ಎರಡೇ ಪದಗಳಿದ್ದರೂ ಎಷ್ಟೆಲ್ಲ ಅರ್ಥ ಇರುವ ಗಾದೆ ಮಾತು ಇದು! ಸದಾ ನಗೆಮೊಗದಿಂದ ಇರುವ ವ್ಯಕ್ತಿಯನ್ನು ಹಸನ್ಮುಖಿ ಎನ್ನುತ್ತಾರೆ. ಇಂತಹ ವ್ಯಕ್ತಿಗೆ ಬದುಕಿನ ಕಷ್ಟ, ಸವಾಲು, ಬೇಸರಗಳ ಕಡಲನ್ನು ದಾಟುವ ಸಂದರ್ಭದಲ್ಲಿ ಮುಗುಳ್ನಗುತ್ತಾ ಇರುವಂತಹ ಸಾಮರ್ಥ್ಯ ಇರುತ್ತದೆ. ಇದು ಅವನಲ್ಲಿ/ಅವಳಲ್ಲಿ ಮಾತ್ರವಲ್ಲ, ತನ್ನ ಬಳಿ ಬರುವ, ತಾನು ಭೇಟಿ ಮಾಡುವ ಪ್ರತಿ ವ್ಯಕ್ತಿಯ ಮನಸ್ಸಿನಲ್ಲೂ ಸಂತೋಷ, ನಿರಾತಂಕ ಭಾವವನ್ನು ಹುಟ್ಟಿಸುತ್ತದೆ. ಬದುಕಿನ ನಿಜ ಗೆಲುವು ಅಂದರೆ ಹಸನ್ಮುಖವೇ. ಇಂತಹ ವ್ಯಕ್ತಿಯು ಸದಾಸುಖಿಯಾಗಿರುವುದರಲ್ಲಿ ಯಾವುದೇ ಅನುಮಾನ ಇಲ್ಲ. ತನ್ನ ಪ್ರಾಸದಿಂದಾಗಿ ಕೇಳಲು ಮತ್ರು ತನ್ನ ಭಾವದಿಂದಾಗಿ ಗ್ರಹಿಸಲು ತುಂಬ ಇಷ್ಟ ಆಗುವ ಗಾದೆ ಮಾತು ಇದು. ಅಲ್ಲವೆ?
Kannada proverb – Hasanmukhi sada sukhi( Smiling person – Always a happy person).
A smiling person. Ah! Isn’t it very comforting even to think? Yes. A person with a smiling countenance spreads cheer and good will. At the same time he himself will be in good mood and lightness because of his smile. He becomes a magnet of happiness. That is why it is said that a smiling person is always a happy person.