ನಾವು ಏನೇ ಕೆಲಸ ಮಾಡಿದರೂ, ಹೇಗೇ ಇದ್ದರೂ ನಮ್ಮ ಸುತ್ತಮುತ್ತ ಕೆಲವು ದೂರುವ ಜನರು ಇದ್ದೇ ಇರುತ್ತಾರೆ. ಇಂತಹವರು ನೆಂಟರಿಷ್ಟರ ಬಳಗದಲ್ಲಿ, ಸಹೋದ್ಯೋಗಿಗಳಲ್ಲಿ, ನಮ್ಮ ನೆರೆಹೊರೆಯಲ್ಲಿ – ಒಟ್ಟಿನಲ್ಲಿ ಎಲ್ಲ ಕಡೆಯೂ ಕಂಡು ಬರುತ್ತಾರೆ. ಮಳೆಹನಿಗಳಂತೆ ಇವರ ಕೊಂಕುಮಾತುಗಳು ತಟತಟ ಕೇಳುತ್ತಲೇ ಇರುತ್ತವೆ. ಅವರ ಬಾಯಿ ಮುಚ್ಚಿಸಲು ಆಗುವುದಿಲ್ಲ. ಆದರೆ ಒಂದು ಮುಖ್ಯ ವಿಷಯ ಇಲ್ಲಿದೆ. ಇಂತಹವರ ಮಾತುಗಳನ್ನು ಹೃದಯಕ್ಕೆ ಹಚ್ಚಿಕೊಂಡೆವೆಂದರೆ ಒಂದೇ ಒಂದು ಕೆಲಸವನ್ನೂ ಮಾಡಲಾಗುವುದಿಲ್ಲ. ಹೀಗಾಗಿ ಅವರ ಇರುವಿಕೆಯ ವಾಸ್ತವವನ್ನು ಒಪ್ಪಿಕೊಂಡೂ, ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ, ನಮ್ಮ ಕೆಲಸ ನಾವು ಮಾಡುತ್ತಾ ಹೋಗಬೇಕು.
Kannada proverb – Ooru baagilu muchchabahudu, dooruvavara bayi muchcokaguthye? ( You can close the main entance of a place, but can we close the mouths of people who comment all the time?).
We all have observed that wherever we go, whatever we do, there are people who complain. It may be our relatives, colleagues, neighbours…take any random group, there are people who keep talking negatively about what we did or what we did not do. If we take such comments to our heart, we can not take even one step. Therefore we do well to ignore such comments and continue to do what we believe in. That being said, it is true that, this proverb keeps us mentally prepared to face a very unsavory human situation.
Like us!
Follow us!