ಮನುಷ್ಯನ ಮನಸ್ಸು ಯಾವುದಾದರೂ ಚಿಂತೆಗೆ ಬಿತ್ತೆಂದರೆ ಅವನ ಕೈಯಲ್ಲಿ ಯಾವ ಕೆಲಸವೂ ಸಾಗುವುದಿಲ್ಲ. ಸಂತೆಯಲ್ಲಾದರೂ ಅಷ್ಟೇ, ಮನೆಯಲ್ಲಾದರೂ ಅಷ್ಟೇ.  ಈ ಬದುಕು  ಸಹ ಒಂದು ರೀತಿಯಲ್ಲಿ ಸಂತೆ ಇದ್ದಂತೆ. ಜನ ಬರುತ್ತಾರೆ, ಹೋಗುತ್ತಾರೆ, ತಮ್ಮಲ್ಲಿರುವುದನ್ನು ಮಾರುತ್ತಾರೆ, ತಮಗೆ ಬೇಕಾದ್ದನ್ನು ಕೊಳ್ಳುತ್ತಾರೆ. ‌ಇಂತಹ ಗಡಿಬಿಡಿ ಗೌಜಿಯ ವಾತಾವರಣದಲ್ಲಿ ಮನುಷ್ಯನು‌ ಯಾವುದೋ ವಿಷಯದ ಬಗ್ಗೆ ಚಿಂತೆ ಮಾಡುತ್ತಾ ಕುಳಿತರೆ ವ್ಯಾಪಾರ ಸಾಗುವುದಿಲ್ಲ. ಹಾಗೆಯೇ ಯಾವ್ಯಾವುದಕ್ಕೋ ಚಿಂತೆ ಮಾಡುತ್ತಾ ಕುಳಿತಿದ್ದರೆ ನಮ್ಮ ಬದುಕಿನ ಬಂಡಿ ಮುಂದೆ ಹೋಗದು. ಹೀಗಾಗಿ ನಾವು ಚಿಂತೆ ಮಾಡುವ ಅಭ್ಯಾಸ ವನ್ನು ಬಿಟ್ಟು ಕಾರ್ಯಸಾಧನೆಯನ್ನು ಕಲಿಯಬೇಕು. ‌

Kannada proverb – Chinthe maadidare santhe saageethe?( Will the sandy( village market) run if we keep brooding?)

Sometimes a worry or a concern may make us immobile and we may just keep brooding. In such moments we won’t even realize that we are losing time and doing nothing. Our work gets affected and productivity dwindles, because we are immersed in the worry and lost to the world. This proverb takes the example of a village market( sandy) to drive home the point. A sandy is a place of great hustle bustle where people sell and buy things. If we are lost in thoughts we may lose our customers or chance to buy good quality produces. Life is also like a sandy, if you think about it! Yes, we should not be lost to the reality because of the worries and repetitive thoughts which ocuupy our mind, in the wrong time. Action produces results, but worry does not produce anything worthwhile.