಟ್’ ಎಂದು ಹೇಳುವುದು ವಾಡಿಕೆ. ಆದರೆ ಯಾರಾದರೂ ಕನ್ನಡದಲ್ಲಿ ಧನ್ಯವಾದ ಅಂತ ಹೇಳಿದರೆ ಅದಕ್ಕೆ ಕನ್ನಡದಲ್ಲಿ ಏನಂತ ಪ್ರತ್ಯುತ್ತರ ಕೊಡುವುದು? ಸಾಮಾನ್ಯವಾಗಿ ಧನ್ಯವಾದಕ್ಕೆ ಪ್ರತಿಯಾಗಿ ಕನ್ನಡದಲ್ಲಿ ಏನು ಹೇಳುವುದೆಂದು ತೋಚದೆ ‘ಥ್ಯಾಂಕ್ಯೂ’ ಅಂದೋ, ‘ಓಹ್ ಪರವಾಗಿಲ್ಲ’ ಅಂದೋ, ಅಥವಾ […]
ಎಣಿಕೆ ಉಪಕರಣ – ಕಣಗಳನ್ನು ಮತ್ತು ವಿದ್ಯುತ್ ಕಾಂತೀಯ ವಿಕಿರಣವನ್ನು ಎಣಿಸಲು ಬಳಸುವ ಉಪಕರಣ.
ವಿಶ್ವಾತ್ಮಕ ಅಲೆಗಳು – ಬಾಹ್ಯಾಕಾಶದಿಂದ ಹೊರಟು ಭೂಮಿಯನ್ನು ತಲುಪುವಂತಹ ತುಂಬ ಶಕ್ತವಾದ ವಿಕಿರಣ.
ಬೆಳಕಿನ ಕಣ ಸಿದ್ದಾಂತ – ಬೆಳಕು ಕಣಗಳ ರೂಪದಲ್ಲಿ ಪ್ರಯಾಣಿಸುತ್ತದೆ ಎಂದು ಊಹಿಸುವ ವಾದ.
ಪ್ರಭಾವಲಯ – ಸೂರ್ಯನ ವಾತಾವರಣದ ಹೊರ ಅಂಚು.
ಕಣ್ಗುಡ್ಡೆ ಮೇಲ್ಪೊರೆ – ಕಣ್ಣಿನ ಪಾರದರ್ಶಕ ಭಾಗ.
ತಂಪುಕಾರಕ – ಉಷ್ಣ ವರ್ಗಾವಣೆಯ ವಿಧಾನದಿಂದ ಬಿಸಿ ಚಾಲಕ ಯಂತ್ರದಿಂದ ಶಕ್ತಿಯನ್ನು ತೆಗೆದುಬಿಡುವ ದ್ರವ.
ಕೂಡುವ ಮಸೂರ ಅಥವಾ ಕನ್ನಡಿ – ಬೆಳಕಿನ ಒಂದು ಸಮಾನಾಂತರ ಕಿರಣ ಸಮೂಹವನ್ನು ಒಂದು ಬಿಂದುವಿನಲ್ಲಿ ಕೂಡುವಂತೆ ವಕ್ರೀಭವಿಸುವ ಅಥವಾ ಪ್ರತಿಫಲಿಸುವ ಮಸೂರ ಅಥವಾ ಕನ್ನಡಿ. ಹೀಗೆ ಮಾಡುವ ಕನ್ನಡಿಯು ತಗ್ಗಿರುತ್ತದೆ ಮತ್ತು ಮಸೂರವು ಮಧ್ಯದಲ್ಲಿ ಉಬ್ಬಿರುತ್ತದೆ.
Like us!
Follow us!