ಒಳ್ಳೆಯ ಬದುಕನ್ನು ನಮ್ಮದಾಗಿಸಿಕೊಳ್ಳುವುದು ಹೇಗೆ ಎಂಬುದನ್ನು ಒಂದೇ ವಾಕ್ಯದಲ್ಲಿ ಹೇಳಿಕೊಡುವ ಗಾದೆಮಾತಿದು. ದುಡಿಯುವಾಗ ಆಳಿನಂತೆ ನಾವು ಕಷ್ಟ ಪಟ್ಟು ದುಡಿಯಬೇಕು, ಅಂದರೆ ಪರಿಶ್ರಮ ಹಾಕಬೇಕು. ಆದರೆ, ನಮ್ಮ ದುಡಿತದ ಫಲವನ್ನು ಉಣ್ಣುವಾಗ ರಾಜನಂತೆ ಖುಷಿಯಿಂದ, ಹಕ್ಕಿನಿಂದ ಉಣ್ಣಬೇಕು. ರಟ್ಟೆ ಮುರಿದು ದುಡಿಯಬೇಕು, ಚಪ್ಪರಿಸಿ ಸಂತೋಷವಾಗಿ ಉಣ್ಣಬೇಕು. ಇದೇ ಅಲ್ಲವೆ ಸಾರ್ಥಕ ಬದುಕು! ದುಡಿಯದೆ ಸೋಮಾರಿಯಾಗಿ ಅಥವಾ ದುಡಿತದಿಂದ ಗಳಿಸಿದ ಫಲವನ್ನು ಉಣ್ಣದೆ ಗೋಳುಮಾರಿಯಾಗಿ ಬದುಕುವುದೊಂದು ಬದುಕೇ? ನಮ್ಮ ಜೀವನವನ್ನು ಅರ್ಥಪೂರ್ಣ ಹಾಗೂ ರಸಮಯ ಮಾಡುವ ಸರಳ ಸೂತ್ರವಲ್ಲವೆ ಈ ಗಾದೆಮಾತು?
Kannada proverb – Aalagi dudi, arasaagi unnu (Work like a servant, eat like a king).
This proverb gives a hint of good life. When we work we need to put our heart and soul to the work like a dedicated servant, in other words we should work to our fullest capacity. At the same time, when we have our food which we earned or when we enjoy the fruits of our hard work we should do so like a king. It is similar to the modern saying ‘work hard, party hard’. Isn’t it the right way to live? I think our ancestors were really wise when they gave us this proverb.