ತಾಳ್ಮೆ ಎಂಬ ಸದ್ಗುಣದ ಮಹತ್ವವನ್ನು ಹೇಳುವ ಮಾತು ಇದು. ಮೋಡ ಕರಗಿ ಹನಿಯೊಡೆಯಲು, ಬೀಜ ಸಸಿಯಾಗಲು, ಕಾಯಿ ಹಣ್ಣಾಗಲು ಅದರದ್ದೇ ಆದ ಸಮಯ ಬೇಕು‌. ಇದಕ್ಕಾಗಿ ನಾವು ಕಾಯಬೇಕಾಗುತ್ತದೆ. ಹೀಗೆಯೇ ಒಬ್ಬರನ್ನು ತಪ್ಪು ತಿಳಿಯುವ ಮೊದಲು, ಯಾರ ಮೇಲಾದರೂ ಕೋಪಿಸಿಕೊಳ್ಳುವ ಮೊದಲು ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ನಾವು ಪ್ರಯತ್ನ ಮಾಡಬೇಕು. ಇಂತಹ ತಾಳ್ಮೆಯ ಗುಣ ಯಾರಿಗೆ ಇರುತ್ತದೋ ಅವರು ಚೆನ್ನಾಗಿ ಬಾಳುವುದರಲ್ಲಿ ಅನುಮಾನವಿಲ್ಲ.

Kannada proverb : Taalidavanu baaliyanu( One who has patience will live well).

This Kannada proverb stresses on the importance of the virtue called patience. Everything takes its time. To get the rains from clouds, to get sprouts from a seed, a fruit to ripen to its maximum will surely take certain amount of time. Also, before mistaking someone or getting angry on a loved one, we need to exercise patience. The person who has such patience will certainly live well.