ಮಟ್ಟು ಎಂದರೆ ಧಾಟಿ, ರೀತಿ ಎಂದು ಅರ್ಥ. ನಾವು ಯಾರೊಂದಿಗಾದರೂ ಸಂಭಾಷಣೆ ಮಾಡುವಾಗ ಅವರ ಮನ:ಸ್ಥಿತಿ, ಮಾತಿನ ಧಾಟಿ, ಸಮಯ ಸಂದರ್ಭ ಇವುಗಳನ್ನು ನೋಡಿಕೊಂಡು ಮಾತಾಡಬೇಕು. ಅವರು ನೇರವಾಗಿ, ಸರಳವಾಗಿ ಮಾತಾಡುತ್ತಿದ್ದಾರೆಯೊ ಇಲ್ಲವೆ ವ್ಯಂಗ್ಯದ ಧಾಟಿಯಲ್ಲಿ ಮಾತಾಡುತ್ತಿದ್ದಾರೆಯೊ ಎಂಬುದನ್ನು ಅರಿತು ಮಾತಾಡಬೇಕು. ಆಗ ಮಾತ್ರ ನಮ್ಮ ಮಾತಿಗೆ ಗೌರವ ಸಿಗುತ್ತದೆ. ಜನರೊಂದಿಗಿನ ಒಡನಾಟದಲ್ಲಿನ ಒಂದು ಸೂಕ್ಷ್ಮವನ್ನು ಈ ಗಾದೆಮಾತು ಚೆನ್ನಾಗಿ ಹೇಳಿದೆ. ಏನಂತೀರಿ?
Kannada proverb – Mattu thileedhe maathadabardu ( Do not speak without gauging the mood).
When we are speaking to others we need to gauge their mood and tone of their voice. Then we will be in a position to respond aptly. Otherwise we might speak things which will not be taken in the right spirit. Whether the speaker is speaking in a simple manner or he/she is sarcastic? We need to think before we speak. Nice advice by our ancestors. Isn’t it?