ನಮ್ಮ ಹಿರಿಯರು ಕಲಿಸಿದ ಜೀವನ ಪಾಠಗಳಲ್ಲಿ ಈ ಗಾದೆಮಾತು ಸಹ ಒಂದು. ಜನರು ತಮಗಿಂತ ಕಡಿಮೆ ಅನುಕೂಲತೆ ಹೊಂದಿರುವವರಿಗೆ ತಾವು ಏನನ್ನಾದರೂ ಕೊಟ್ಟಾಗ, ತಾವು ಕೊಟ್ಟಿದ್ದರ ಬಗ್ಗೆ ಊರಿಗೆಲ್ಲಾ ಟಾಂಟಾಂ ಮಾಡುವ ಅಗತ್ಯವೇನಿರುವುದಿಲ್ಲ. ದಾನ ಮಾಡುವುದನ್ನು ಎಷ್ಟು ಮೌನವಾಗಿ, ಸದ್ದಿಲ್ಲದೆ ಮಾಡಬೇಕು ಎಂಬುದನ್ನು ಮೇಲಿನ ಮಾತು ಬಹಳ ಮಾರ್ಮಿಕವಾಗಿ ಹೇಳುತ್ತದೆ. ನಾವು ಬಲಗೈಯಿಂದ ಕೊಟ್ಟ ದಾನವು ನಮ್ಮದೇ ದೇಹದ ಭಾಗವಾದ ಎಡಗೈಗೂ ತಿಳಿಯದಷ್ಟು ಮೌನದಲ್ಲಿ‌ ನಾವು ದಾನ ನೀಡಬೇಕು. ಕೊಟ್ಟಿದ್ದರ ಬಗ್ಗೆ ಸಿಕ್ಕಿದವರಿಗೆಲ್ಲಾ ಹೇಳಿಕೊಂಡು ತಿರುಗುತ್ತಿದ್ದರೆ, ನಾವು ನಮ್ಮ ಕಹಳೆಯನ್ನು ಸ್ವತಃ ಊದುವ ಅಲ್ಪ ಬುದ್ಧಿಯವರಾಗಿ ಕಾಣಿಸುತ್ತೇವೆ, ಮತ್ತು ನಮ್ಮಿಂದ ದಾನವನ್ನು ಪಡೆದುಕೊಂಡವರು ಸಂಕೋಚದಿಂದ ಮೈಹಿಡಿ ಮಾಡಿಕೊಳ್ಳುವಂತಾಗುತ್ತದೆ.  ಹೀಗಾಗಬಾರದು ಎಂಬುದಕ್ಕಾಗಿಯೇ ಮೇಲಿನ ಗಾದೆಮಾತನ್ಬು ಹೇಳಲಾಗಿದೆ.

Kannada proverb –  Balagaili kottiddu edagaige thiliyabaradu( The left hand should not know what the right hand gave).

This proverb in Kannada stresses on the decency and good behavior to be followed, when we are giving alms to a poor man or helping someone who is in need. We should give so quietly that our left hand should not know what the right hand gave. If we go on a frenzy of proclaiming about what we gave, to whom we gave etc… we will be belittle ourselves and the person whom we helped. To avoid this we need to be very quiet about our good deeds.