ಕನ್ನಡದ ಒಂದು ಪ್ರಸಿದ್ಧ ಗಾದೆ ಮಾತು ಇದು. ಉಪ್ಪು ತಿಂದ ಮೇಲೆ ಬಾಯಾರಿಕೆ ಆಗುವುದು ಪ್ರಕೃತಿ ಸಹಜ. ಜೀವಶಾಸ್ತ್ರಜ್ಞರ ಪ್ರಕಾರ ನಮ್ಮ ದೇಹದ ಜೀವಕೋಶಗಳಲ್ಲಿ ಉಪ್ಪಿನ ಅಂಶ ಅಗತ್ಯಕ್ಕಿಂತ ಹೆಚ್ಚಾದಾಗ ಅವುಗಳಲ್ಲಿ ಸಮತೋಲನ ತಪ್ಪಿ ಅಸುಖವುಂಟಾಗಿ ಅವು ನೀರಿಗಾಗಿ ಹಂಬಲಿಸುತ್ತವೆ. ನೀರು ಜೀವಕೋಶದೊಳಗೆ ಬಂದಾಗ ಉಪ್ಪು ಹೊರ ಹೋಗುತ್ತದೆ ಮತ್ತು ಜೀವಕೋಶವು ತನ್ನ ಸಮತೋಲನ ಸ್ಥಿತಿಗೆ ಮರಳುತ್ತದೆ.
ನಮ್ಮ ಹಿರಿಯರು ಶಾಸ್ತ್ರೀಯವಾಗಿ ಜೀವವಿಜ್ಞಾನವನ್ನು ಓದಿಕೊಂಡಿರದಿದ್ದರೂ ಜೀವನಾನುಭವದಿಂದ ಈ ಸಂಗತಿಯನ್ನು ಗ್ರಹಿಸಿ, ಇದಕ್ಕೆ ಹೋಲುವಂತೆ, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಎಂಬ ಜೀವನವಿವೇಕವನ್ನು ಗ್ರಹಿಸಿದ್ದಾರೆ. ಉಪ್ಪು ತಿಂದವರು ನೀರು ಕುಡಿಯುವುದು ಹೇಗೆ ಅನಿವಾರ್ಯವೋ ಹಾಗೆ ತಪ್ಪು ಮಾಡಿದವರು ಶಿಕ್ಷೆ ಅನುಭವಿಸುವುದು ಅನಿವಾರ್ಯವಾಗಿರುತ್ತದೆ. 1976ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ‘ಕಾಲೇಜು ರಂಗ’ದಲ್ಲಿ ‘ಉಪ್ಪ ತಿಂದ ಮ್ಯಾಲೆ ನೀರ ಕುಡಿಯಲೆಬೇಕು…ತಪ್ಪ ಮಾಡಿದ ಮ್ಯಾಲೆ ಶಿಕ್ಷೆ ಅನುಭವಿಸಲೆಬೇಕು’ ಎಂಬ ಜನಪ್ರಿಯ ಹಾಡು ಇರುವುದನ್ನು ನಾವು ನೆನಪಿಸಿಕೊಳ್ಳಬಹುದು.
Kannada proverb – uppu thindoru neeru kudeelebeku( Those who ate salt invariably have to drink water).
It is a biological truth that excess of salt in our body will make us crave for water. This is because excess of electolytes due to the consumption of salt will make our cells uncomfortable. Then if we take water excess salt will come out and balance in the cell is restored. Our ancestors, though they were not students of modern biology, observed and understood this fact. They found a comparison in a life situation that, when one committs a mistake, sooner or later he or she has to bear the punishment. So this proverb guides us to be in the right path with an example of natural science, observed by our intelligent ancestors.