ಕನ್ನಡದ ಸುಪ್ರಸಿದ್ಧ ಗಾದೆ ಮಾತುಗಳಲ್ಲಿ ಇದೂ ಒಂದು. ನಮ್ಮ ಹಾಸಿಗೆ ಎಷ್ಟು ಉದ್ದ ಇದೆಯೋ ನಾವು ಅಷ್ಟು ಮಾತ್ರ‌ ಕಾಲು ಚಾಚಬೇಕು.  ಇಲ್ಲದಿದ್ದರೆ ಕಾಲು ಹಾಸಿಗೆಯಿಂದ ಆಚೆ ಹೋಗಿ ದೇಹಕ್ಕೆ ಅನಾನುಕೂಲವುಂಟಾಗುತ್ತದೆ. ಇದೇ ರೀತಿಯಲ್ಲಿ,

ನಾವು ನಮ್ಮ ಹಣಕಾಸಿನ ಸ್ಥಿತಿಗತಿ ಎಷ್ಟರ ಮಟ್ಟಿಗೆ ಇದೆಯೋ ಅಷ್ಟರ ಮಟ್ಟಿಗೆ ನಮ್ಮ ಖರ್ಚುವೆಚ್ಚಗಳನ್ನು ಮಿತಿಯಲ್ಲಿರಿಸಿಕೊಳ್ಳಬೇಕು‌. ನಮ್ಮ ಹತ್ತಿರ ಇಲ್ಲದ ಹಣವನ್ನು ಸಾಲಸೋಲ ಮಾಡಿ ಖರ್ಚು ಮಾಡಿದರೆ ಮುಂದೆ ನಾವು ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುವುದು ಖಂಡಿತ. ಹೀಗೆ ಈ ಗಾದೆಮಾತು ಜೀವನಕ್ಕೆ ತುಂಬ ಬೇಕಾದ, ಹಣಕಾಸು ಸಂಬಂಧಿತ ವಿವೇಕವನ್ನು ನಮಗೆ ಕಲಿಸಿಕೊಡುತ್ತದೆ.‌

Kannada proverb – Haasige iddashtu kaalu chaachu (Strech your leg only till the bed’s end, not beyond it).

When we sleep in a bed, if we stretch our leg beyond the bed it causes discomfort. Therefore even if our leg is longer than the length of that particular bed, we should not stretch it beyond the bed. Somehow we need to keep our leg within the limits of the bed. In the same way, we need to keep our expenses within the limits of our income. If we spend more than we earn we fall into the trap of debt. This wisely concieved proverb is used by Kannada speaking people  in the context of financial prudency. This provides some good learning. Isn’t it?