ಈ ಗಾದೆಮಾತು ಕನ್ನಡ ಭಾಷೆಯಲ್ಲಿ ಸಾಕಷ್ಟು ಬಳಕೆಯಲ್ಲಿದೆ.‌ ಯಾರಾದರೂ ತಮ್ಮ  ಕೆಟ್ಟ ಚಟದಲ್ಲೋ, ದುರಾಭ್ಯಾಸದಲ್ಲೋ ( ಸಿಗರೇಟು, ಕುಡಿತ, ಜೂಜು, ಮಾದಕ ದ್ರವ್ಯ ವ್ಯಸನ)  ತೊಡಗಲು ಸಣ್ಣ ನೆಪ ಸಿಕ್ಕಿದರೂ ಸಾಕು, ಆ ಅವಕಾಶವನ್ನು ಬಿಡದೆ ಬಳಸಿಕೊಳ್ಳುತ್ತಾರಲ್ಲವೆ? ಅಂತಹ ಸಂದರ್ಭಗಳಲ್ಲಿ ಈ ಗಾದೆಮಾತನ್ನು ಬಳಸಲಾಗುತ್ತದೆ. ಜೊತೆಗೆ, ಕೆಲಸಗಳ್ಳರು ತಮಗೊಂದು ಸಣ್ಣ ನೆವ ಸಿಕ್ಕಿದರೂ ಸಾಕು, ಕೆಲಸದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆಗಲೂ ಈ ಮಾತು ಬಳಕೆಯಾಗುತ್ತದೆ. ಪಿಳ್ಳೆ ಎಂದರೆ ಪುಟ್ಟ, ಚಿಕ್ಕ ಎಂದು ಅರ್ಥ.‌ ಒಟ್ಟಿನಲ್ಲಿ ಜನ ಚಿಕ್ಕ ನೆಪ ಸಿಕ್ಕಿದರೂ, ತಮ್ಮ ಅನುಕೂಲ ನೋಡಿಕೊಳ್ಳಲು ಹೊರಟು, ತಮ್ಮ ಜವಾಬ್ದಾರಿಗಳನ್ನು ಕಡೆಗಣಿಸಿದರೆ ಈ ಗಾದೆಮಾತನ್ನು ನೆನಪಿಸಿಕೊಳ್ಳುತ್ತಾರೆ. 

Kannada proverb – Kallanigondu pille neva – ( A small excuse is enough for a thief).

This is a popular proverb in Kannada language. Work shirkers and people with bad habits won’t forgo even a small opportunity to have their way, i.e. shirking work or indulging in the bad habit,  which is apparently pleasurable to them. Man is slave of his habits, isn’t it? Therefore he won’t leave any opportunity to indulge in his vice. The proverb explains a common human nature.