ಜೀವನ ವಿವೇಕದ ಮಾತೊಂದನ್ನು ತುಂಬ ಅರ್ಥ ಪೂರ್ಣವಾಗಿ ಹೇಳುವಂತಹ ಗಾದೆಮಾತು ಇದು. ನಮಗೆ ಹಲಸಿನ ಹಣ್ಣನ್ನು ತಿನ್ನುವ ಆಸೆ ಇದ್ದು ಅದನ್ನು ಬೇರೆಯವರಿಂದ ಕೇಳಿ ಪಡೆದೋ ಅಥವಾ ಹಣ ಕೊಟ್ಟು  ಕೊಂಡೋ ಮನೆಗೆ ತರುತ್ತೇವೆ ಎಂದಿಟ್ಟುಕೊಳ್ಳಿ. ಅದನ್ನು ಹೆಚ್ಚುವಾಗ ಅದರೊಳಗಿನ ಮೇಣವು ಚಾಕುವಿಗೆ, ಕೈಗೆ ಅಂಟಿಕೊಳ್ಳುತ್ತದೆ. ನಾವು ಹಲಸಿನ ತೊಳೆಯನ್ನು ತಿನ್ನಬೇಕು ಅಂದರೆ ಈ ಮಿಜಿಮಿಜಿಮಿಜಿ ಎನ್ನುತ್ತಾ ಕೈಗೆಲ್ಲಾ ಅಂಟಿಕೊಳ್ಳುವ ಮೇಣದ ಜೊತೆ ಗುದ್ದಾಡಲೇಬೇಕು.‌ ಹಲಸಿನ ಹಣ್ಣು ಮಾತ್ರ ಬೇಕು, ಮೇಣ ಬೇಡ ಅಂದರೆ ಆಗುವುದಿಲ್ಲ. ಹಾಗೆಯೇ ಜೀವನದಲ್ಲಿ ಯಾವುದೇ ಸುಖಸಂತೋಷ ನೀಡುವ ಸಂಗತಿಗಳು ಬೇಕೆಂದರೂ ಅದರೊಂದಿಗೆಯೇ ಬರುವ ಕಿರಿಕಿರಿ ಹುಟ್ಟಿಸುವ ಸಂಗತಿಗಳನ್ನು ಸಹಿಸಿಕೊಳ್ಳಲೇಬೇಕು. ಬೆಲೆ ಬಾಳುವ ಒಡವೆಯ ಜೊತೆಯಲ್ಲಿಯೇ  ಬರುವ ಅದರ ಕಾಳಜಿಯ ಚಿಂತೆ, ಮುದ್ದು ಮಕ್ಕಳ ಜೊತೆಯಲ್ಲೇ ಬರುವ ಅವುಗಳ ಚಂಡಿಬುದ್ಧಿ, ಹಠ, ಪ್ರವಾಸ ಅಂದಾಗ ಅದರ ಜೊತೆಯಲ್ಲೇ ಇರುವ ದೀರ್ಘ ಪ್ರಯಾಣದ

ಪ್ರಯಾಸ‌ …. ಹೀಗೆ‌. ಬದುಕಿನ ವಾಸ್ತವವೊಂದನ್ನು ಪರಿಚಿತ ಹಣ್ಣೊಂದರ ರೂಪಕದ ಮೂಲಕ ಸ್ಪಷ್ಟವಾಗಿ ತಿಳಿಸಿಕೊಡುವ ಗಾದೆಮಾತಿದು. 

Kannada proverb : Halasina hannu beku, antu byada andhange ( They want jack fruit but not its sticky glue).

This proverb brings us to the reality of accepting good things of life along with their not-so-good aspects. If we like something, anything, there will a part of it which may not be very pleasant. For example, if you like roses you inevitably  have to deal with the thorns. If we are trying to make honey using honey bees, we have to deal with fact of getting a stings from them. In the same way, jack fruit is made in nature with its messy, sticky glue.  If we want to eat jackfruit we need to deal with its stickiness. This way the proverb makes us aware of the importance of accepting life as a whole package with its good and bad aspects.