ಪ್ರತಿಯೊಂದು ಭಾಷೆಗೂ ಅವರದ್ದೇ ಆದ ಕೆಲವು ವಿಶಿಷ್ಟ ನುಡಿಗಟ್ಟುಗಳಿರುತ್ತವೆ. ಕನ್ನಡ ಭಾಷೆಯೂ ಇದಕ್ಕೆ ಹೊರತಲ್ಲ.

ಕನ್ನಡ ಭಾಷೆಯಲ್ಲಿರುವ ಅನೇಕ ನುಡಿಗಟ್ಟುಗಳಲ್ಲಿ ‘ಬೆಣ್ಣೆಯಿಂದ ಕೂದಲು ತೆಗೆದ ಹಾಗೆ’ ಎಂಬ ನುಡಿಗಟ್ಟು ಸಹ ಒಂದು‌. ಬೆಣ್ಣೆ ಎಂಬುದು ಕನ್ನಡ ನಾಡಿನ ಜನರು  ಬಹಳವಾಗಿ  ಇಷ್ಟ ಪಟ್ಟು ಬಳಸುವ ಹೈನು ಪದಾರ್ಥ.‌ ಯಾವುದಾದರೂ  ನಯವಾದ, ಮೃದುವಾದ ಪದಾರ್ಥವನ್ನು ಮೆಚ್ಚಬೇಕಾದರೆ  ಅದನ್ನು ಬೆಣ್ಣೆಗೆ ಹೋಲಿಸುವುದು ರೂಢಿ. ಆದರೆ ಬೆಣ್ಣೆಯಿಂದ ಕೂದಲು ತೆಗೆಯುವುದು ಎಂಬುದು ಕನ್ನಡದಲ್ಲಿ ಒಂದು ವಿಶೇಷ ಭಾಷಾ ಪ್ರಯೋಗ. ತುಂಬ ನಾಜೂಕಾದ ಸನ್ನಿವೇಶವನ್ನು ವಿವರಿಸಲು ಬಳಸುವ ನುಡಿಗಟ್ಟು ಇದು‌. ಬೆಣ್ಣೆಯಲ್ಲಿ‌ ಕೂದಲು ಸಿಕ್ಕಿಕೊಂಡರೆ  ತೆಗೆಯುವುದು ತುಂಬಾ ಕಷ್ಟ. ಹಾಗೆಯೇ ಮೇಲಧಿಕಾರಿಗಳ ತಪ್ಪನ್ನು ಅವರಿಗೆ ತಿಳಿಸಿ ಹೇಳುವುದು, ಕೋಪಗೊಂಡ ಹದಿಹರೆಯದವರಿಗೆ ಬುದ್ಧಿ ಹೇಳುವುದು‌‌ ಸಹ ತುಂಬಾ ಕಷ್ಟ.  ಇದು ಬೆಣ್ಣೆಯಿಂದ ಕೂದಲು ತೆಗೆದಂತೆ. ಇಂತಹ ಸನ್ನಿವೇಶಗಳಲ್ಲಿ ನಮ್ಮ ನಡವಳಿಕೆ ತುಂಬಾ ನಾಜೂಕಾಗಿರಬೇಕು. ಎಷ್ಟು ಚಿಂತನೆ ಇದೆ ಅಲ್ಲವೆ ಈ ನುಡಿಗಟ್ಟಿನಲ್ಲಿ! ಅದಕ್ಕೇ ಕನ್ನಡವನ್ನು ಸಿರಿಗನ್ನಡ ಅನ್ನುವುದು.