ಜೀವನದ ದಾರಿಯಲ್ಲಿ ನಮಗೆ ಅಗತ್ಯವಾದ ಒಂದು ವಿವೇಕದ ಮಾತು ಇದು. ನಾವು ಯಾವುದೇ ಸಮುದಾಯದ ಜೊತೆ ಕೆಲಸ ಮಾಡುವಾಗ ಈ ಮಾತು ಬಹಳ ಉಪಯೋಗಕ್ಕೆ ಬರುತ್ತದೆ.
ನಮ್ಮ ಕೈಬೆರಳುಗಳೆಲ್ಲವೂ ಒಂದೇ ಅಳತೆ, ಗಾತ್ರದಲ್ಲಿ ಇರುವುದಿಲ್ಲ. ಆದರೆ, ಬೆರಳುಗಳ ಅಸಮಾನ ನೆಲೆಯು ಅವು ಒಂದು ಮುಷ್ಟಿಯಾಗಲು ಮತ್ತು ಅಳತೆ, ಗಾತ್ರದ ಬೇರೆ ಬೇರೆ ವಸ್ತುಗಳನ್ನು ಬಿಗಿಯಾಗಿ ಹಿಡಿದುಕೊಳ್ಳಲು ಅಗತ್ಯ. ನಮ್ಮ ಬೆರಳುಗಳು ಹೀಗಿರುವುದು, ನೂರಾರು ವರ್ಷಗಳ ಜೀವವಿಕಾಸದ ಫಲ ಎಂದು ಜೀವಶಾಸ್ತ್ರಜ್ಞರು ಹೇಳುತ್ತಾರೆ.
ಈಗ ಜನರೊಂದಿಗಿನ ನಮ್ಮ ಅನುಭವದ ವಿಷಯಕ್ಕೆ ಬರೋಣ.
ವಿದ್ಯಾರ್ಥಿಗಳಿರಲಿ, ಉದ್ಯೋಗಿಗಳಿರಲಿ, ನೆಂಟರಿಷ್ಟರಿರಲಿ, ಪ್ರವಾಸದ ಸಂಗಾತಿಗಳಿರಲಿ…ಆ ನಿರ್ದಿಷ್ಟ ಸಮುದಾಯದ ಎಲ್ಲರೂ ಒಂದೇ ಅಭಿರುಚಿ, ಒಂದೇ ಮಟ್ಟದ ಬುದ್ಧಿವಂತಿಕೆ, ಒಂದೇ ನೆಲೆಯ ಹೊಂದಾಣಿಕೆಯ ಸ್ವಭಾವ ಹೊಂದಿರಲ್ಲ ಅಲ್ಲವೆ? ಆದರೆ ಬಹುಶಃ ಬೇರೆ ಬೇರೆ ಸಾಮರ್ಥ್ಯ, ಅಭಿರುಚಿಗಳ ಈ ಜನರನ್ನು ಸೃಜನಶೀಲವಾಗಿ ಒಂದು ತಂಡವಾಗಿಸಿದರೆ, ಬಹುಶಃ ಅವರು ತಮ್ಮ ವೈವಿಧ್ಯಗಳನ್ನು ಐದು ಬೆರಳುಗಳು ಒಂದು ಮುಷ್ಟಿಯಾಗುವಂತೆ ಮೇಳೈಸಿ, ಫಲಿತಾಂಶವನ್ನು ಗರಿಷ್ಠವಾಗಿಸುತ್ತಾರೆ ಅನ್ನಿಸುತ್ತೆ. ಹೀಗಾಗಿ ನಾವು ಜನರಲ್ಲಿನ ವ್ಯತ್ಯಾಸಗಳನ್ನು ಸಂಭ್ರಮಾಚರಿಸಬೇಕೇ ಹೊರತು ಅದರ ಬಗ್ಗೆ ಕೋಪ, ಅಸಹನೆ ತೋರಿಸಬಾರದು. ಏನಂತೀರಿ?
Kannada proverb : Aidhu bellu onde samakke irthava? ( Are the five fingers equal and same?)
When we observe our hand we see that the five fingers are not the same, they are of different sizes and shapes. Biologists say that this difference is the basic reason for the good grip we have when we hold objects of different shapes and sizes.
This fact about our fingers provides us with a good life lesson. When we are dealing with different kind of groups like students, employees, our kith and kin and travelmates, we observe that they possess different physical, mental and emotional capacities. Instead of grumbling about this and expecting that everyone should be the same, we need to celebrate the differences and put them into creative use, just like nature has done with our fingers.
There is a lot we can learn from mother nature. Isn’t it?