ಕನ್ನಡದ ಒಂದು ಬಹು ಜನಪ್ರಿಯ ಗಾದೆ ಮಾತಿದು‌.‌

ನಾವು ಲೋಕದಲ್ಲಿ ಗಮನಿಸುವಂತೆ ಹೆತ್ತವರಿಗೆ ಅವರ ಮಕ್ಕಳು ಎಷ್ಟೇ ಕುರೂಪಿ, ದಡ್ಡರು, ಉಡಾಳರು, ಮೂರ್ಖರಾಗಿದ್ದರೂ ಅವರು ಮುದ್ದೇ. ಹಾಗೂ ಮದುವೆ ಮಾಡಿಕೊಂಡವರಿಗೆ ಅವರ ಗಂಡ/ಹೆಂಡತಿ ಏನು ಮಾಡಿದರೂ ಸರಿಯೇ. ಕೋಡಗ ಅಂದರೆ ಕೋತಿ. ಕೋತಿಯಂತಿದ್ದರೂ, ಅದರಂತೆ ಆಡಿದರೂ ತಾವು ಕೈಹಿಡಿದವರನ್ನ ಜನ ಬಿಟ್ಟುಕೊಡುವುದಿಲ್ಲ  ಎಂದು ನಾವು ಗಮನಿಸಬಹುದು. ತಮ್ಮ ಮಕ್ಕಳು ಅಥವಾ ಜೀವನ ಸಂಗಾತಿಯ ತಪ್ಪನ್ನು ಜನ ಖಂಡಿಸದೆ ಒಪ್ಪಿಟ್ಟುಕೊಂಡಾಗ ಈ ಗಾದೆಮಾತನ್ನು ಬಳಸಲಾಗುತ್ತದೆ.     

Kannada proverb – Hettorige  heggana Muddu, Kudidorige kodaga Muddu.  

This is a very popular proverb in Kannada.  Usually we ignore the mistakes of our close persons like children or our spouse. This is why we are not objective when it comes to our close circles. So when parents or spouse supports a mistake of their family member, this proverb is used by Kannada speaking people. The English proverb ‘blood is thicker than water’ is similar to this saying.