Chemical shift

ರಾಸಾಯನಿಕ ಪಲ್ಲಟ – ರಾಸಾಯನಿಕ ಪರಿಣಾಮದಿಂದಾಗಿ ವರ್ಣಪಟಲದ ಶಿಖರಬಿಂದುವಿನಲ್ಲಿ ಉಂಟಾಗುವ ಬದಲಾವಣೆ.

Chemosphere

ರಸಾಯನಾವರಣ – ಭೂಮಿಯ ಮೇಲ್ಮೈಯಿಂದ ಇಪ್ಪತ್ತು ಮೀಟರ್ ಎತ್ತರದಲ್ಲಿರುವಂತಹ ಹಾಗೂ ತನ್ನೊಳಗೆ ಅನೇಕ ಬೆಳಕು-ರಾಸಾಯನಿಕ ಕ್ರಿಯೆಗಳು ನಡೆಯುವಂತಹ,  ವಾತಾವರಣದ ಒಂದು ಪದರ. 

ಆಳಾಗ ಬಲ್ಲವನೇ ಅರಸಾಗುವ.

ಒಬ್ಬ ಯಶಸ್ವಿ ಅರಸ ಅಥವಾ ನಾಯಕನು ಹೇಗಿರಬೇಕು ಎಂಬುದನ್ನು ಸೊಗಸಾಗಿ ಹೇಳುವ ಗಾದೆಮಾತಿದು. ಅರಸ ಅಥವಾ ನಾಯಕ ಅಂದರೆ ಕೇವಲ ಕೆಲಸ ಹೇಳುವವನು, ಆಜ್ಞೆ ಮಾಡಿ ಆದೇಶ ಕೊಟ್ಟು ಬೇರೆಯವರಿಂದ ಕೆಲಸ ಮಾಡಿಸುವವನು ಎಂಬ ಭಾವನೆ ಸರ್ವೇಸಾಧಾರಣವಾಗಿ ಇರುತ್ತದೆ. ಆದರೆ ಕೆಲಸ ಮಾಡಲು ತಿಳಿದವನು ಮಾತ್ರ ಚೆನ್ನಾಗಿ ಕೆಲಸ ಮಾಡಿಸಬಲ್ಲ. ಏಕೆಂದರೆ ತಾನು ಹೇಳುತ್ತಿರುವ ಕೆಲಸದ ವಿಧಿವಿಧಾನ, ಮೂಲಚೂಲಗಳು ಅವನಿಗೆ ಗೊತ್ತಿರುತ್ತವೆ. ಕೆಲಸ ಮಾಡುವವರು ಕೆಲಸ ಕದಿಯಲೆಂದು ಹೇಳುವ ಸುಳ್ಳುಗಳು, ಕುಂಟು ನೆಪಗಳು ಸಹ ಅವನಿಗೆ ಗೊತ್ತಿರುತ್ತವೆ. […]

ಕನ್ನಡ ತರಗತಿಗೆ ತಡವಾಗಿ ಬಂದಿದ್ದಕ್ಕೆ ಬರಹಶಿಕ್ಷೆ!

ನನ್ನಂತಹ ಎಲ್ಲ ಅಧ್ಯಾಪಕರೂ ಅನುಭವಿಸುವ ಒಂದು ಕಿರಿಕಿರಿ ಸಂಗತಿ ಅಂದರೆ, ಬೆಳಿಗ್ಗೆ ಕಾಲೇಜಿನ ಮೊದಲ ತರಗತಿಗೆ ತಡವಾಗಿ ಬರುವ ವಿದ್ಯಾರ್ಥಿಗಳದ್ದು. ತರಗತಿ ಶುರುವಾಗಿ ಅರ್ಧ ಗಂಟೆಯಾದರೂ ಮಳೆಹನಿ ತೊಟ್ಟಿಕ್ಕಿದಂತೆ ಒಬ್ಬೊಬ್ಬರೇ ವಿದ್ಯಾರ್ಥಿಗಳು ಬರುತ್ತಲೇ ಇರುತ್ತಾರೆ. ಅವರು ಬಾಗಿಲು ತಟ್ಟುವುದು, ಒಳಗೆ ಬರಲು ಅಧ್ಯಾಪಕರ ಅನುಮತಿ ಕೋರುವುದು, ಧಡಧಡ ಎನ್ನುತ್ತಾ ಗಡಿಬಿಡಿ ಮಾಡಿಕೊಂಡು ಒಳಗೆ ಧಾವಿಸುವುದು, ಆ ಸಮಯದಲ್ಲಿ, ಮೊದಲು ಒಳಗೆ ಕುಳಿತಿದ್ದ ವಿದ್ಯಾರ್ಥಿಗಳು ಪಾಠ ಕೇಳುವುದನ್ನು ಅಲ್ಲಿಗೇ ಬಿಟ್ಟು ತಡವಾಗಿ ಬಂದವರನ್ನೇ ಹೊಸ ದೃಶ್ಯವೇನೋ  ಎಂಬಂತೆ ನೋಡುತ್ತಾ […]

CGS system

ಸಿ.ಜಿ.ಎಸ್. ಮೂಲಮಾನ ಪದ್ಧತಿ – ಸೆಂಟಿಮೀಟರ್, ಗ್ರಾಂ, ಮತ್ತು ಸೆಕೆಂಡುಗಳನ್ನು ಮೂಲಭೂತ ಮೂಲಮಾನವಾಗಿ ಉಳ್ಳ ಒಂದು ಮೂಲಮಾನ ವ್ಯವಸ್ಥೆ.

Chain reaction

ಸರಣಿ ಕ್ರಿಯೆ – ಪರಮಾಣು ಬೀಜಕೇಂದ್ರದ ಸೀಳಿಕೆಗಳಲ್ಲಿ, ಕೆಲವು ಭಾರವಾದ ಬೀಜಕೇಂದ್ರಗಳು ನ್ಯೂಟ್ರಾನುಗಳನ್ನು ಹೀರಿಕೊಂಡು ಕಡಿಮೆ ಭಾರದ ಬೀಜಕೇಂದ್ರಗಳಾಗಿ ಒಡೆದುಕೊಳ್ಳುತ್ತವೆ. ಈ ಕ್ರಿಯೆಯಲ್ಲಿ ಮತ್ತೆ ಬಿಡುಗಡೆಯಾಗುವ ನ್ಯೂಟ್ರಾನುಗಳು ಉಳಿದ ಭಾರವಾದ ಬೀಜಕೇಂದ್ರಗಳ ಸೀಳಿಕೆಗೆ ಕಾರಣವಾಗುತ್ತವೆ. ಹೀಗಾಗಿ ಸೀಳಿಕೆಗಳ ಸರಣಿಯೇ ಉಂಟಾಗಿಬಿಡುತ್ತದೆ. ಇದನ್ನು ಸರಣಿಕ್ರಿಯೆ ಎಂದು ಕರೆಯುತ್ತಾರೆ.

Channel

ವಾಹಿನಿ – ಪ್ರಸಾರ ಕ್ರಿಯೆಯಲ್ಲಿ ವಿದ್ಯುತ್ ಅಲೆಗಳ ಪ್ರಸರಣಕ್ಕಾಗಿ ಅಥವಾ ಸ್ವೀಕಾರಕ್ಕಾಗಿ ಬಳಸುವ ನಿರ್ದಿಷ್ಟ ಆವರ್ತನಗಳ ಒಂದು ಕಟ್ಟು ಅಥವಾ ಒಂದು ನಿರ್ದಿಷ್ಟ ದಾರಿ.

Charge

ವಿದ್ಯುದಂಶ – ವಸ್ತುವಿನ ಮೂಲಭೂತ ಕಣಗಳ ಒಂದು ಮೂಲಭೂತ ಗುಣ¯ಕ್ಷಣವಿದು. ಇದರ ಮೂಲಮಾನ ಕೂಲಂಬ್. ಧನ ಮತ್ತು ಋಣ ಎಂದು ಎಂದು ರೂಢಿಗತವಾಗಿ ಕರೆಯುವ ಎರಡು ರೀತಿಯ ವಿದ್ಯುದಂಶಗಳಿರುತ್ತವೆ.

Charcoal

ಇದ್ದಲು – ಮರವನ್ನು ಅಥವಾ ಇನ್ಯಾವುದಾದರೂ ಸಾವಯವ ವಸ್ತುವನ್ನು ಗಾಳಿಯ ಗೈರುಹಾಜರಿಯಲ್ಲಿ ಸುಟ್ಟಾಗ ಉಂಟಾಗುವಂತಹ ಇಂಗಾಲದ ಒಂದು ರೂಪ. ಇದಕ್ಕೆ ನಿಶ್ಚಿತ ಆಕಾರವಿರುವುದಿಲ್ಲ. 

ಯಾರನ್ನ ನಂಬಿದರೂ ಆರೈದು ನಂಬಬೇಕು

ಯಾರಾದರೂ ಹೊಸದಾಗಿ ಪರಿಚಯವಾದಾಗ ಅಥವಾ ತುಂಬ ಅಂದವಾಗಿರುವವರು, ಬುದ್ಧಿವಂತರು ಅನ್ನಿಸಿಕೊಂಡವರು, ಬಣ್ಣ ಬಣ್ಣವಾಗಿ ಮಾತಾಡುವವರು ತಮ್ಮ ಸಂಪರ್ಕಕ್ಕೆ ಬಂದಾಗ ತಕ್ಷಣ ಅವರನ್ನು ಒಳ್ಳೆಯುವರು ಎಂದು ನಂಬಿಬಿಡುವ ಮುಗ್ಧತೆ ಕೆಲವು ಜನರಲ್ಲಿ ಇರುತ್ತದೆ. ಇಂತಹ ಸ್ವಭಾವವುಳ್ಳವರಿಗೆ ಎಚ್ಚರಿಕೆ ಕೊಡುವ ಗಾದೆ ಮಾತಿದು. ಮನುಷ್ಯರಲ್ಲಿ ಒಳ್ಳೆಯವರು ಇರುವಂತೆಯೇ ಒಳ್ಳೆಯವರಂತೆ ನಟಿಸುವವರೂ ಅಂದರೆ ತಮ್ಮ ನಿಜ ಮುಖದ ಮೇಲೆ ಮುಖವಾಡ ತೊಟ್ಟವರೂ ಇರುತ್ತಾರೆ. ಹಾಗೆಯೇ ದೇವರಂತಹ ಜನಗಳು ಇರುವಂತೆ, ಸ್ವಾರ್ಥಿಗಳೂ, ಸಮಯ ಸಾಧಕರೂ, ಬೆನ್ನ ಹಿಂದೆ ಚೂರಿ ಹಾಕುವವರೂ ಇರುತ್ತಾರೆ. ಹೀಗಾಗಿ […]

Page 96 of 117

Kannada Sethu. All rights reserved.