ಕೋಪ ಬರದ ಮನುಷ್ಯರಿಲ್ಲ. ಮನಸ್ಸಿಗೆ ಇಷ್ಟವಾಗದ್ದು ನಡೆದರೆ, ಯಾರಾದರೂ ತೊಂದರೆ ಮಾಡಿದರೆ, ಬದುಕು ಅಸಹಾಯಕ ಪರಿಸ್ಥಿತಿಗೆ ಒಡ್ಡಿದರೆ ಮನುಷ್ಯರಿಗೆ ಕೋಪ ಬರುತ್ತದೆ. ಕೋಪ ಬರುವುದು ಅಸಹಜ ಅಲ್ಲ. ಆದರೆ ಕೋಪ ಬಂದಾಗ ಅದನ್ನು ಹೇಗೆ ನಿರ್ವಹಿಸುತ್ತೇವೆ ಅನ್ನುವುದು ಮುಖ್ಯ ವಿಷಯ. ಸುಮ್ಮನಿದ್ದು ಬಿಡುವುದೋ, ಆ ಜಾಗ ಬಿಟ್ಟು ಸ್ವಲ್ಪ ದೂರ ಹೋಗುವುದೋ, ದೀರ್ಘ ಉಸಿರುಗಳನ್ನು ತೆಗೆದುಕೊಳ್ಳುವುದೋ ಇಂಥವನ್ನು ಮಾಡಬೇಕು. ಅದು ಬಿಟ್ಟು ಕೋಪ, ಅದರಲ್ಲೂ ಕಡುಕೋಪ( ಅತಿ ಹೆಚ್ಚಿನ ಕೋಪ) ಬಂದರೆ ನಾವು ಪ್ರತಿಕ್ರಯಿಸಿದೆವು ಅಂದರೆ ಎದುರಿಗಿರುವ ವ್ಯಕ್ತಿಗೋ, ಅವರ ಭಾವನೆಗಳಿಗೋ ಅಥವಾ ಕೈಗೆ ಸಿಕ್ಕಿದ ವಸ್ತುವಿಗೋ ದೊಡ್ಡ ಹಾನಿ ಮಾಡುವ ಸಂಭವ ಇರುತ್ತದೆ. ಕೆಲವು ಹಾನಿಗಳಂತೂ ಸರಿಪಡಿಸಲು ಆಗದಂತಹ ಅಪಾಯ ಮಾಡಿಬಿಡುತ್ತವೆ. ಅದಕ್ಕಾಗಿಯೇ ಈ ಗಾದೆಮಾತು ಕಡುಕೋಪ ಬಂದರೆ ತಡಕೊಂಡವನೇ ಜಾಣ ಎಂಬ ವಿವೇಕವನ್ನು ಹೇಳಿಕೊಟ್ಟಿದೆ.
Kannada proverb – kadukopa bandaaga tadakondavane jaana( He is the wise one who can control himself when he gets terribly angry).
Anger is a natural emotion in human beings. When people around us or life treats us in clumsy ways we do get angry. It is alright and natural to experience anger. But how we deal with it is the question. If we harm others or things in our vicinity, the damage caused may be huge, sometimes irreversible too.This is the reason why we should control our anger, that too extreme anger. Taking deep breaths before responding, leaving the place, or just remaining silent are some healthy ways of controlling the anger. The proverb makes sense. Isn’t it?