ವಸಂತ, ಮೋಹನ, ನವೀನ, ಅರುಣ, ಕಿರಣ, ಪ್ರಜ್ವಲ್ – ಇಂತಹ ಪದಗಳ ವಿಶೇಷತೆ ಬಲ್ಲಿರಾ? ಇದನ್ನು ಗಂಡು ಮಗು ಮತ್ತು ಹೆಣ್ಣುಮಗು ಇಬ್ಬರಿಗೂ ಇಡಬಹುದು. ಬಹುದು ಏನು, ಇಡುತ್ತಾರೆ ಸಹ.
ಕೆಲವೊಮ್ಮೆ ಇಂತಹ ಹೆಸರುಗಳು ಗೊಂದಲ ಮಾಡಿಬಿಡುತ್ತವೆ. ಉದಾಹರಣೆಗೆ ‘ಶರುರಾಜ್’ ಎಂಬ ಹೆಸರು. ನಾನು ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿ ಒಮ್ಮೆ, ಚುನಾವಣಾ ಕೆಲಸಕ್ಕೆ ಸಿಬ್ಬಂದಿಯನ್ನು ಆಯ್ಕೆ ಮಾಡುವಾಗ ಇವರನ್ನು ಪುರುಷ ಎಂದು ಭಾವಿಸಿ ಆಯ್ಕೆ ಮಾಡಿದ್ದರು. ಆದರೆ ವಾಸ್ತವದಲ್ಲಿ ಅವರು ಒಬ್ಬ ಮಹಿಳೆ! ಇದೇ ರೀತಿಯಲ್ಲಿ ನಾನು ಹೊಸದಾಗಿ ದೊಡ್ಡ ಕಾಲೇಜೊಂದಕ್ಕೆ ಹೋದಾಗ ಪ್ರಜ್ವಲ್ ಎಂಬ ಸಹೋದ್ಯೋಗಿಯೊಬ್ಬರ ಬಗ್ಗೆ ಕೇವಲ ಕೇಳಿಸಿಕೊಂಡಿದ್ದು ಅವರು ಪುರುಷರಿರಬಹುದೆಂದು ಭಾವಿಸಿದ್ದೆ.
ಅವರನ್ನು ನೋಡುವ ತನಕ ಅವರು ಮಹಿಳೆ ಎಂದು ನನಗೆ ಗೊತ್ತಿರಲಿಲ್ಲ!
ಅಂತೂ ಕೆಲವು ಹೆಸರುಗಳು ಅದರ ಒಡೆಯರು ಗಂಡೋ, ಹೆಣ್ಣೋ ಎಂದು ಗೊತ್ತಾಗದಂತೆ ಗೊಂದಲ ಮಾಡುತ್ತವೆ. ಅಲ್ಲವೆ?